ಮಂಜೇಶ್ವರ: ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಇದರ 11 ನೇ ನೆರವು ಯೋಜನೆಯ ಮೊತ್ತವನ್ನು ಕಾಸರಗೋಡುವಿನ ಮಧೂರು ಗ್ರಾಮ ಪಂಚಾಯತಿ ಕೇಳುಗುಡ್ಡೆ ನಿವಾಸಿ ದಿ. ವಿಠಲ ರಾವ್ ರ ಪತ್ನಿ ಅಸೌಖ್ಯ ಪೀಡಿತೆ ವೀಣಾ ರಾವ್ ರವರಿಗೆ ಟ್ರಸ್ಟ್ ನ ಸದಸ್ಯರಾದ ಜೀವನ್ ಕುಮಾರ್ ಚಿಗುರುಪಾದೆ ಸೋಮವಾರ ಸಂಜೆ ಸ್ವ - ಗೃಹದಲ್ಲಿ ವಿತರಿಸಿದರು. ಈ ವೇಳೆ ವೀಣಾ ರಾವ್ ಅವರ ಪುತ್ರ ಹರೀಶ್ ರಾವ್ ಹಾಗೂ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ವರ್ಕಾಡಿ, ಸ್ಥಾಪಕ ರತನ್ ಕುಮಾರ್ ಹೊಸಂಗಡಿ ಉಪಸ್ಥಿತರಿದ್ದರು. ಕೇಳುಗುಡ್ಡೆಯ ಬಾಡಿಗೆ ಮನೆಯಲ್ಲಿ ಅಸೌಖ್ಯ ಪೀಡಿತೆ ತಾಯಿ ಜೊತೆ ಬದುಕುತ್ತಿರುವ ಹರೀಶ್ ರಾವ್ ರವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವರು.