ಕಾಸರಗೋಡು: ಪೋಲೀಸ್ ತರಬೇತಿಯ ಭಯದಿಂದ ಊರು ಬಿಟ್ಟು ಓಡಿಹೋದ ಯುವಕನನ್ನು 10 ವರ್ಷಗಳ ಬಳಿಕ ಪೆÇಲೀಸರೇ ಪತ್ತೆಹಚ್ಚಿದ ಘಟನೆ ನಡೆದಿದೆ. ವೆಳ್ಳರಿಕುಂಡು ಪುಂಗಚ್ಚಾಲಿನ ವಿ.ವ.ವರ್ಗೀಸ್ ಎಂಬವರ ಪುತ್ರ ಜೋಸ್ ವರ್ಗೀಸ್ (38) ಎಂಬವನನ್ನು ಕೋಝಿಕ್ಕೋಡ್ ಜಿಲ್ಲೆಯ ಪುದಿಯಾಪ್ರಂ ಬಂದರಿನ ಒಂದು ಹೋಟೆಲ್ ನಲ್ಲಿ ವೆಳ್ಳರಿಕುಂಡ್ ಠಾಣಾ ಪೋಲೀಸರು ಪತ್ತೆಹಚ್ಚಿದರು. ಶುಕ್ರವಾರ ಬೆಳಿಗ್ಗೆ ಠಾಣೆಗೆ ಕರೆತರಲಾದ ಯುವಕನನ್ನು ಪೋಲೀಸರು ಹೊಸದುರ್ಗದ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನ್ಯಾಯಾಲಯದ ನಿರ್ದೇಶಾನುಸಾರ ಜೋಸ್ ನನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
2010 ರಲ್ಲಿ ಕೆಲಸ ಸಿಕ್ಕಿತ್ತು:
ಜೋಸ್ ಗೆ 2010 ರ ಡಿಸೆಂಬರ್‍ನಲ್ಲಿ ಕೇರಳ ಪೆÇಲೀಸ್ ಇಲಾಖೆಯಲ್ಲಿ ನೇಮಕಾತಿ ಲಭಿಸಿತ್ತು. ಕಣ್ಣೂರಿನ ಮಂಗತ್ ಪಾರಂನಲ್ಲಿ ನಡೆದ ಪೆÇಲೀಸ್ ತರಬೇತಿ ಶಿಬಿರದಲ್ಲಿ ಈ ನೇಮಕಾತಿಯಾಗಿತ್ತು. ಶಿಬಿರದಲ್ಲಿ ಜೋಸ್ ವರ್ಗೀಸ್ ತರಬೇತಿ ವೇಳೆ ಭಯದಿಂದ ಒಂದು ವಾರ ರಜೆ ತೆಗೆದು ಕಾಲ್ಕಿತ್ತಿದ್ದ. ಪೆÇಲೀಸರು ಮನೆಗೆ ಹೋಗಿ ಹುಡುಕಿದರೂ ಆತನನ್ನು ಪತ್ತೆಹಚ್ಚಲಾಗಿರಲಿಲ್ಲ. ಜೋಸ್ ತಲೆಮರೆಸಲು ಪ್ರಮುಖ ಕಾರಣವೆಂದರೆ ಆತನಿಗೆ ಪೋಲೀಸ್ ವೃತ್ತಿಯಲ್ಲಿ ಆಸಕ್ತಿ ಇಲ್ಲದಿರುವುದಾಗಿದೆ ಎಂದು ಪೆÇಲೀಸರಿಗೆ ತಿಳಿಸಿದ್ದಾರೆ. ತರಬೇತಿಯ ಕಷ್ಟದಿಂದಾಗಿ ಜೋಸ್ ಮನೆ ತೊರೆದನು. ಮತ್ತು ಅವರ ಕುಟುಂಬವು ಕೆಲಸಕ್ಕೆ ಹೋಗುವಂತೆ ಒತ್ತಾಯಿಸಿದ್ದರು ಎಂದು ಜೋಸ್ ಹೇಳಿರುವನು. ಅವರು ಹಿಂದಿರುಗಿದಾಗ ಮತ್ತೆ ಪೆÇಲೀಸ್ ತರಬೇತಿಗೆ ಹೋಗಬೇಕಾಗಬಹುದೆಂಬ ಭಯದಿಂದ ಮನೆಯಿಂದ ದೂರವಾಗಿ ಕುಟುಂಬ ಸಂಪರ್ಕ ಕಡಿತಗೊಳಿಸಿ ಏಕಾಂಗಿಯಾಗಿದ್ದ. ಮನೆಯವರನ್ನೂ ಆ ಬಳಿಕ ಸಂಪರ್ಕಿಸಿಲ್ಲ ಎಂದು ಜೋಸ್ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಊರು ಬಿಟ್ಟು ಅಲೆದಾಟ:
ಜೋಸ್ ವರ್ಗೀಸ್ ತರಬೇತಿಯಿಂದ ತಲೆಮರೆಸಿದ ಬಳಿಕ ಹಲವೆಡೆ ಅಂಡಲೆದಿರುವುದಾಗಿ ತಿಳಿಸಿದ್ದಾನೆ. 2011ರ ಜೂನ್ 5, ರಂದು, ಜೋಸ್ ತನ್ನ ಮನೆ ತ್ಯಜಿಸಿ ನೇರವಾಗಿ ಮುಂಬೈಗೆ ತೆರಳಿದನು .
ಅಲ್ಲಿಂದ ಬೆಂಗಳೂರಿಗೆ ತೆರಳಿ ಅಲ್ಲಿ ಮೂರು ವರ್ಷಗಳ ಕಾಲ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್‍ನಲ್ಲಿ ಕೆಲಸ ನಿರ್ವಹಿಸಿದನು. ಬಳಿಕ ಮೈಸೂರಿಗೆ ತೆರಳಿದನು. ತಾನಲ್ಲಿ ಒಂದು ಹೋಟೆಲ್ ನಲ್ಲಿ ಎರಡು ವರ್ಷ ಕೆಲಸ ಮಾಡಿದೆ. ಇಲ್ಲಿಂದ ಕೋಝಿಕ್ಕೋಡ್ ಪುತಿಯಪ್ರಂ ಬಂದರನ್ನು ತಲುಪಿದೆ. ಇಲ್ಲಿನ ಹೋಟೆಲ್ನಲ್ಲಿ ಕೆಲಸ ಮಾಡಿದೆ ಮತ್ತು ಊರು ಬಿಟ್ಟ ಬಳಿಕ ತಮ್ಮ ಕುಟುಂಬ ಅಥವಾ ಸಂಬಂಧಿಕರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲ ಹಾಗೂ ಫೆÇೀನ್ ಬಳಸಲಿಲ್ಲ ಎಂದು ಜೋಸ್ ವಿವರ ನೀಡಿರುವನು.
ಸಹೋದರನ ದೂರಿನ ವಿಚಾರಣೆ:
ವರ್ಷಗಳಷ್ಟು ಕಾಲ ಜೋಸ್ ಕುಟುಂಬದೊಂದಿಗೆ ಸಂಪರ್ಕದಲ್ಲಿರಲಿಲ್ಲ. ಅವರ ಸಹೋದರ ಜಾರ್ಜ್ ವರ್ಗೀಸ್ ಯಾವುದೇ ಮಾಹಿತಿ ಸಹೋದರನ ಯಾವುದೇ ಪತ್ತೆ ಇಲ್ಲದ್ದರಿಂದ 2016 ರಲ್ಲಿ ನಾಪತ್ತೆಯ ಬಗ್ಗೆ ವೆಳ್ಳರಿಕುಂಡು ಪೆÇಲೀಸರಿಗೆ ದೂರು ನೀಡಿದ್ದರು. ಜೋಸ್ ವರ್ಗೀಸ್ ಅವರನ್ನು ಪತ್ತೆ ಹಚ್ಚಲು ಪೆÇಲೀಸರು ವ್ಯಾಪಕ ತನಿಖೆ ಆರಂಭಿಸಿದ್ದರು. ಪೆÇಲೀಸರು ಜೋಸ್ ವರ್ಗೀಸ್ ಗಾಗಿ ಹುಡುಕಾಟ ನಡೆಸುತ್ತಿದ್ದರು. ಏತನ್ಮಧ್ಯೆ, ಕೋಝಿಕ್ಕೋಡ್ ಪುತಿಯಪ್ರಂ ಬಂದರಿನ ಹೋಟೆಲ್‍ನಲ್ಲಿ ವ್ಯಕ್ತಿಯೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂಬ ಸುಳಿವು ಪೆÇಲೀಸರಿಗೆ ಸಿಕ್ಕಿತು. ಪೆÇಲೀಸರು ಗುರುವಾರ ಕೋಝಿಕ್ಕೋಡ್ ತಲುಪಿದರು. ಮತ್ತು ಜೋಸ್ ವರ್ಗೀಸ್ ಅವರನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಪ್ರಕರಣ ಸುಖಾಂತ್ಯಗೊಂಡಿತು. ತನ್ನನ್ನು ಪತ್ತೆಹಚ್ಚಿದ ಪೋಲೀಸರ ಸಿನಿಮೀಯ ತನಿಖೆಯಿಂದ ಆಕರ್ಷಿತನಾಗಿ ಮತ್ತೆ ಪೋಲೀಸ್ ವೃತ್ತಿಗೆ ಮರಳುವನೇ ಎಂದು ಇನ್ನು ಕಾದು ನೋಡಬೇಕಿದೆ!