ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಗೆ ಪ್ರಸ್ತುತ ಉದ್ಬವಿಸಿರುವ ಅನಾರೋಗ್ಯವು ಸುಳ್ಳಿನಿಂದ ಕೂಡಿದೆ ಎಂದು ಕಸ್ಟಮ್ಸ್ ಹೇಳಿದೆ. ಶಿವಶಂಕರ್ ಗೆ ತೀವ್ರತರವಾದ ಯಾವುದೇ ಅನಾರೋಗ್ಯಗಳಿಲ್ಲ. ಪೂರ್ವ ನಿಗದಿತಂತೆ ಪ್ರಾಥಮಿಕ ಚಿಕಿತ್ಸೆಗಳಷ್ಟನ್ನೇ ಆಸ್ಪತ್ರೆಯಲ್ಲಿ ಪಡೆಯಬೇಕೆಂದು ಸಂಸ್ಥೆ ತಿಳಿಸಿದೆ.
ಕಸ್ಟಮ್ಸ್ ಹೈಕೋರ್ಟ್ ನಲ್ಲಿ ಈ ಬಗ್ಗೆ ಅಫಿಡವಿಟ್ ಸಲ್ಲಿಸಿದೆ. ಶಿವಶಂಕರ್ ಅವರಿಗೆ ಬೆನ್ನು ನೋವು ಮಾತ್ರ ಇದ್ದು, ಅವರು ಔಷಧಿ ತೆಗೆದುಕೊಂಡರೆ ವಾಸಿಯಾಗಬಹುದು. ಮತ್ತು ನಿರೀಕ್ಷಿತ ಜಾಮೀನು ಅರ್ಜಿ ಅಗತ್ಯವಿಲ್ಲ ಎಂದು ಕಸ್ಟಮ್ಸ್ ಹೈಕೋರ್ಟ್‍ನಲ್ಲಿ ವಾದಿಸಿದೆ.
ತನಿಖೆಯಿಂದ ನುಣುಚಿಕೊಳ್ಳಲು ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತೋರಿಸಲಾಯಿತು. ಈಗಾಗಲೇ ಆತನನ್ನು ಬಂಧಿಸಲಾಗಿದ್ದು, ಪತ್ನಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲೇ ಅವರು ಮೊದಲು ದಾಖಲಾದರು ಎಂದು ಕಸ್ಟಮ್ಸ್ ತಿಳಿಸಿದೆ. ಇತರ ಆಸ್ಪತ್ರೆಗೆ ಹೋಗಲೊಪ್ಪದೆ ಪತ್ನಿ ಇರುವ ಆಸ್ಪತ್ರೆಗೇ ದಾಖಲಿಸಲು ಹಠಮಾಡಿರುವರು ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಪ್ರಕರಣ ಪೂರ್ವ ಜಾಮೀನು ಹೈಕೋರ್ಟ್‍ಗೆ ಕಾನೂನುಬದ್ಧವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ವಿಚಾರಣೆಗಾಗಿ ಕಸ್ಟಮ್ಸ್ ಕಚೇರಿಗೆ ಕರೆತಂದ ಬಳಿಕ ಶಿವಶಂಕರ್ ಅವರನ್ನು ತಿರುವನಂತಪುರದ ಕರಮಣದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಗ್ರಾಮ್ ನಡೆಸಲಾಗಿದ್ದು ಯಾವುದೇ ಹೃದಯ ಸಮಸ್ಯೆಗಳಿರುವ ಬಗ್ಗೆ ಕಂಡುಬಂದಿಲ್ಲ. ಪರೀಕ್ಷೆಯಲ್ಲಿ ಡಿಸ್ಕ್ ಸಮಸ್ಯೆಯೊಂದು ಇರುವುದು ತಿಳಿದುಬಂದಿದೆ ಎಮದು ಕಸ್ಟಮ್ಸ್ ಬೊಟ್ಟುಮಾಡಿದೆ.