ಕಾಸರಗೋಡು: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಎಂಟನೇ ತರಗತಿಯ ಹುಡುಗಿಯ ಹಾಡನ್ನು ತಮ್ಮ ಫೇಸ್‍ಬುಕ್ ಪುಟದಲ್ಲಿ ಪೆÇೀಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಏನಿದೆ ವಿಶೇಷ ಅಂತೀರಾ.ಅದು ವಿಶೇಷ ಮಾತ್ರ ಅಲ್ಲ. ಎಲ್ಲಿಯ ಋಣ ಎಂದರೂ ತಪ್ಪಲ್ಲ. ಕಾರಣ ಅವರು ಪೋಸ್ಟ್ ಮಾಡಿರುವುದು ಕಾಸರಗೋಡಿನ ವಿದ್ಯಾರ್ಥಿನಿಯೊಬ್ಬಳ ಹಾಡನ್ನು!
'ಏಕ್ ಭಾರತ್ ಶ್ರೇಷ್ಠ ಭಾರತ್' ಅಭಿಯಾನದ ಅಂಗವಾಗಿ ಕಾಸರಗೋಡಿನ ವಿದ್ಯಾನಗರ ಕೇಂದ್ರೀಯ ವಿದ್ಯಾಲಯ -2 ರ ವಿದ್ಯಾರ್ಥಿನಿ ಹರಿನಂದ ಹಾಡಿದ ಹಿಮಾಚಲಿ ಹಾಡನ್ನು ಮುಖ್ಯಮಂತ್ರಿ ಹಂಚಿಕೊಂಡರು. " ಮಗಳು ಹರಿನಂದಳ ಉಜ್ವಲ ಭವಿಷ್ಯಕ್ಕಾಗಿ ದೇವರ ನಾಡಾದ ಹಿಮಾಚಲ ಪ್ರದೇಶದ ಶುಭಾಶಯಗಳು" ಎಂದು ಅವರು ಫೇಸ್‍ಬುಕ್‍ನ ಅಭಿನಂದನಾ ಸಂದೇಶದಲ್ಲಿ ಬರೆದಿದ್ದಾರೆ.
ವಿದ್ಯಾನಗರ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ದೀಪಿಕಾ ಠಾಕೂರ್ ಅವರು 'ಅಮ್ಮ ಪುಚಿ' ಹಾಡನ್ನು ಕಲಿಸಿದ್ದರು. ಪುಟ್ಟ ಹುಡುಗಿ ಶಾಲೆಯಲ್ಲಿ ಸರಳ ಗಾಯನ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆಲ್ಲುವವಳಾಗಿದ್ದು ಏತನ್ಮಧ್ಯೆ, 'ಏಕ್ ಭಾರತ್ ಶ್ರೇಷ್ಠ ಭಾರತ್' ಪರಿಕಲ್ಪನೆಯ ಭಾಗವಾಗಿ ಹಿಮಾಚಲಿ ಪಹದಿ ಜಾನಪದ ಗೀತೆಗಳನ್ನು ಹಾಡಿದ ಪಟ್ಟೋಮ್ ಕೇಂದ್ರೀಯ ವಿದ್ಯಾಲಯದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ದೇವಿಕಾ ಅವರ ವಿಡಿಯೋವನ್ನೂ ಸಿಎಂ ತಮ್ಮ ಎಫ್‍ಬಿ ಪೆÇ್ರಫೈಲ್ ಮೂಲಕ ಹಂಚಿಕೊಂಡಿದ್ದಾರೆ.
ಇದು ಹಿಮಾಚಲದಲ್ಲಿ ದಶಕಗಳಿಂದ ಜನಪ್ರಿಯವಾಗಿರುವ ಹಾಡು. ಈ ಹಾಡನ್ನು ಮೋಹಿತ್ ಚೌಹಾನ್ ಸೇರಿದಂತೆ ಹಲವು ತಲೆಮಾರುಗಳ ಗಾಯಕರು ಹಾಡಿದ್ದರೂ, ಈ ಹಾಡನ್ನು ಮೊದಲ ಬಾರಿಗೆ ಆಲ್ ಇಂಡಿಯಾ ರೇಡಿಯೋ ಶಿಮ್ಲಾದಲ್ಲಿ 1970 ರ ದಶಕದಲ್ಲಿ ಹಿಮಾಚಲ ಗಾಯಕ ಪುಷ್ಪಲತಾ ಹಾಡಿದರು. ಹರಿನಂದ ಅವರು ಪಯ್ಯನ್ನೂರ್ ಕಂಕೋಲ್‍ನ ಶಿಕ್ಷಕ ದಂಪತಿಗಳಾದ ಜಗದೀಶ್ ಮತ್ತು ರೇಖಾ ದಂಪತಿಗಳ ಪುತ್ರಿ. ಇವಳ ಸಹೋದರ ನವಜ್ಯೋತ್ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆoಡರಿ ಶಾಲೆಯ ವಿದ್ಯಾರ್ಥಿ.