HEALTH TIPS

ಗ್ರಾಹಕರ ಕಣ್ಣಲ್ಲಿ ನೀರು: ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರದಿಂದ ಕ್ರಮ; ಆಮದು ಮೇಲಿನ ಷರತ್ತು ಸಡಿಲಿಕೆ

        ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕ್ರಮಕೈಗೊಂಡಿದ್ದು, ಈರುಳ್ಳಿ ಆಮದಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಮದಿನ ಮೇಲಿನ ನಿಬರ್ಂಧಗಳನ್ನು ಸಡಿಲಿಸಿದೆ.

       ಬುಧವಾರದಿಂದ ಫ್ಯುಮಿಗೇಷನ್ ಮತ್ತು ಹೆಚ್ಚುವರಿ ಫೈಟೋಸ್ಯಾನಟರಿ ಘೋಷಣಾ ಪ್ರಮಾಣಪತ್ರ ಸಲ್ಲಿಕೆ ಷರತ್ತುಗಳಿಂದ ಪ್ಲಾಂಟ್ ಕ್ವಾರಂಟೈನ್ ಆದೇಶ 2020ರ ಡಿಸೆಂಬರ್ 15ರ ವರೆಗೆ ಆಮದಿಗೆ ವಿನಾಯಿತಿ ನೀಡಿದೆ. ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಅವು ಆಯಾ ದೇಶಗಳ ವರ್ತಕರನ್ನು ಸಂಪರ್ಕಿಸಿ, ಭಾರತಕ್ಕೆ ಹೆಚ್ಚಿನ ಪ್ರಮಾಣದ ಈರುಳ್ಳಿ ಆಮದಿಗೆ ಉತ್ತೇಜನ ನೀಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

       ಭಾರತೀಯ ಬಂದರುಗಳಿಗೆ ಆಮದಾಗುವ ಈರುಳ್ಳಿ ಕನ್ಸೈನ್ ಮೆಂಟ್ ಗಳಿಗೆ- ಯಾವುದೇ ಫುಮಿಗೇಷನ್ ಮತ್ತು ಸ್ವೀಕೃತಿ ಬೇಕಾಗಿಲ್ಲ. ಪ್ರಮಾಣೀಕೃತ ಸಂಸ್ಕರಣಾದಾರರಿಂದ ಭಾರತವೇ ಅದರ ಫ್ಯುಮಿಗೇಷನ್ ಮಾಡಿಸಲಿದೆ. ಅದರ ಕಾಂಡ ಮತ್ತು ಬಳ್ಳಿ (ಡಿಟಿಲೆಂಚಸ್ ಡಿಪ್ಪಾಸಿ) ಅಥವಾ ಈರುಳ್ಳಿ ಮ್ಯಾಗಟ್ (ಹಿಲಿಮಿಯ ಆಂಟಿಕ್ವಾ)ಗಳನ್ನು ಫ್ಯುಮುಗೇಷನ್ ಮೂಲಕ ಪತ್ತೆ ಹಚ್ಚಿ ತೆಗೆದುಹಾಕಲಾಗುವುದು ಮತ್ತು ಕನ್ಸೈನ್ ಮೆಂಟ್ ಗಳನ್ನು ಹೆಚ್ಚುವರಿ ತಪಾಸಣಾ ಶುಲ್ಕವಿಲ್ಲದೆ ಬಿಡುಗಡೆ ಗೊಳಿಸಲಾಗುವುದು.

       ಆಮದುದಾರರಿಂದ ಈರುಳ್ಳಿಯನ್ನು ಕೇವಲ ಬಳಕೆಗಾಗಿ ಉಪಯೋಗಿಸಲಾಗುವುದು ಮತ್ತು ಬೀಜಗಳಾಗಿ ಬಳಸುವುದಿಲ್ಲ ಎಂದು ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗುವುದು. ಅಂತಹ ಈರುಳ್ಳಿ ಕನ್ಸೈನ್ ಮೆಂಟ್ ಗಳಿಗೆ ಪಿಕ್ಯೂ ಆದೇಶ 2003ರ ಅನ್ವಯ ಆಮದು ನಿಬಂಧನೆಗೆ ಒಳಪಟ್ಟಂತೆ ನಾಲ್ಕು ಪಟ್ಟು ಹೆಚ್ಚುವರಿ ತಪಾಸಣಾ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries