ಕೊಚ್ಚಿ: ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಎಂ. ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಂಡಿದೆ. ಶಿವಶಂಕರ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಯ ಬಳಿಕ ತನಿಖೆಯ ಕೊನೆಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ಇಂದು ಹೈಕೋರ್ಟ್ ತಿರಸ್ಕರಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಇದೀಗ ಪ್ರಕರಣದ ಮುಂದಿನ ದೃಷ್ಟಿ ಮುಖ್ಯಮಂತ್ರಿಯತ್ತ ನೆಟ್ಟಿದ್ದು ರಾಜ್ಯ ಸೆಕ್ರಟರಿಯೇಟ್ ನ ಉನ್ನತ ಮೂಲಗಳತ್ತ ಪ್ರಕರಣ ತಳುಕು ಹಾಕಿಕೊಳ್ಳುತ್ತಿರುವುದು ಆಶ್ಚರ್ಯದ ಜೊತೆಗೆ ಕಳವಳಕ್ಕೂ ಕಾರಣವಾಗಿದೆ.
ತಿರುವನಂತಪುರ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದು ತಿರಸ್ಕರಿಸಿತ್ತು. . ಕಸ್ಟಮ್ಸ್ ಮತ್ತು ಇಡಿ ದಾಖಲಿಸಿದ ಪ್ರಕರಣಗಳ ಪ್ರಾಥಮಿಕ ತಡೆಯಾಜ್ಞೆಯನ್ನು ಹೈಕೋರ್ಟ್ ವಜಾಗೊಳಿಸಿತು. ಈ ಪ್ರಕರಣದಲ್ಲಿ ಶಿವಶಂಕರ್ ಭಾಗಿಯಾಗಿ ಎಂದು ಇಡಿ ಹೇಳಿದೆ.
ಚಾರ್ಟ್‍ಡ್ ಅಕೌಂಟೆಂಟ್ ವೇಣುಗೋಪಾಲ್ ಅವರೊಂದಿಗೆ ಶಿವಶಂಕರ್ ನಡೆಸಿದ್ದ ವಾಟ್ಸ್ ಆಫ್ ಸಂಭಾಷಣೆಗಳು ಶಿವಶಂಕರ್ ಅವರಿಗೆ ಪ್ರತಿಕೂಲವಾಗಿ ಪರಿಣಮಿಸಿ ಬಂಧನ ಅಗತ್ಯವಾಯಿತು ಎಂದು ಇಡಿ ತಿಳಿಸಿದೆ. ನಾಳೆ ಮೇಜಿಸ್ಟ್ರೇಟ್ ವಸತಿಯಲ್ಲಿ ಅವರನ್ನು ಇಡಿ ಹಾಜರುಪಡಿಸಲಿದೆ ಎಂದು ಇಡಿ ಅಧಿಕೃತರು ತಿಳಿಸಿದ್ದಾರೆ.