ಕಾಸರಗೋಡು: ಜಿಲ್ಲಾ ವೈದ್ಯಾಧಿಕಾರಿ ನೀಡುವ ಪಟ್ಟಿಯಲ್ಲಿರುವವರಿಗೆ ಮಾತ್ರ ಕೋವಿಡ್ 19 ವಿಶೇಷ ಪೋಸ್ಟಲ್ ಬಾಲೆಟ್ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.
ರಿವರ್ಸ್ ಕ್ವಾರೆಂಟೈನ್ ನಲ್ಲಿರುವ ಮಂದಿಗೆ ವಿಶೇಷ ಅಂಚೆ ಬಾಲೆಟ್ ಮಂಜೂರು ಮಾಡುವುದಿಲ್ಲ. ಡಿ.5 ಮಧ್ಯಾಹ್ನ 3 ಗಂಟೆಯಿಂದ ಡಿ.13 ಮಧ್ಯಾಹ್ನ 3 ಗಂಟೆ ವರೆಗೆ ಕೋವಿಡ್ 19 ರೋಗಿಗಳು, ಅವರ ಸಂಪರ್ಕದಲ್ಲಿದ್ದವರುಸಹಿತ ಸರ್ಟಿಫೈಡ್ ಲಿಸ್ಟ್ನ್ನು ಜಿಲ್ಲಾ ವೈದ್ಯಧಿಕಾರಿ ಸಿದ್ಧಪಡಿಸುವರು. ವಿಶೇಷವಾಗಿ ನೇಮಿಸಿರುವ ಸ್ಪಷ್ಯಲ್ ಪೋಲಿಂಗ್ ಅಧಿಕಾರಿಗಳು, ವಿಶೇಷ ಪೋಲಿಂಗ್ ಅಸಿಸ್ಟೆಂಟ್ ಗಳು, ಪಿ.ಪಿ.ಇ. ಕಿಟ್ ಧರಿಸಿ ಮನೆಗಳಿಗೆ, ಆಸ್ಪತ್ರೆಗಳಿಗೆ ತೆರಳಿ ಅಂಚೆ ಬಾಲೆಟ್ ವಿತರಣೆ ನಡೆಸಲಾಗುವುದು. ಈ ಸಿಬ್ಬಂದಿಯನ್ನು ಬ್ಲೋಕ್ ಗಳಲ್ಲಿ , ನಗರಸಭೆಗಳಲ್ಲಿ ನೇಮಿಸುವ ರಾಂಡಮೈಸೇಷನ್ ಈ ವೇಳೆ ನಡೆಸಲಾಯಿತು. ಈ ಪ್ರಕಾರ ನೇಮಕಗೊಂಡ ಸಿಬ್ಬಂದಿಯ ಪಟ್ಟಿ ಚುನಾವಣೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ತಾವು ಕರ್ತವ್ಯ ಸಲ್ಲಿಸುತ್ತಿರುವ ಬ್ಲೋಕ್ ಗಳಲ್ಲಿ ಯಾ ವಸತಿ ಹೂಡಿರುವ ಬ್ಲೋಕ್ ಯಾ ನಗರಸಭೆಗಳಲ್ಲಿ ಅವರಿಗೆ ಕರ್ತವ್ಯ ಮಂಜೂರು ಮಾಡುವುದಿಲ್ಲ. ವಿಶೇಷ ಅಂಚೆ ಬಾಲೆಟ್ ವಿತರಣೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ವೀಕ್ಷಿಸಬಹುದಾಗಿದೆ. ಆದರೆ ವಿತರಣೆಯಲ್ಲಿ ಭಾಗಿಗಳಾಗುವುದಕ್ಕೆ ಅವಕಾಶಗಳಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಹಿರಿಯ ಪ್ರಜೆಗಳನ್ನು, ಮಕ್ಕಳನ್ನು ಯಾವ ಕಾರಣಕ್ಕೂ ಸ್ಪರ್ಶಿಸಕೂಡದು. ಮಾಸ್ಕ್, ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು ಇತ್ಯಾದಿ ಕೋವಿಡ್ ಕಟ್ಟುನಿಟ್ಟುಗಳನ್ನು, ಚುನಾವಣೆ ಆಯೋಗದ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿದರು.
ಸೂಕ್ಷ್ಮ ಮತಗಟ್ಟೆಗಳಲ್ಲಿ ಸಶಸ್ತ್ರ ಸೇನೆಯನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು, 180 ಬೂತ್ ಗಳು ಈ ಪಟ್ಟಿಯಲ್ಲಿವೆ. ಡಿ.13ರಂದು ಬೆಳಗ್ಗೆ 8 ಗಂಟೆಗೆ ಮುಂಚಿತವಾಗಿ ಜಿಲ್ಲೆಯ ಮತಗಟ್ಟೆಗಳನ್ನು ಸಾನಿಟೈಸೇಷನ್ ನಡೆಸಲಾಗುವುದು ಎಂದವರು ವಿವರಿಸಿದರು. ಚುನಾವಣೆ ಅಧಿಕಾರಿಗಳಿಗೆ ಡಿ.5ರಂದು ಮತಯಂತ್ರಗಳನ್ನು ವಿತರನೆ ನಡೆಸಲಾಗುವುದು, 6ರಂದು ಮತಯಂತ್ರಗಳಲ್ಲಿ ಕ್ಯಾಮಡಿಡೇಟ್ ಸೆಟ್ಟಿನಗ್ ನಡೆಸಲಾಗುವುದು. ಡಿ.13 ರ ವರೆಗೆ ಮತ್ತು ಮತದಾನದ ನಂತರ 2 ಹಂತಗಳಲ್ಲಿ ಸುರಕ್ಷಿತವಾಗಿ ಮತಯಂತ್ರಗಳನ್ನು ಸಂರಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.