ಕಾಸರಗೋಡು: ಗಂಭೀರ ರೂಪದ ಕೋವಿಡ್ ಸೋಂಕು ಬಧಿತರ ನಿರಂತರ ಚಿಕಿತ್ಸೆಗಾಗಿ ಕಾಸರಗೊಡು ಜನರಲ್ ಆಸ್ಪತ್ರೆಯಲ್ಲಿ "ಪೋಸ್ಟ್ ಕೋವಿಡ್ ಕ್ಲಿನಿಕ್" ಆರಂಭಿಸಲಾಗಿದೆ.
ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜಾರಾಮ ಕ್ಲಿನಿಕ್ ಉದ್ಘಾಟಿಸಿದರು. ಸೋಮ, ಬುಧ, ಶುಕ್ರವಾರಗಳಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಇಲ್ಲಿ ತಪಾಸಣೆ ನಡೆಯಲಿದೆ. ಆಸ್ಪತ್ರೆಯ ಜನರಲ್ ಮೆಡಿಸಿನ್ ಕನ್ಸಲ್ಟೆಂಟ್ ಗಳಾದ ಡಾ.ಎ.ಂ.ಕುಂuಟಿಜeಜಿiಟಿeಜರಾಮನ್, ಡಾ.ಎಂ.ಕೃಷ್ಣ ನಾಯಕ್, ಡಾ.ಸಿ.ಎಚ್. ಜನಾರ್ದನ ನಾಯಕ್ ತಪಾಸಣೆ ನಡೆಸುವರು.
ಗಂಭೀರ ಸ್ವರೂಪದ ಕೋವಿಡ್ 19 ರೋಗ ಬಾಧಿಸಿ ಸಿ ಕ್ಯಾಟಗರಿ ಆಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸತತ ಚಿಕಿತ್ಸೆಗಾಗಿ ಪೋಸ್ಟ್ ಕೋವಿಡ್ ಕ್ಲಿನಿಕ್ ಚಟುವಟಿಕೆ ನಡೆಸುತ್ತಿದೆ. ತಪಾಸಣೆಗೆ ಆಗಮಿಸುವವರು ಡಿಸ್ ಚಾರ್ಜ್ ಕಾರ್ಡ್ ತರಬೇಕು. ಜೊತೆಗೆ ರೋಗ ಬಾಧೆಯಿಂದ ಗುಣಮುಖರಾದ ಆರೋಗ್ಯ ಕಾರ್ಯಕರ್ತರ ತಪಾಸಣೆಯೂ ನಡೆಯಲಿದೆ. ಸಂಶೋಧನೆಗಳಿಗಾಗಿ ಕ್ಲಿನಿಕ್ ನಲ್ಲಿ ಡಾಟಾ ಎಂಟ್ರಿ ಆಪರೇಟರ್ ನ್ನು ನಂತರ ನೇಮಕಗೊಳಿಸಲಾಗುವುದು ಎಂದು ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜಾರಾಮ ತಿಳಿಸಿದರು.
ರಾಜ್ಯದಲ್ಲಿ ಈ ವರೆಗೆ ವಯನಾಡ್ ಜಿಲ್ಲೆಯಲ್ಲಿ ಮಾತ್ರ ಪೋಸ್ಟ್ ಕೋವಿಡ್ ಕ್ಲಿನಿಕ್ ಇತ್ತು. ಕಾಸರಗೋಡು ಜಿಲ್ಲೆಯ ಎರಡನೇ ಕ್ಲಿನಿಕ್ ಈ ಮೂಲಕ ಜನರಲ್ ಅಸ್ಪತ್ರೆಯಲ್ಲಿ ಆರಂಭಗೊಂಡಿದೆ. ಜಿಲ್ಲೆಯ ಎಲ್ಲ ಬ್ಲೋಕ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪೆÇೀಸ್ಟ್ ಕೋವಿಡ್ ಕ್ಲಿನಿಕ್ ಆರಂಭಿಸಲು ಆರೋಗ್ಯ ಇಲಾಖೆ ಉದ್ದೇಶಿಸಿದೆ.