ತಿರುವನಂತಪುರ: ಸೇವ್ ದಿ ಡೇಟ್ ಮತ್ತು ಫೆÇೀಟೋ ಶೂಟ್ ನಂತಹ ಹೊಸ ತಲೆಮಾರಿನ ಮೋಜಿನ ಆಚರಣೆಗಳಿಗೆ ಕೆ.ಎಸ್.ಆರ್.ಟಿ.ಸಿ ಯೋಜನೆ ರೂಪಿಸಿದೆ. ಡಬಲ್ ಡೆಕ್ಕರ್ ಫೆÇೀಟೋ ಶೂಟ್ ಯೋಜನೆಯನ್ನು ಕೆಎಸ್‍ಆರ್‍ಟಿಸಿ ಪ್ರಾಯೋಜಿಸುತ್ತಿದೆ. ಕೆಎಸ್‍ಆರ್‍ಟಿಸಿ ಸ್ವತಃ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ತಿರುವನಂತಪುರದ ವಾಮನಪುರಂ ಮೂಲದ ಗಣೇಶ್ ಮತ್ತು ಇಂಚಕಲ್ ಮೂಲದ ಲಕ್ಷ್ಮಿ 2021 ರ ಜನವರಿ 18 ರಂದು ವಿವಾಹವಾಗಲಿದ್ದು ಡಬಲ್ ಡೆಕ್ಕರ್ ಬಸ್ ನಲ್ಲಿ ಈಗಾಗಲೇ ಕಾಯ್ದಿರಿಸಿದ್ದಾರೆ.
ಎಂಟು ಗಂಟೆ ಬಳಸುವಿಕೆಗೆ 4,000 ರೂ ಬಾಡಿಗೆಗೆ ನಿಗದಿಪಡಿಸಲಾಗಿದ್ದು 50 ಕಿ.ಮೀ ವ್ಯಾಪ್ತಿಯೊಳಗೆ ಸಂಚರಿಸಬಹುದಾಗಿದೆ. ಹೆಚ್ಚುವರಿ ಕಿಲೋಮೀಟರ್ ಗಳಿಗೆ ಹೆಚ್ಚುವರಿ ಬಾಡಿಗೆ ಪಾವತಿಸಬೇಕು. ವಿನಾಯಿತಿ ಮುಂದಿನ ಡಿಸೆಂಬರ್ ವರೆಗೆ ಮಾನ್ಯವಾಗಿರುತ್ತದೆ. ಏಜೆಂಟರು ಮತ್ತು ಬುಕ್ ನಡೆಸುವವರಿಗೆ ವಿಶೇಷ ಕಮಿಷನ್ ನೀಡುವ ಮೂಲಕ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕೆ.ಎಸ್.ಆರ್.ಟಿ.ಸಿ.ಯ ಟಿಕೆಟ್ ರಹಿತ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ. ವಿವಾಹ ನಿಶ್ಚಯ, ವಿವಾಹದ ಬಳಿಕದ ಹನಿಮೂನ್, ಪಾರ್ಟಿಗಳು, ಮತ್ತು ಜನ್ಮದಿನಾಚರಣೆಗಳೂ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಈ ಬಸ್ ಸೇವೆಯನ್ನು ಬಾಡಿಗೆಗೆ ನೀಡಲಾಗುವುದು.
ಬಸ್ ನ ಮೇಲ್ಮಹಡಿಯಲ್ಲಿ ಆಚರಣೆಗಳಿಗೆ ಅವಕಾಶ ಮತ್ತು ಕುಟುಂಬಗಳೊಂದಿಗೆ ನೆಲ ಮಹಡಿಯಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು. ಕೆಎಸ್‍ಆರ್‍ಟಿಸಿ ಈ ಯೋಜನೆಯನ್ನು ಲಂಡನ್ ಮಾದರಿಯಲ್ಲಿ ಟೀ ಬಸ್ ಟೂರಿಸ್ಟ್ ರೀತಿಯಲ್ಲಿ ಜಾರಿಗೊಳಿಸುತ್ತಿದೆ. ತಿರುವನಂತಪುರಂನಲ್ಲಿ ಹಲವಾರು ಏಜೆನ್ಸಿಗಳು ಈಗಾಗಲೇ ಫೆÇೀಟೋ ಶೂಟ್ಗಾಗಿ ಬಸ್ಸುಗಳನ್ನು ಕಾಯ್ದಿರಿಸಿದ್ದಾರೆ. ಯಶಸ್ವಿಯಾದರೆ, ಕೆಎಸ್‍ಆರ್‍ಟಿಸಿ ಯೋಜನೆಯನ್ನು ಕೊಚ್ಚಿ ಮತ್ತು ಕೋಝಿಕ್ಕೋಡ್ ಗೆ ವಿಸ್ತರಿಸುವುದಾಗಿ ತಿಳಿಸಿದೆ.