ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಎರಡನೇ ದಿನವಾದ ಶುಕ್ರವಾರ 11 ಮಂದಿ ನಾಮಪತ್ರಿಕೆ ಸಲ್ಲಿಸಿದ್ದಾರೆ. ಬಳಾಲ್, ಬೇಡಡ್ಕ, ಚೆಂಗಳ, ಕುಂಬಳೆ ಗ್ರಾಮ ಪಂಚಾಯತ್ ಗಳಿಂದ 9 ಮಂದಿ ನಾಮಪತ್ರಿಕೆ ಸಲ್ಲಿಸಿದವರು. ಬ್ಲೋಕ್, ಜಿಲ್ಲಾ ಪಂಚಾಯತ್ ಗಳಿಂದ ಮತ್ತು ನಗರಸಭೆಗಳಿಂದ ಯಾರೂ ನಾಮಪತ್ರಿಕೆ ಸಲ್ಲಿಸಿಲ್ಲ.
ನಾಮಪತ್ರಿಕೆ ಸಲ್ಲಿಕೆಗೆ ನ.19 ಕೊನೆಯ ದಿನಾಂಕವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರಿಕೆ ಸಲ್ಲಿಸಬಹುದಾಗಿದೆ. ರಜಾ ದಿನಗಳಲ್ಲಿ ನಾಮಪತ್ರಿಕೆ ಸ್ವೀಕಾರವಿರುವುದಿಲ್ಲ.
ನಾಮಪತ್ರಿಕೆ ಸಲ್ಲಿಸಿದವರು
(ಪಂಚಾಯತ್ :ವಾರ್ಡ್-ಅಭ್ಯರ್ಥಿ-ಪಕ್ಷ ಎಂಬ ಕ್ರಮದಲ್ಲಿ)
ಚೆಂಗಳ: ಬೇವಿಂಜೆ- ಮೊಯ್ದೀನ್ ಕುಂಞÂ ಬಿ.-ಸ್ವತಂತ್ರ.
ಬೇಡಡ್ಕ : ಮರುತ್ತಡ್ಕ-ರಜಿತಾ ಪಿ.-ಬಿಜೆಪಿ.
ಬೇಡಡ್ಕ: ಬೀಂಬುಂಗಾಲು-ಸುಭಾಷಿಣಿ ಕೆ.ಎಂ.-ಬಿಜೆಪಿ.
ಬೇಡಡ್ಕ: ತಾರಂತಟ್ಟ-ಗೋಪಾಲಕೃಷ್ಣನ್ ನಾಯರ್-ಬಿಜೆಪಿ.
ಬೇಡಡ್ಕ: ಬೆದಿರ-ರತಿದೇವಿ_ಬಿಜೆಪಿ.
ಬಳಾಲ್ : ಬಳಾಲ್-ಮಂಜು ಕೆ.-ಸಿಪಿಎಂ.
ಬಳಾಲ್ : ಕಲ್ಲಂಚಿರ-ಸೌಮ್ಯಾ ದಾಮೋದರನ್-ಸಿಪಿಐ.
ಬಳಾಲ್: ಆನಮಂಙಳ್-ವಿಷ್ಣು ಕೆ.-ಸಿಪಿಐ.
ಬಳಾಲ್: ಕನಕಪಳ್ಳಿ-ಮೋಹನನ್ ಟಿ.-ಸಿಪಿಎಂ.
ಕುಂಬಳೆ: ಕುಂಬಳೆ-ಪ್ರೇಮಾವತಿ-ಬಿಜೆಪಿ.
ಕುಂಬಳೆ: ಕುಂಬಳೆ-ಅಶ್ವಿನಿ ಕೆ.-ಬಿಜೆಪಿ.