ಕಾಸರಗೋಡು: ಕೋವಿಡ್ ಅವಧಿಯಲ್ಲಿ ವಿಶ್ರಾಂತಿಯಿಲ್ಲದೆ ಅಹೋರಾತ್ರಿ ಜೀವ ಸಂರಕ್ಷಣೆಗಾಗಿ ದಾವಿಸಿ ಸೇವೆ ಸಲ್ಲಿಸಿದ್ದ ಕಾಸರಗೋಡು ಜಿಲ್ಲೆಯ 108 ಆಂಬುಲೆನ್ಸ್ ನ ಸಿಬ್ಬಂದಿಗೆ ಗೌರವಾರ್ಪಣೆ ಶನಿವಾರ ಜರುಗಿತು.
ನೂತನ ಬಸ್ ನಿಲ್ದಾಣ ಬಳಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಗೌರವಸಲ್ಲಿಸಿದರು. ಜನಮೈತ್ರಿ ಪೆÇಲೀಸ್ ಮತ್ತು ಟ್ರೂಲೈಫ್ ಕೇರ್ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮ ನಡೆಸಿದರು.
14 ಆಂಬುಲೆನ್ಸ್ ಗಳು, 62108 ಸಿಬ್ಬಂದಿ:
ಕಾಸರಗೋಡು ಜಿಲ್ಲೆಯಲ್ಲಿ 14 ಆಂಬುಲೆನ್ಸ್ ಗಳು, 62108 ಸಿಬ್ಬಂದಿ 108 ಆಂಬುಲೆನ್ಸ್ ಸೇವೆ ಸಂಬಂಧ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಲಭಿಸುವ 30 ನಿಮಿಷ ಎಂಬ ಸುವರ್ಣ ಅವಧಿಯನ್ನು ಯಾವ ರೀತಿ ಗರಿಷ್ಠ ಮಟ್ಟದಲ್ಲಿ ಸಕಾರಾತ್ಮಕವಾಗಿ ಬಳಸಬಹುದು ಎಂಬುದನ್ನು ಇವರು ಕೃತಿಯಿಂದ ತೋರಿದವರು.
ಶ್ಲಾಘನೆ:
ಆ.13ರಂದು ಜಿಲ್ಲೆಯಲ್ಲಿ 108 ಆಂಬುಲೆನ್ಸ್ ನಲ್ಲಿ ಕೋವಿಡ್ ಬಾಧಿತ ಗರ್ಭಣಿಯೊಬ್ಬರು ಮಗುವಿಗೆ ಆರೋಗ್ಯಯುತವಾಗಿ ಜನ್ಮ ನೀಡಿದ್ದರು. ಕೋವಿಡ್ ಸಂಬಂಧ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರೂ, ಪರಿಯಾರಂಗೆ ಒಯ್ಯುವಂತೆ ಸಲಹೆ ಮಾಡಿದ ಹಿನ್ನೆಲೆಯಲ್ಲಿ ಅತ್ತ ಪ್ರಯಾಣ ಬೆಳೆಸಿದ್ದರು. ಆದರೆ ಹಾದಿ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ತುರ್ತು ಸ್ಥಿತಿ ನಿರ್ವಹಣೆ ತಂತ್ರಜ್ಞ ಮತ್ತು ಚಾಲಕನ ಸಂದರ್ಭೋಚಿತ ಕ್ರಮಗಳಿಂದ ಆಂಬುಲೆನ್ಸ್ ನಲ್ಲೇ ಮಹಿಳೆ ಮಗುವಿಗೆ ಜನನ ನೀಡಿದ್ದರು. ಈ ಸೇವೆಯನ್ನು ಸಮಾರಂಭದಲ್ಲಿ ಶ್ಲಾಘಿಸಲಾಗಿತ್ತು.
ಸಮಾರಂಭದಲ್ಲಿ ಸಹಾಯಕ ಜಿಲ್ಲಾ ಸಹಾಯಕ ಜಿಲ್ಲಾಧಿಕಾರಿ ಡಾ.ಮನೋಜ್, 108 ಆಂಬುಲೆನ್ಸ್ ಪೆÇ್ರೀಗ್ರಾಂ ಮೆನೆಜರ್ ಕೆ.ಪಿ. ರಮೇಶನ್, ಜನಮೈತ್ರಿ ಪೆÇಲೀಸ್ ಸಂಚಾಲಕ ಮಧುಕಾರಕ್ಕಡವತ್, ಎಚ್.ಆರ್. ಪ್ರವೀಣ್ ಕುಮಾರ್, ಟ್ರೂ ಲೈಫ್ ಕೇರ್ ಸಂಚಾಲಕ ಅಬ್ದುಲ್ ಅಸ್ಕರ್, 108 ಆಂಬುಲೆನ್ಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಫೆÇಟೋ ಶೀರ್ಷಿಕೆ: 108: ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು 108 ಆಂಬುಲೆನ್ಸ್ ಸಿಬ್ಬಂದಿಗೆ ಗೌರವಾರ್ಪಣೆ ನಡೆಸಿದರು.