HEALTH TIPS

ಜಿಲ್ಲಾಧಿಕಾರಿ ಅವರ ಹೆಸರಲ್ಲಿ ಹುಸಿ ಈ-ಮೇಲ್ ಸಂದೇಶ ರವಾನೆ

       ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಅವರ ಹೆಸರಲ್ಲಿ ಹುಸಿ ಈ-ಮೇಲ್ ಸಂದೇಶವೊಂದು ಹರಡುತ್ತಿದೆ. ಈ ಬಗ್ಗೆ ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು. ಯಾರೂ ಮೋಸ ಹೋಗಕೂಡದು ಎಂದು ಅವರು ತಿಳಿಸಿದ್ದಾರೆ.

      ತಲಾ 5 ಸಾವಿರ ರೂ. ಮೌಲ್ಯದ 4 ಅಮೆಝೋನ್ ಈ-ಕಾರ್ಡ್ ಖರೀದಿಸಿರಿ jamsteh08@gmail.com  ಎಂಬ ಈ-ಮೇಲ್ ಗೆ ಜಿಲ್ಲಾಧಿಕಾರಿ ಅವರ ಹೆಸರಲ್ಲಿ ರವಾನಿಸುವಂತೆ ಹುಸಿ ಸಂದೇಶವೊಂದು ಜಿಲ್ಲಾ ಇಲಾಖೆ ಮುಖ್ಯಸ್ಥರಿಗೆ ಲಭಿಸಿದೆ. ಜಿಲ್ಲಾಧಿಕಾರಿ ಅವರು ತಮ್ಮ ಸ್ವಂತ ಐಪ್ಯಾಡ್ ನಿಂದ ಈ ಸಂದೇಶ ರವಾನಿಸುತ್ತಿದ್ದಾರೆ ಎಂಬ ರೀತಿಯ ಸಂದೇಶ ಇಲ್ಲಿ ರವಾನೆಗೊಂಡಿದೆ. executivedirector29@gmail.com ಎಂಬ ಈ-ಮೇಲ್ ನಿಂದ ಈ ಹುಸಿ ಸಂದೇಶ ರವಾನೆಯಾಗಿದೆ. ಇದು ಹುಸಿ ಎಂಬುದು ತನಿಖೆಯಿಂದ ಖಚಿತಗೊಂಡಿದೆ. ಈ ಬಗ್ಗೆ ಜಾಗ್ರತೆ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿರುವರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries