ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಬಳಕೆದಾರ ಸ್ನೇಹಿ ಎನಿಸಿಕೊಂಡಿದ್ದು, ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ಸ್‌ಳನ್ನ ಸೆಟ್ಟಿಗ್ಸ್‌ಗಳನ್ನ ನೀಡಿದೆ. ಇನ್ನು ವಿಂಡೋಸ್ 10 ಅಲ್ಲಿ ಬಳಕೆದಾರರು ತಮ್ಮ ಇಚ್ಚೆಯಂತೆ ಕಾರ್ಯನಿರ್ವಹಿಸಲು, ಕೆಲವು ಸುಧಾರಿತ ಸೆಟ್ಟಿಂಗ್ಸ್‌ಗಳನ್ನು ನೀಡಲಾಗಿದೆ.
ಆದರೆ, ಕೆಲವು ಫೀಚರ್ಸ್‌ಗಳು ಮತ್ತು ಆಯ್ಕೆಗಳನ್ನು ಅಡ್ಮಿನಿಸ್ಟ್ರೇಟರ್(administrator) ಅಕೌಂಟ್‌ನಿಂದ ಮಾತ್ರ ಸಕ್ರಿಯಗೊಳಿಸಲು ಸಾಧ್ಯವಾಗಲಿದೆ. ಇಂತಹ ಫೀಚರ್ಸ್‌ಗಳು ಅಡ್ಮಿನ್ ಖಾತೆ ಬಿಟ್ಟು ಇನ್ಯಾರಿಗೂ ದೊರೆಯದಂತೆ ನಿರ್ಬಂಧಿಸಲಾಗಿದೆ.
ವಿಂಡೋಸ್ 10
ಹೌದು, ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲವು ಫೀಚರ್ಸ್‌ಗಳನ್ನ ಅಡ್ಮಿನಿಸ್ಟ್ರೇಟರ್(administrator) ಖಾತೆಗೆ ಬಿಟ್ಟು ಇನ್ಯಾರಿಗೂ ಪ್ರವೇಶವಿಲ್ಲದಂತೆ ನಿರ್ಬಂಧಿಸಲಾಗಿದೆ. ಈ ಫೀಚರ್ಸ್‌ಗಳು ನಿಮ್ಮ ವಿಂಡೋಸ್ 10 ಕಂಪ್ಯೂಟರ್‌ನಲ್ಲಿ ಸಂಭವಿಸುವ ದೋಷನಿವಾರಣೆಗೆ ಸಹ ಇದು ಅಗತ್ಯವಾಗಿರುತ್ತದೆ. ಆದಾಗ್ಯೂ, ಈ ಫೀಚರ್ಸ್‌ಗಳು ಬಾಕ್ಸ್‌ನಿಂದ ಹೊರಗೆ ಸಕ್ರಿಯಗೊಳ್ಳುವುದಿಲ್ಲ ಮತ್ತು ಕೈಯಾರೆ ಸಕ್ರಿಯಗೊಳಿಸಬೇಕಾಗಿದೆ. ನಿಮ್ಮ ವಿಂಡೋಸ್ 10 ಕಂಪ್ಯೂಟರ್‌ನಲ್ಲಿ ನೀವು ಸಕ್ರಿಯ ನಿರ್ವಾಹಕ ಖಾತೆಯನ್ನು ನೋಡದಿದ್ದರೆ ಆದರೆ ನೀವು ಅದನ್ನು ಸಕ್ರಿಯಗೊಳಿಸಲು ಬಯಸಿದರೆ, ಅದನ್ನು ಹೇಗೆ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ವಿಂಡೋಸ್ 10
ವಿಂಡೋಸ್ 10ನಲ್ಲಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನ ಅಡ್ಮಿನಿಸ್ಟ್ರೇಟರ್ ಅಕೌಂಟ್ ಬಿಟ್ಟು ಇನ್ನೆಲ್ಲಿಯೂ ಆಕ್ಟಿವ್ ಆಗದಂತೆ ನಿರ್ಬಂಧಿಸಲಾಇದೆ. ಹೀಗಾಗಿ ನಿಮ್ಮ ವಿಮಡೋಸ್ 10 ಕಂಪ್ಯೂಟರ್‌ನಲ್ಲಿ ದೋಷಗಳು ಉಂಟಾದರೆ ನೀವು ಅಡ್ಮಿನಿಸ್ಟ್ರೇಟರ್ ಅಕೌಂಟ್‌ಗೆ ಹೋಗಬೇಕಾಗುತ್ತದೆ. ಇದರಲ್ಲಿ ಇರುವ ಫೀಚರ್ಸ್‌ಗಳ ಮೂಲಕ ನಿಮ್ಮ ಕಂಪ್ಯೂಟರ್‌ನಲ್ಲಿ ಕಾಣಿಸಿಕೊಂಡಿರುವ ದೋಷಗಳನ್ನ ನಿವಾರಿಸಬಹುದಾಗಿರುತ್ತದೆ. ಅಷ್ಟಕ್ಕೂ ನೀವು ವಿಂಡೋಸ್ 10ನಲ್ಲಿ ಅಡ್ಮಿನಿಸ್ಟ್ರೇಟರ್ ಅಕೌಂಟ್ ಅನ್ನು ಆಕ್ಟಿವ್ ಮಾಡುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿಸಿರಿ
ವಿಂಡೋಸ್ 10 ನಲ್ಲಿ ಅಡ್ಮಿನಿಸ್ಟ್ರೇಟರ್(administrator) ಅಕೌಂಟ್ ಸಕ್ರಿಯಗೊಳಿಸುವುದು ಹೇಗೆ?
ಹಂತ 1: ಮೊದಲನೆಯದಾಗಿ, ನಿಮ್ಮ ಕಂಪ್ಯೂಟರ್‌ನಲ್ಲಿ ಕಮಾಂಡ್ ಪ್ರಾಂಪ್ಟ್ ಅನ್ನು ಅಡ್ಮಿನಿಸ್ಟ್ರೇಟರ್ ಮೋಡ್‌ನಲ್ಲಿ ತೆರೆಯಿರಿ. ಇದಕ್ಕಾಗಿ, ಸ್ಟಾರ್ಟ್ ಮೆನುವಿನಲ್ಲಿ ಕಮಾಂಡ್ ಪ್ರಾಂಪ್ಟ್‌ಗಾಗಿ ಸರ್ಚ್ ಮಾಡಿ ನಂತರ ಐಕಾನ್ ಮೇಲೆ ರೈಟ್ ಕ್ಲಿಕ್ ಮಾಡಿ, ತದನಂತರ "Run as Administrator" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 2: ಕಮಾಂಡ್ ಪ್ರಾಂಪ್ಟಿನಲ್ಲಿ, "ನೆಟ್ ಯೂಸರ್ ಅಡ್ಮಿನಿಸ್ಟ್ರೇಟರ್" ಕಮಾಂಡ್ ಅನ್ನು ಟೈಪ್ ಮಾಡಿ ನಂತರ ಎಂಟರ್ ಒತ್ತಿರಿ. ಖಾತೆ ಸಕ್ರಿಯ ಸ್ಥಿತಿ ಹೌದು ಅಥವಾ ಇಲ್ಲವೇ ಎಂದು ಅದು ತೋರಿಸುತ್ತದೆ. ಸ್ಥಿತಿ ಇಲ್ಲದಿದ್ದರೆ, ಮುಂದಿನ ಹಂತಕ್ಕೆ ಮುಂದುವರಿಯಿರಿ.
ಹಂತ 3: ಅಡ್ಮಿನಿಸ್ಟ್ರೇಟರ್ ಖಾತೆಯನ್ನು ಸಕ್ರಿಯಗೊಳಿಸಲು, ಕಮಾಂಡ್ ಪ್ರಾಂಪ್ಟಿನಲ್ಲಿ "ನೆಟ್ ಯೂಸರ್ ಅಡ್ಮಿನಿಸ್ಟ್ರೇಟರ್ / ಆಕ್ಟಿವ್:Yes" ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು ಎಂಟರ್ ಒತ್ತಿರಿ.
ಹಂತ 4: ಈಗ, ಅಡ್ಮಿನಿಸ್ಟ್ರೇಟರ್ ಖಾತೆಯನ್ನು ಸಕ್ರಿಯಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಿ. ಇದಕ್ಕಾಗಿ, ಹಂತ 2 ರಲ್ಲಿ ಉಲ್ಲೇಖಿಸಲಾದ ಅದೇ ಪ್ರಕ್ರಿಯೆಯನ್ನು ಅನುಸರಿಸಿ.
ಈ ಮೂಲಕ ನಿಮ್ಮ ವಿಂಡೋಸ್ 10 ಸಿಸ್ಟಂನಲ್ಲಿ ಅಡ್ಮಿನಿಸ್ಟ್ರೇಟರ್ ಅಕೌಂಟ್ ಅನ್ನು ಸಕ್ರಿಯಗೊಳಿಸಬಹುದಾಗಿದೆ.