ಕಾಸರಗೋಡು : ಜಿಲ್ಲಾ ಪಂಚಾಯತ್ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಜಾರಿಗೊಳಿಸುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಲಿಕೆಗೆ ಆರ್ಥಿಕ ಸಹಾಯ ಯೋಜನೆಗಾಗಿ ಅರ್ಜಿ ಕೋರಲಾಗಿದೆ. ಮೆಡಿಕಲ್, ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ, ಪಾಲಿಟೆಕ್ನಿಕ್, ಇತರ ಸರಕಾರಿ ಅಂಗೀಕೃತ ರೆಗ್ಯುಲರ್ ಕೋರ್ಸ್, ರಾಜ್ಯದಿಂದ ಹೊರಗಿನ ಅಂಗೀಕೃತ ವಿವಿಗಳ ತರಬೇತಿಗಳಲ್ಲಿ ಕಲಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ದಾರರು ಗ್ರಾಮಸಭೆ, ಊರುಕೂಟ ಸಂಗೀಕರಿಸಿರುವ ಪಟ್ಟಿಯಲ್ಲಿ ಸೇರಿದವರಾಗಿರಬೇಕು. ಜಾತಿ, ಆದಾಯ ಅರ್ಟಿಫಿಕೆಟ್, ಕಲಿಯುವ ಸಂಸ್ಥೆಗಳ ಮುಖ್ಯಸ್ಥರ ದೃಡೀಕರಣ ಪತ್ರ, ಪಂಚಾಯತ್, ಬ್ಲೋಕ್ ಮಟ್ಟದಲ್ಲಿ ಈ ಅಗತ್ಯಕ್ಕಾಗಿ ಮೊಬಲಗು ನೀಡಿಲ್ಲ ಎಂಬ ದೃಡೀಕರಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ನಕಲುಗಳು ಇತ್ಯಾದಿಗಳೊಂದಿಗೆ ಟ್ರೈಬಲ್ ಡೆವೆಲಪ್ ಮೆಂಟ್ ಆಫೀಸ್ ಗೆ ಅ.15ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗಾಗಿ ದೂರವಾಣಿ ನಂಬ್ರ: 04994-255466.