ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಡಿ 36 ಪ್ರಕರಣಗಳು ದಾಖಲಾಗಿದ್ದು, ನಿಷೇಧ ಉಲ್ಲಂಘಿಸಿದ್ದಕ್ಕಾಗಿ 55 ಜನರನ್ನು ಬಂಧಿಸಲಾಗಿದೆ.
ತಿರುವನಂತಪುರ ನಗರ ಐದು, ತಿರುವನಂತಪುರ ಗ್ರಾಮೀಣ ಒಂದು, ಪತ್ತನಂತಿಟ್ಟು ಎರಡು, ಆಲಪ್ಪುಳ ಆರು, ಕೊಟ್ಟಾಯಂ ಒಂದು, ಇಡಕ್ಕಿ ಎರಡು, ಎರ್ನಾಕುಳಂ ಗ್ರಾಮೀಣ ಎಂಟು, ತ್ರಿಶೂರ್ ಗ್ರಾಮೀಣ ಒಂದು, ಪಾಲಕ್ಕಾಡ್ ಏಳು, ಕೋಝಿಕ್ಕೋಡ್ ನಗರ ಒಂದು ಮತ್ತು ಕಾಸರಗೋಡು ಎರಡು ಎಂಬಂತೆ ದೂರು ದಾಖಲಿಸಲಾಗಿದೆ. ಅಲ್ಲದೆ ತಿರುವನಂತಪುರ ನಗರ 4, ತಿರುವನಂತಪುರ ಗ್ರಾಮೀಣ 6, ಪತ್ತನಂತಿಟ್ಟು 9, ಆಲಪ್ಪುಳ 6, ಇಡುಕ್ಕಿ 10, ತ್ರಿಶೂರ್ ಗ್ರಾಮೀಣ 6, ಪಾಲಕ್ಕಾಡ್ 12 ಮತ್ತು ಕಾಸರಗೋಡು 2 ಎಂಬಂತೆ ಬಂಧಿಸಲಾಗಿದೆ.
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶನಿವಾರ ರಾಜ್ಯದಾದ್ಯಂತ ಒಟ್ಟು 1374 ಪ್ರಕರಣಗಳು ದಾಖಲಾಗಿವೆ. 439 ಜನರನ್ನು ಬಂಧಿಸಲಾಗಿದೆ. 38 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ನಿನ್ನೆ ಒಟ್ಟು 8253 ಮಂದಿ ಮಾಸ್ಕ್ ರಹಿತರಾಗಿ ಸಿಕ್ಕಿಬಿದ್ದ ಘಟನೆಗಳು ವರದಿಯಾಗಿವೆ. ಸಂಪರ್ಕತಡೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾವಾರು ಅಂಕಿಅಂಶಗಳನ್ನು ಕೆಳಗೆ ನೀಡಲಾಗಿದೆ. (ಜಿಲ್ಲೆ, ಪ್ರಕರಣಗಳ ಸಂಖ್ಯೆ, ಬಂಧನಗಳು ಮತ್ತು ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾದ ವಿವರ-ಎಂಬ ಕ್ರಮದಲ್ಲಿ)
ತಿರುವನಂತಪುರ ನಗರ - 188, 25, 4
ತಿರುವನಂತಪುರ ಗ್ರಾಮೀಣ - 247, 175, 7
ಕೊಲ್ಲಂ ನಗರ - 221, 25, 17
ಕೊಲ್ಲಂ ಗ್ರಾಮೀಣ - 521, 0, 0
ಪತ್ತನಂತಿಟ್ಟು - 36, 43, 0
ಆಲಪ್ಪುಳ- 34, 21, 1
ಕೊಟ್ಟಾಯಂ - 9, 6, 0
ಇಡುಕ್ಕಿ - 7, 3, 0
ಎರ್ನಾಕುಳಂ ನಗರ - 2, 0, 0
ಎರ್ನಾಕುಳಂ ಗ್ರಾಮೀಣ - 5, 0, 0
ತ್ರಿಶೂರ್ ನಗರ - 14, 19, 2
ತ್ರಿಶೂರ್ ಗ್ರಾಮೀಣ - 9, 16, 4
ಪಾಲಕ್ಕಾಡ್ - 17, 16, 0
ಮಲಪ್ಪುರಂ - 11, 14, 1
ಕೋಝಿಕ್ಕೋಡ್ ನಗರ - 1, 0, 0
ಕೋಝಿಕ್ಕೋಡ್ ಗ್ರಾಮೀಣ - 1, 0, 0
ವಯನಾಡ್ - 2, 0, 0
ಕಣ್ಣೂರು - 1, 0, 0
ಕಾಸರಗೋಡು - 48, 76, 2 ಎಂಬಂತೆ ಬಂಧಿತರು ಮತ್ತು ವಶಕ್ಕೆ ಪಡೆಯಲಾದ ವಾಹನಗಳ ಅಂಕಿಅಂಶಗಳಾಗಿವೆ.