ಮಂಜೇಶ್ವರ: ಜೈತುಳುನಾಡ್ ಕಾಸ್ರೋಡು ಘಟಕ ದ ಸದಸ್ಯರು ಶನಿವಾರ ತುಳು ಲಿಪಿಯ ಭೀಷ್ಮ ಪುಂಡೂರು ವೆಂಕಟರಾಜ ಪುಣಿಚಿತ್ತಾಯ ಇವರ ಜನ್ಮದಿನದಂಗವಾಗಿ ಕೇರಳ ತುಳು ಅಕಾಡೆಮಿಯ ಕಾರ್ಯಾಲಯ "ತುಳು ಭವನ" ಕ್ಕೆ ಭೇಟಿ ನೀಡಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಇವರ ಉಪಸ್ಥಿತಿಯಲ್ಲಿ ಕೇರಳ ತುಳು ಅಕಾಡೆಮಿಯ ಸದಸ್ಯ ಕುಂಜತ್ತೂರು ಬಾಲಕೃಷ್ಣ ಶೆಟ್ಟಿಗಾರ್ ಇವರು ಜೈತುಳುನಾಡ್ ನ ತಂಡವನ್ನು "ತುಳುಭವನ" ಕ್ಕೆ ಸ್ವಾಗತಿಸಿದರು.
ಕೇರಳದಲ್ಲಿ ತುಳುಬಾಷೆಯನ್ನು ಅಧಿಕೃತ ಬಾಷೆಯಾಗಿ ಮಾಡಬೇಕು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಐದನೇ ತರಗತಿಯ ವರೆಗೆ ಶಾಲೆಯಲ್ಲಿ ಪ್ರಾದೇಶಿಕ ಭಾÁಷೆಯಲ್ಲಿ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಹೊಸ ಶಿಕ್ಷಣ ನೀತಿಯ ಪ್ರಕಾರ ಕೇರಳದಲ್ಲಿ ತುಳುಭಾಷಾ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ತುಳುಭಾಷೆಯಲ್ಲಿ ವಿದ್ಯಾಭ್ಯಾಸ ನೀಡಬೇಕು ಹಾಗೂ ಜೈ ತುಳುನಾಡ್ ಸಂಘಟನೆಯ ವತಿಯಿಂದ ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ತುಳು ಲಿಪಿತರಗತಿಯಲ್ಲಿ ತುಳು ಲಿಪಿ ಕಲಿತವರಿಗೆ ತುಳು ಅಕಾಡೆಮಿಯ ಹೆಸರಿನಲ್ಲಿ ಅಕಾಡೆಮಿಯಿಂದ ಪ್ರಮಾಣ ಪತ್ರ ನೀಡಬೇಕು ವಿಷಯಗಳನ್ನು ಮುಂದಿಟ್ಟುಕೊಂಡು ಮನವಿಯನ್ನು ಸರ್ಕಾರದ ಗಮನಕ್ಕೆ ತರಬೇಕು ಎಂಬ ಎರಡು ಮನವಿಪತ್ರಗಳನ್ನು ಜೈ ತುಳುನಾಡ್ ಕಾಸರಗೋಡು ಘಟಕದದ ಗೌರವಾಧ್ಯಕ್ಷ ಉಮೇಶ್ ಶಿರಿಯಾ ಹಾಗೂ ಉಪಾಧ್ಯಕ್ಷ ಹರಿಕಾಂತ್ ಇವರ ನೇತೃತ್ವದಲ್ಲಿ ಮಂಜೇಶ್ವರದ ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್ ಕುಂಞಂಬುರವರ ನೇತೃತ್ವದಲ್ಲಿ ಎಂ. ಉಮೇಶ್ ಸಾಲಿಯಾನ್ ಹಾಗೂ ಅಕಾಡೆಮಿ ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್ ಕುಂಜತ್ತೂರು ಇವರಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಈ ಎಲ್ಲಾ ಬೇಡಿಕೆಗಳನ್ನು ಸರ್ಕಾದರ ಗಮನಕ್ಕೆ ತಂದು ಪರಿಗಣಿಸುವುದಾಗಿ ಮಾಜಿ ಶಾಸಕ ಸಿ ಎಚ್ ಕುಂಞಂಬು ಸಂಘಟನೆಯ ಸದಸ್ಯರಿಗೆ ಭರವಸೆನ್ನಿತ್ತರು.
ಕೇರಳ ತುಳು ಅಕಾಡೆಮಿಯನ್ನುದ್ದೇಶಿಸಿ ಮಾತಾಡಿದ ಬಾಲಕೃಷ್ಣ ಶೆಟ್ಟಿಗಾರ್ ಇವರು ಈಗಿನ ಕೊರೊನಾ ಸಾಂಕ್ರಾಮಿಕ ಕಾಲದ ಸಮಸ್ಯೆಯಿಂದ ಹೆಚ್ಚಿನ ಚಟುವಟಿಕೆಗಳನ್ನು ನಡೆಸಲು ಕಷ್ಟವಾದರೂ ಮುಂದಿನ ದಿನಗಳಲ್ಲಿ ಜೈತುಳುನಾಡ್ ಸಂಘಟನೆಯೊಂದಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮುಂದುವರಿಯುವ ಭರವಸೆಯ ಮಾತುಗಳನ್ನಾಡಿದರು. ತುಳುಭವನದ ಪರಿಚಯ, ಒಳಗಿನ ವೆಂಕಟರಾಜ ಪುಣಿಚಿತ್ತಾಯರ ಹೆಸರಿನಲ್ಲಿರುವ ಗ್ರಂಥಾಲಯವನ್ನು ಪರಿಚಯಿಸಿದರು. ತುಳು ಅಕಾಡೆಮಿಯ ವತಿಯಿಂದ ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ "ತೆಂಬರೆ" ತುಳುಪತ್ರಿಕೆಯನ್ನು ಜೈತುಳುನಾಡ್ ಸಘಟನೆಯ ಸದಸ್ಯೆರಿಗೆ ವಿತರಿಸಲಾಯಿತು.