HEALTH TIPS

ವಾಟ್ಸಾಪ್‌ನಲ್ಲಿನ ಹೊಸ ವೈಶಿಷ್ಟ್ಯ, ಈಗ ಅನಗತ್ಯ ಮೆಸೇಜ್‌ಗಳಿಗೆ ಹೇಳಿ ಗುಡ್ ಬೈ

      ನವದೆಹಲಿ: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಬಹುತೇಕ ಜನರ ಜೀವನದ ಪ್ರಮುಖ ಭಾಗವಾಗಿದೆ. ವೈಯಕ್ತಿಕ ಜೀವನದಿಂದ ಹಿಡಿದು ಕಚೇರಿ ಕೆಲಸಗಳವರೆಗೆ ಈಗ ವಾಟ್ಸಾಪ್‌ನಲ್ಲಿ ಹೆಚ್ಚು ಹೆಚ್ಚು ಸಂದೇಶಗಳು ಬರುತ್ತಿವೆ. ಹಲವೊಮ್ಮೆ ನಿಮಗೆ ಅನಗತ್ಯವೆನಿಸುವ ಅಥವಾ ನಿಮಗೆ ಇಷ್ಟವಿಲ್ಲದ ಹಲವು ಗ್ರೂಪ್ ಗಳಲ್ಲಿ ನಿಮ್ಮನ್ನು ಸೇರಿಸಲಾಗಿರುತ್ತದೆ.  ಹಲವು ವೇಳೆ ಇಂತಹ ಗ್ರೂಪ್ ಗಳಲ್ಲಿ ಬರುವ ಸಾಲು ಸಾಲು ಸಂದೇಶಗಳ ಅಧಿಸೂಚನೆಗಳಿಂದ ಸಹ ಅನಗತ್ಯವಾಗಿ ತೊಂದರೆಗೊಳಗಾಗುತ್ತಲೇ ಇರುತ್ತೇವೆ. ಆದರೆ ಈಗ ವಾಟ್ಸಾಪ್‌  ನಲ್ಲಿ ಒಂದು ವೈಶಿಷ್ಟ್ಯ ಬಂದಿದ್ದು ಅದು ನಿಮಗೆ ಈ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ನೀಡುತ್ತದೆ.

             ಶಾಶ್ವತವಾಗಿ ಮ್ಯೂಟ್ ಆಯ್ಕೆ:
     ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಅಂತಿಮವಾಗಿ ವಿಶ್ವದಾದ್ಯಂತದ ಬಳಕೆದಾರರಿಗಾಗಿ ಮ್ಯೂಟ್ ಫಾರೆವರ್ (Mute Forever) ಆಯ್ಕೆಯನ್ನು ನವೀಕರಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಈ ವೈಶಿಷ್ಟ್ಯದ ಪರಿಚಯದ ಪ್ರಕಟಣೆಯನ್ನು ವಾಟ್ಸಾಪ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ಈ ಹೊಸ ವೈಶಿಷ್ಟ್ಯವು ವೆಬ್ ಆವೃತ್ತಿಯ ವಾಟ್ಸಾಪ್‌ನಲ್ಲಿ ಸಹ ಲಭ್ಯವಾಗಲಿದೆ ಎಂದು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಖಚಿತಪಡಿಸಿದೆ.

       ವಾಸ್ತವವಾಗಿ, ನೀವು ವಾಟ್ಸಾಪ್ ಗುಂಪಿನ ಚಾಟ್‌ಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡಲು ಬಯಸದಿದ್ದರೆ ಕೆಲವು ದಿನಗಳವರೆಗೆ ಅದನ್ನು ಮ್ಯೂಟ್ ಮಾಡುವ ಆಯ್ಕೆ ಇತ್ತು. ಕೆಲವು ಗಂಟೆಗಳ, ವಾರ ಅಥವಾ ಒಂದು ವರ್ಷದವರೆಗೆ ಚಾಟ್ ಮ್ಯೂಟ್ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಈಗ 1 ವರ್ಷ ಮ್ಯೂಟ್ ಚಾಟ್ ಮಾಡುವ ಆಯ್ಕೆಯನ್ನು ಶಾಶ್ವತವಾಗಿ ತೆಗೆದುಹಾಕಲಾಗಿದೆ. ಹೊಸ ಮ್ಯೂಟ್ ಆಯ್ಕೆಯ ಆಗಮನವು ಕೆಲವು ಚಾಟ್‌ಗಳನ್ನು ಅನ್‌ಮ್ಯೂಟ್ ಮಾಡಲು ಎಂದಿಗೂ ಬಯಸದ ಬಳಕೆದಾರರಿಗೆ ಪರಿಹಾರ ನೀಡುತ್ತದೆ. ಹೊಸ ಮ್ಯೂಟ್ ವೈಶಿಷ್ಟ್ಯವನ್ನು ಒಟಿಎ ನವೀಕರಣದ ಮೂಲಕ ಹೊರತರಲಾಗುವುದು.

                 ವಾಟ್ಸಾಪ್ ಅನ್ನು ಹೇಗೆ ನವೀಕರಿಸುವುದು?

      ವಾಟ್ಸಾಪ್ ನವೀಕರಿಸಲು ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ನೀವು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಬೇಕಾಗುತ್ತದೆ. ಐಫೋನ್‌ಗಳಲ್ಲಿ ಆಪ್ ಸ್ಟೋರ್‌ನಿಂದಲೇ ನವೀಕರಿಸಿ. ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ನವೀಕರಿಸುವ ಮೊದಲು ನಿಮ್ಮ ಸಾಧನವನ್ನು ಸ್ಥಿರ ವೈಫೈ ಸಂಪರ್ಕದೊಂದಿಗೆ ಸಂಪರ್ಕಿಸಲು ಮರೆಯದಿರಿ. ನವೀಕರಿಸಿದ ನಂತರ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಮ್ಯೂಟ್ ಆಯ್ಕೆಯ ಅಡಿಯಲ್ಲಿರುವ ಪಟ್ಟಿಯಲ್ಲಿ 'ಮ್ಯೂಟ್ ಫಾರೆವರ್' ('Mute Forever') ವೈಶಿಷ್ಟ್ಯವನ್ನು ನೀವು ಕಾಣಬಹುದು. ನಿರ್ದಿಷ್ಟ ಚಾಟ್ ಅನ್ನು ಶಾಶ್ವತವಾಗಿ ಮ್ಯೂಟ್ ಮಾಡುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ  ಅನಗತ್ಯ ಮೆಸೇಜ್‌ಗಳಿಗೆ ಗುಡ್ ಬೈ ಹೇಳಬಹುದಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries