HEALTH TIPS

ಶುಚಿತ್ವ ಎಂಬುದು ಅಭಿವೃದ್ಧಿಯ ಗುಣಮಟ್ಟ ಅಳೆಯುವ ಪ್ರಧಾನ ಮಾನದಂಡ: ಮುಖ್ಯಮಂತ್ರಿ

        ಕಾಸರಗೋಡು: ಶುಚಿತ್ವ ಎಂಬುದು ಅಭಿವೃದ್ಧಿಯ ಗುಣಮಟ್ಟ ಅಳೆಯುವ ಪ್ರಧಾನ ಮಾನದಂಡವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು.

      ತ್ಯಾಜ್ಯ ಸಂಸ್ಕರಣದಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ರಾಜ್ಯದ 589 ಸ್ಥಳೀಯಾಡಳಿತ ಸಂಸ್ಥೆಗಳ ಶುಚಿತ್ವ ಪದವಿ ಘೋಷಣೆ ಯನ್ನು ಶನಿವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆಸಿ ಅವರು ಮಾತನಾಡಿದರು.  

       ಮೂಗು ಮುಚ್ಚಿಕೊಂಡು ನಡೆಯಬೇಕಾದ ದುಸ್ಥಿತಿ ಬರುವುದು ಅಭಿವೃದ್ಧಿಗೆ ತಗುಲುವ ಬಲುದೊಡ್ಡ ಆಘಾತ. ರಾಜ್ಯದ ಪ್ರಜೆಗಳು ವ್ಯಕ್ತಿಗತ ಶುಚಿತ್ವಕ್ಕೆ ಬಹಳ ಮಹತ್ವ ನೀಡುವವರು. ಇದೇ ವೇಳೆ ಬದುಕುತ್ತಿರುವ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಬೀಳುತ್ತಿರುವುದು ಪ್ರಧಾನ ಸಮಸ್ಯೆಯಾಗಿದೆ. ನಾಡಿನ ಶುಚಿತ್ವ ಖಚಿತಪಡಿಸುವ, ಎಲ್ಲ ಪ್ರದೇಶಗಳನ್ನು ಸ್ವಚ್ಛವಾಗಿರಿಸುವ ಇತ್ಯಾದಿಗಳಿಗೆ ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ. ಇದಕ್ಕೆ ಸ್ಥಲೀಯಾಡಳಿತ ಸಂಸ್ಥೇಗಳ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜಾರಿಗೊಳ್ಳುತ್ತಿದೆ. ಈ ಸಂಬಮಧ ಚಟುವಟಿಕೆಗಳನ್ನು ಹರಿತ ಕೇರಳಂ ಇಷನ್ ರೂಪುರೇಷೆಗೊಳಿಸಿದೆ. ನವಕೇರಳ ಕ್ರಿಯಾಯೋಜನೆ ಮೂಲಕ ಅತಿ ಪ್ರಧಾನ ಹೊಣೆಗಾರಿಕೆಯನ್ನು ಮಿಷನ್ ಮೂಲಕ ಜಾರಿಗೊಳಿಸಲು ಯತ್ನಿಸಲಾಗಿದೆ ಎಂದವರು ತಿಳಿಸಿದರು. 

          ಯೋಜನೆಯ ಲಕ್ಷ್ಯ 250, ಜಾರಿಗೊಂಡದ್ದು ದ್ವಿಗುಣಕ್ಕಿಂತಲೂ ಅಧಿಕ! 

     ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾ ಯೋಜನೆ ಅಂಗವಾಗಿ ರಾಜ್ಯದ 250 ಸ್ಥಳೀಯಾಡಳಿತ ಸಂಸ್ಥೆಗಳನ್ನು ಮೊದಲ ಹಂತದಲ್ಲಿ ಶುಚಿತ್ವ ಪದವಿಗೇರಿಸುವ ಉದ್ದೇಶವನ್ನು ಇರಿಸಲಾಗಿತ್ತು. ಆದರೆ ಯೋಜನೆಗೆ ಭಾರೀ ಬೆಂಬಲ , ಸಹಭಾಗಿತ್ವ ಲಭಿಸಿದ ಹಿನ್ನೆಲೆಯಲ್ಲಿ ನಿಗದಿ ಪಡಿಸಿದ್ದ ಗಣನೆಗಿಂತ ದ್ವಿಗುಣಿಗಿಂತಲೂ ಹೆಚ್ಚು ಸ್ಥಲೀಯಾಡಳಿತ ಸಂಸ್ಥೇಗಳು ಶುಚಿತ್ವ ಪದವಿಗೇರಿವೆ. 501 ಗ್ರಾಮ ಪಂಚಾಯತ್ ಗಳು, 58 ನಗರಸಭೆಗಳು, 30 ಬ್ಲೋಕ್ ಪಂಚಾಯತ್ ಗಳು ಮೊದಲಕ ಹಂತದಲ್ಲೇ ಶುಚಿತ್ವ ಪದವಿ ಪಡೆದಿವೆ. ಈ ತಿಂಗಳಲ್ಲೇ ಇನ್ನಷ್ಟು ಸ್ಥಳೀಯಾಡಳಿತ ಸಂಸ್ಥೆಗಳು ಈ ಮಟ್ಟಕ್ಕೇರಲಿವೆ ಎಂದವರು ತಿಳಿಸಿದರು.

          ಘನ ತ್ಯಾಜ್ಯ ಸಂಸ್ಕರಣೆಯಲ್ಲಿ ಕೇರಳ ಮಾದರಿಯನ್ನು ಇನ್ನಷ್ಟು ವಿಕಸಿತಗೊಳಿಸಲಾಗುವುದು: ಕಂದಾಯ ಸಚಿವ: 

     ಘನ ತ್ಯಾಜ್ಯ ಸಂಸ್ಕರಣೆಯಲ್ಲಿ ಕೇರಳ ಮಾದರಿಯನ್ನು ಇನ್ನಷ್ಟು ವಿಕಸಿತಗೊಳಿಸಲಾಗುವುದು ಎಂದು  ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.  

     ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.    ನಗರಗಳ ಘನ ತ್ಯಾಜ್ಯ ಸಂಸ್ಕರಣೆಗಾಗಿ ವಿಶ್ವಬ್ಯಾಂಕ್ ನೊಂದಿಗೆ ಸೇರಿ 2100 ಕೋಟಿ ರೂ.ನ ನೂತನ ಯೋಜನೆ ರಚಿಸಲಾಗುವುದು. ನಗರಸಭೆಗಳ ಮತ್ತು ನಿಗಮಗಳ ಘನ ತ್ಯಾಜ್ಯ ಸಂಸ್ಕರಣೆಗಾಗಿ ಜಾರಿಗೊಳಿಸುವ ಯೋಜನೆ 6 ವರ್ಷದ ಅವಧಿಯಲ್ಲಿ ಕೇರಳ ಮಾದರಿಯನ್ನು ವಿಕಸಿತಗೊಳಿಸಲಾಗುವುದು ಎಂದವರು ಈ ವೇಳೆ ಪ್ರಕಟಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries