ವಿಶ್ವಸಂಸ್ಥೆ-ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ಸೋಂಕು ಪೀಡಿತರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಹಲವು ಏಳುಬೀಳುಗಳ ನಡುವೆಯೇ ಕೋವಿಡ್-19 ಸೋಂಕಿನ ಚಿಕಿತ್ಸೆಗೆ ಈ ವರ್ಷಾಂತ್ಯಕ್ಕೆ ಔಷ ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅದನೌ ಗೆಬ್ರಿಯಾಸಿಸ್ ಇದನ್ನು ಪ್ರಕಟಿಸಿದ್ದು, ಈ ವರ್ಷದ ಅಂತ್ಯದವರೆಗೆ ಕೊರೊನಾಗೆ ಔಷ ಲಭ್ಯವಾಗಲಿದೆ.
ವರ್ಷಾಂತ್ಯಕ್ಕೆ ಔಷ ಸಿಗಲಿದೆ ಎಂಬ ಆಶಾ ಭಾವನೆಯನ್ನು ಹೊಂದಿದ್ದೇವೆ. ಇನ್ನು ಎರಡು ಅಥವಾ ಮೂರು ಸುತ್ತು ಕಾರ್ಯಕಾರಿ ಮಂಡಳಿಯ ಸಭೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ. ಏನೇ ಆದರೂ ಡಿಸೆಂಬರ್ ಅಂತ್ಯಕ್ಕೆ ಔಷ ಸಿಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಒಟ್ಟು 9 ಮಾದರಿಯ ಕೋವಾಕ್ಸ್ ಔಷಗಳನ್ನು ಬಳಕೆ ಮಾಡಿದ್ದೇವೆ. ಕೆಲವು ಔಷಗಳಿಂದ ಸಕಾರಾತ್ಮಕ ಫಲಿತಾಂಶ ಬಂದಿದೆ. 2021ರ ಅಂತ್ಯಕ್ಕೆ ಸುಮಾರು 2 ಬಿಲಿಯನ್ ಪ್ರಮಾಣದ ಔಷಗಳನ್ನು ವಿತರಣೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಟೆಡ್ರೋಸ್ ಅದನೌ ಗೆಬ್ರಿಯಾಸಿಸ್ ಹೇಳಿದ್ದಾರೆ.