ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 30ನೇ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ತಂಡದ ವಿರುದ್ಧ 13 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡವು ಶಿಖರ್ ಧವನ್ 57 ಹಾಗೂ ಶ್ರೇಯಸ್ ಅಯ್ಯರ್ 53 ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 161 ಗಳಿಸಿತು.
162 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ದೆಹಲಿಯ ಜೋಫ್ರಾ ಆರ್ಚರ್ ಮುಳುವಾದರು. ಅವರು 4-0-19-3 ಬೌಲಿಂಗ್ ಪ್ರದರ್ಶನದಿಂದಾಗಿ ರಾಯಲ್ಸ್ ತಂಡ ದಿಡೀರ್ ಕುಸಿತವನ್ನು ಕಂಡಿತು. ಆರಂಭದಲ್ಲಿ ಬೆನ್ ಸ್ಟೋಕ್ ಅವರು 41 ರನ್ ಗಳಿಸುವ ಮೂಲಕ ಭರವಸೆ ಮೂಡಿಸಿದ್ದರು. ತದನಂತರ ಬಂದಂತಹ ಬ್ಯಾಟ್ಸಮನ್ ಗಳಲ್ಲಿ ರಾಬಿನ್ ಉತ್ತಪ್ಪ ಅವರು 32 ರನ್ ಗಳಿಸಿದ್ದೆ ಅತ್ಯಧಿಕ ಮೊತ್ತವಾಗಿತ್ತು. ಉತ್ತಪ್ಪ ಔಟ್ ಆದ ನಂತರ ಪಂದ್ಯ ದೆಹಲಿ ಪರವಾಗಿ ವಾಲಿತು ಎಂದು ಹೇಳಬಹುದು.
ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.