ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ನಾಟಕೀಯ ಬೆಳವಣಿಗೆಯೊಂದರಲ್ಲಿ ಐಎಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದಿಂದಾಗಿ ಅವರನ್ನು ತಿರುವನಂತಪುರÀ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ನಿರಂತರ ವಿಚಾರಣೆ ಮತ್ತು ಬಂಧನ ಭೀತಿಯ ಗೊಂದಲದಿಂದಾಗಿ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಅವರು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿದ್ದಾರೆ. ಶಿವಶಂಕರ್ ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 6 ಗಂಟೆಗೆ ತಿರುವನಂತಪುರದ ಕಸ್ಟಮ್ಸ್ ಕಚೇರಿಯಲ್ಲಿ ಹಾಜರಾಗುವಂತೆ ಕಸ್ಟಮ್ಸ್ ನಿಂದ ನೋಟಿಸ್ ಬಂದಿತ್ತು. ಇದರ ಬೆನ್ನಿಗೇ ಅವರು ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ. ಶಿವಶಂಕರ್ ದಾಖಲಾದ ಆಸ್ಪತ್ರೆಗೆ ಪೆÇಲೀಸರು ತಲುಪಿದ್ದಾರೆ. ಅ.23 ರವರೆಗೆ ಶಿವಶಂಕರ್ ಅವರನ್ನು ಬಂಧಿಸಬಾರದು ಎಂದು ನ್ಯಾಯಾಲಯ ಗುರುವಾರ ಆದೇಶಿಸಿತ್ತು. ಜೊತೆಗೆ ಗುರುವಾರ ಶಿವಶಂಕರ್ ಅವರನ್ನು ಮೂರನೇ ಬಾರಿಗೆ ಜಾರಿ ನಿರ್ದೇಶನಾಲಯ ಪ್ರಶ್ನಿಸಿತ್ತು.