ಕಾಸರಗೋಡು: ರಾಜ್ಯದ 11 ಐ.ಟಿ.ಐ.ಗಳು ಇನ್ನು ಮುಂದೆ ಹಸಿರು ಕ್ಯಾಂಪಸ್‍ಗಳಾಗಲಿವೆ ಎಂಬುದಾಗಿ ಉದ್ಯೋಗ ಖಾತೆ ಸಚಿವ ಟಿ.ಪಿ.ರಾಮಕೃಷ್ಣನ್ ತಿಳಿಸಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಕೃಷಿ ಸಂಸ್ಕøತಿ ಪುನಶ್ಚೇತನ ಉದ್ದೇಶದಿಂದ ರಾಜ್ಯಾದ್ಯಂತ ನಡೆಸುವ ಚಟುವಟಿಕೆಗಳ ಅಂಗವಾಗಿ ಹಮ್ಮಿಕೊಳ್ಳಲಾದ ಹಸಿರು ಕ್ಯಾಂಪಸ್ ಕಾರ್ಯಕ್ರಮವನ್ನು ವಿಡಿಯೋ ಕಾನ್‍ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಜಿಲ್ಲೆಯ ಪುಲ್ಲೂರು ಐ.ಟಿ.ಐ. ಸಹಿತ 11 ಐ.ಟಿ.ಐ. ಕ್ಯಾಂಪಸ್‍ಗಳಲ್ಲಿ ಈ ಕಾರ್ಯಕ್ರಮ ನಡೆಯಿತು.
ಹಸಿರು ಕೇರಳ ಮಿಷನ್ ಸಹಾಯದೊಂದಿಗೆ ರಾಜ್ಯದ 11 ಐ.ಟಿ.ಐ. ಕ್ಯಾಂಪಸ್ ಗಳನ್ನು ಮೊದಲ ಹಂತದಲ್ಲಿ ಹಸುರು ಕ್ಯಾಂಪಸ್ ಗಳಾಗಿ ಘೋಷಿಸಲಾಗುತ್ತಿದೆ. ಹಸಿರು ಕೇರಳ ಮಿಷನ್ ಕಾರ್ಯಕಾರಿ ಉಪಾಧ್ಯಕ್ಷೆ ಟಿ.ಎನ್.ಸೀಮಾ ಅವರು ಅಧ್ಯಕ್ಷತೆ ವಹಿಸಿದ್ದರು. ಪುಲ್ಲೂರು ಐ.ಟಿ.ಐ.ಯಲ್ಲಿ ನಡೆದ ಸಮಾರಂಭದಲ್ಲಿ ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಜಿಲ್ಲಾ ಮಟ್ಟದ ಘೋಷಣೆ ನಡೆಸಿ, ಮಂಜೂರಾತಿ ಪತ್ರವನ್ನು ಅವರು ಹಸ್ತಾಂತರಿಸಿದರು. ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್ ಅಧ್ಯಕ್ಷತೆ ವಹಿಸಿದ್ದರು. ಹಸಿರು ಕೇರಳ ಜಿಲ್ಲಾ ಮಿಷನ್ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪುಲ್ಲೂರು ಐ.ಟಿ.ಐ. ಪ್ರಾಂಶುಪಾಲೆ ಜಿ.ವಿಜಯಕುಮಾರಿಸ್ವಾಗತಿಸಿದರು. ಹರಿತ ಕೇರಳಂ ಮಿಷನ್ ನೋಡೆಲ್ ಅಧಿಕಾರಿ ಕೆ.ಹರೀಶ್ ಕುಮಾರ್ ವರದಿ ವಾಚಿಸಿದರು. ಸ್ಟಾಫ್ ಸೆಕ್ರಟರಿ ವಂದಿಸಿದರು.