ಪುಣೆ,: ಪುಣೆಯ ಕೊರೊನಾ ಲಸಿಕೆ ತಯಾರಿಕಾ ಕೇಂದ್ರವಾದ ಸೆರಂ ಇನ್‌ಸ್ಟಿಟ್ಯೂಟ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆದರ್ ಪೂನಾವಾಲಾ, ನಾವು ಆತ್ಮನಿರ್ಭರ ಭಾರತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇವೆ ಎಂದರು.
ಕೊವಿಶೀಲ್ಡ್ ಕುರಿತು ಮಾತನಾಡಿ, ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶದ ಕುರಿತು ಮಾತನಾಡಿದರು.
ಕೊವಿಶೀಲ್ಡ್ ಉತ್ಪಾದನೆಗಾಗಿ ಬ್ರಿಟನ್ ಕಂಪನಿ ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ.
ಸೆರಂ ಇನ್‌ಸ್ಟಿಟ್ಯೂಟ್ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಲಸಿಕೆಯನ್ನು ಉತ್ಪಾದಿಸುತ್ತದೆ. ವಿಜ್ಞಾನಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಹೇಳುವ ಪ್ರಕಾರ ದೇಶದಲ್ಲಿ ಇದೇ ಲಸಿಕೆ ಎಲ್ಲಕ್ಕಿಂತ ಮೊದಲು ಲಭ್ಯವಾಗುತ್ತದೆ.
1)ಲಸಿಕೆಯನ್ನು ಮೊದಲು ಭಾರತದಲ್ಲಿ ವಿತರಿಸಲಾಗುತ್ತದೆ. ಕೋವ್ಯಾಕ್ಸ್‌ನ್ನು ಆಫ್ರಿಕಾದಲ್ಲಿ ಬಳಕೆ ಮಾಡಲಾಗುತ್ತದೆ. ಆಸ್ಟ್ರಾಜೆನೆಕಾ ಲಸಿಕೆಯು ಯುಕೆ ಹಾಗೂ ಯುರೋಪ್ ದೇಶಗಳಲ್ಲಿ ಬಳಕೆಯಾಗುತ್ತದೆ. ಆದರೆ ಮೊದಲು ಭಾರತಕ್ಕೆ ಲಸಿಕೆಯನ್ನು ನೀಡುತ್ತೇವೆ ಎಂದರು.
ನಮ್ಮಲ್ಲಿ ಲಸಿಕೆ ತಯಾರಿಸಲು ಉತ್ತಮ ಸೌಲಭ್ಯಗಳಿವೆ, ಮುಂದಿನ ಜುಲೈನೊಳಗೆ 300-400 ಡೋಸ್‌ಗಳಷ್ಟು ಕೊರೊನಾ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ.
2) ಹಾಗೆಯೇ ಉತ್ತಮ ಬೆಲೆಯಲ್ಲಿ ಲಸಿಕೆಗಳು ದೊರೆಯಲಿವೆ, ಪ್ರಸ್ತುತ 50-60 ಮಿಲಿಯನ್ ಅಷ್ಟು ಲಸಿಕೆಗಳನ್ನು ಉತ್ಪಾದಿಸಲಾಗುತ್ತಿದೆ. ದೇಶದಲ್ಲಿ ಲಸಿಕೆ ಸೇಖರಣೆಗೆ ಶೀತಲಗೃಹಗಳನ್ನು ನಿರ್ಮಿಸಲಾಗುತ್ತಿದೆ. ಶೀಘ್ರವೇ ಆ ಕಾರ್ಯವೂ ಮುಗಿಲಯಲಿದೆ ಎಂದು ಹೇಳಿದರು.
3) ಶೀಘ್ರವೇ ತುರ್ತು ಬಳಕೆಗೆ ಅನುಮತಿ ಕೇಳಲಾಗುತ್ತಿದೆ.