ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲ ಸರಕಾರಿ ಸಿಬ್ಬಂದಿ 14 ದಿನಗಳಿಗೊಮ್ಮೆ ಆಂಟಿಜೆನ್ ಟೆಸ್ಟ್ಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಬುಧವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಈ ಆದೇಶ ನೀಡಲಾಗಿದೆ. ಜಿಲ್ಲಾ ಮೆಡಿಕಲ್ ಆಫೀಸ್(ಆರೋಗ್ಯ) ನೇತೃತ್ವದಲ್ಲಿರುವ ಮೊಬೈಲ್ ಟೆಸ್ಟಿಂಗ್ ಯೂನಿಟ್ ನ ಸೇವೆ ಇದಕ್ಕಾಗಿ ಬಳಸಬಹುದು. ಈ ಸಂಬಂಧ ತಪಾಸಣೆ ಸೌಲಭ್ಯ ಒದಗಿಸಲು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಅವರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.
ಸದ್ರಿ ಜಿಲ್ಲೆಯಲ್ಲಿ ಕೋವಿಡ್ ಕೇಸುಗಳು ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆಯಾಗಿದ್ದರೂ, ಜಾಗ್ರತೆ ಕಡ್ಡಾಯವಾಗಿ ಮುಮದುವರಿಯಬೇಕಿದೆ. ಒಗ್ಗಟ್ಟಿನ ಯತ್ನದ ಫಲವಾಗಿ ಜಿಲ್ಲೆಯಲ್ಲಿ ಕೋವಿಡ್ ರೋಗ ಸಮಖ್ಯೆ ಕಡಿಮೆಯಾಗಿದೆ. ಇದೇ ರೀತಿಯ ಯತ್ನ ಮುಂದುವರಿದರೆ ಮಾತ್ರ ಜಿಲ್ಲೆಯನ್ನು ಪಿಡುಗಿನಿಂದ ಸಂರಕ್ಷಿಸಲು ಸಾಧ್ಯ ಎಂದವರು ತಿಳಿಸಿದರು.
ಕೇಂದ್ರ ಹೆದ್ದಾರಿ ದೇಳಿ-ಪರವನಡ್ಕ ರಸ್ತೆಯಲ್ಲಿ ಸೋಮವಾರದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಸಭೆ ತಿಳಿಸಿದೆ. ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸುದನನ್ ಎಂ., ಇತರ ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.