ನವದೆಹಲಿ: ದೇಶದ 11 ರಾಜ್ಯಗಳಲ್ಲಿ ನಡೆದ 58 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 41 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ.
ಮಧ್ಯಪ್ರದೇಶ ಉಪಚುನಾವಣೆ
ಮಧ್ಯಪ್ರದೇಶದ 28 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಇನ್ನು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ವಿರೋಧಪಕ್ಷವಾಗಿರುವ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಉತ್ತರ ಪ್ರದೇಶ ಉಪಚುನಾವಣೆ
ಉತ್ತರ ಪ್ರದೇಶದಲ್ಲಿ ಏಳು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 6 ಸ್ಥಾನಗಳನ್ನು ಗೆದ್ದಿದ್ದು, ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷ(ಎನ್ ಸಿ ಪಿ) ಕೇವಲ ಒಂದು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಗುಜರಾತ್ ಉಪಚುನಾವಣೆ
ಗುಜರಾತ್ ನಲ್ಲಿ 8 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಎಲ್ಲಾ ಸ್ಥಾನಗಳನ್ನು ಬಾಚಿಕೊಂಡಿದೆ. ಪ್ರಮುಖ ಪ್ರತಿ ಪಕ್ಷವಾದ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.
ಮಣಿಪುರ ಉಪಚುನಾವಣೆ
ಮಣಿಪುರದಲ್ಲಿ ಕಳೆದ ನ. 7ರಂದು ನಾಲ್ಕು ವಿಧಾನಸಭಾ ಸ್ಥಾನಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ 3 ಹಾಗೂ ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನವನ್ನು ಗೆದ್ದಿದ್ದಾರೆ. ಗೆಲುವು ದಾಖಲಿಸಿದ ಬಿಜೆಪಿ ಅಭ್ಯರ್ಥಿಗಳಲ್ಲಿ ವಾಂಗೋಯಿ ಕ್ಷೇತ್ರದಿಂದ ಕೃಷಿ ಸಚಿವ ಓ ಲುಖೋಯ್, ಸೈತು ಕ್ಷೇತ್ರದಿಂದ ಮಾಜಿ ಸಚಿವ ನಗಮ್‍ಥಾಂಗ್ ಹಾಕಿಪ್, ವಾಂಗ್ಜಿಂಗ್ ಟೆಂಥಾದಿಂದ ಪಿ ಬ್ರೋಜೆನ್ ಸೇರಿದ್ದಾರೆ. ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ನಂತರ ಮೂವರೂ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.
ಕರ್ನಾಟಕ ಉಪಚುನಾವಣೆ
ಕರ್ನಾಟಕದ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿಯೂ ಅಭೂತಪೂರ್ವ ಗೆಲುವು ಸಾಧಿಸಿದೆ.
ತೆಲಂಗಾಣ ಉಪಚುನಾವಣೆ
ತೆಲಂಗಾಣದ ಡುಬ್ಬಾಕ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ನಾಗಾಲ್ಯಾಂಡ್ ಉಪಚುನಾವಣೆ
ನಾಗಾಲ್ಯಾಂಡ್ ನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪೆÇ್ರೀಗ್ರೆಸ್ಸಿವ್ ಪಾರ್ಟಿ(ಎನ್‍ಡಿಪಿಪಿ) ಅಭ್ಯರ್ಥಿ ಮೆಡೋ ಯೋಖಾ ಮತ್ತು ಸ್ವತಂತ್ರ ಅಭ್ಯರ್ಥಿ ಟಿ ಯಾಂಗ್ಸಿಯೊ ಸಾಂಗ್ಟಮ್ ಜಯಗಳಿಸಿದ್ದಾರೆ. ದಕ್ಷಿಣ ಅಂಗಮಿ-1 ಕ್ಷೇತ್ರದಲ್ಲಿ ಮೆಡೋ ಯೋಖಾ ಹಾಗೂ ಪುಂಗ್ರೊ-ಕಿಫೈರ್ ಕ್ಷೇತ್ರದಿಂದ ಯಾಂಗ್ಸಿಯೊ ಸಾಂಗ್ಟಮ್ ಆಯ್ಕೆಯಾಗಿದ್ದಾರೆ.