ತಿರುವನಂತಪುರ: ರಾಜ್ಯದಲ್ಲಿ ಜನಸಮೂಹ ಕೋವಿಡ್ ನಿಯಂತ್ರಣಗಳನ್ನು ಉಲ್ಲಂಘಿಸಿದ ಪರಿಣಾಮ ಈಗ ಅನುಭವಿಸುತ್ತಿರುವ ತೀವ್ರ ಸೋಂಕಿನ ಕಳವಳಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಭಾನುವಾರ ಹೇಳಿದ್ದಾರೆ. ಸಾವಿನ ಸಂಖ್ಯೆಯನ್ನು ಆದಷ್ಟು ಕಡಿಮೆ ಮಾಡುವುದಷ್ಟೆ ಪ್ರಸ್ತುತ ಲಕ್ಷ್ಯವಾಗಿದೆ ಎಂದು ಸಚಿವೆ ಹೇಳಿದರು. ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಕೆಲವರು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕೆ.ಕೆ.ಶೈಲಜಾ ತಿಳಿಸಿದರು.
ಕೋವಿಡ್ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ನಿಯಂತ್ರಣಗಳ ಹೊರತಾಗಿಯೂ, ಕೇರಳವು ಈಗ ಅನೇಕ ಸ್ಥಳಗಳಲ್ಲಿ ತೀವ್ರ ಸೋಂಕಿನ ಭೀತಿಯಲ್ಲಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕೋವಿಡ್ ಪ್ರಮಾಣ ತೀವ್ರಗೊಂಡಿತು ಎಂಬ ಕೆಲವರ ಆರೋಪ ಆಧಾರ ರಹಿತವಾಗಿದ್ದು, ಆರೋಗ್ಯ ಇಲಾಖೆಯ ನಿರಂತರ ಶ್ರಮದಿಂದ ಈ ಮಟ್ಟವನ್ನಾದರೂ ಕಾಯ್ದುಕೊಳ್ಳಲು ಸಾಧ್ಯವಾಯಿತೆಂದು ಸಚಿವೆ ಬೊಟ್ಟುಮಾಡಿದರು.
ನ್ಯೂನತೆಗಳಿದ್ದಾಗ ಅವುಗಳನ್ನು ಗಂಭೀರವಾಗಿ ಇಲಾಖಾ ಮಟ್ಟದಲ್ಲೇ ಚರ್ಚಿಸಿ ಪರಿಹರಿಸಲಾಗುತ್ತದೆ ಎಂದು ಅವರು ಹೇಳಿದರು. ವಾಳಯಾರ್ ಪ್ರಕರಣದಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶಿಸಿದ್ದು, ಅವರಿಗೆ ನ್ಯಾಯ ದೊರಕಿಸಲು ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದೆ ಎಂದು ಕೆ.ಕೆ.ಶೈಲಜಾ ಹೇಳಿದರು.