ಹೊಸದಿಲ್ಲಿ: ಜನವರಿ 15ರಿಂದ ಲ್ಯಾಂಡ್ ಲೈನ್ ಫೋನ್(ಸ್ಥಿರ ದೂರವಾಣಿ)ನಿಂದ ಮೊಬೈಲ್ ಫೋನ್ ಗೆ ಕರೆ ಮಾಡಬೇಕಿದ್ದರೆ '0' ನಂಬರ್ ಅನ್ನು ಸೇರಿಸಬೇಕು ಎಂದು ದೂರಸಂಪರ್ಕ ಇಲಾಖೆಯ ಹೇಳಿಕೆ ತಿಳಿಸಿದೆ.
ಈ ಕ್ರಮದಿಂದ ಸುಮಾರು 2,539 ಮಿಲಿಯನ್ ಸಂಖ್ಯೆಯ ಸರಣಿ ಸೃಷ್ಟಿಯಾಗುತ್ತದೆ. ಮುಂದಿನ ದಿನದಲ್ಲಿ ಹೊಸ ಅರ್ಜಿದಾರರಿಗೆ ಫೋನ್ ನಂಬರ್ ನೀಡಲು ಇದು ಸಾಕಾಗುತ್ತದೆ . ಲ್ಯಾಂಡ್ ಲೈನ್ ನಿಂದ ಲ್ಯಾಂಡ್ ಲೈನ್ ಗೆ, ಮೊಬೈಲ್ ನಿಂದ ಲ್ಯಾಂಡ್ ಲೈನ್ ಗೆ, ಮೊಬೈಲ್‌ನಿಂದ ಮೊಬೈಲ್ ಫೋನ್‌ಗೆ ಮಾಡುವ ಕರೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ . ಫೋನ್ ಬಳಕೆದಾರರು '0' ಒತ್ತದೆ ಮೊಬೈಲ್ ನಂಬರ್ ಒತ್ತಿದರೆ ಆಗ ಈ ಕುರಿತು ಸಂದೇಶ ಪ್ರಸಾರವಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.
ಭಾರತದಲ್ಲಿ 10 ಅಂಕೆಯ ನಂಬರ್ ನೀಡುವ ನೀತಿಯಿದ್ದು '0' ಮತ್ತು '1'ರಿಂದ ಆರಂಭವಾಗುವ ನಂಬರ್‌ಗಳನ್ನು ವಿಶೇಷ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಆದ್ದರಿಂದ ಹೊಸ ಯೋಜನೆಯಿಂದ ಸುಮಾರು 800 ಕೋಟಿ ನಂಬರ್‌ಗಳು ದೊರಕುತ್ತವೆ ಎಂದು ಇಲಾಖೆ ಹೇಳಿದೆ.