ಕಾಸರಗೋಡು: ಉದಯಗಿರಿ ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಡಿ.1ರಿಂದ ಚಟುವಟಿಕೆ ಆರಂಭಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕಳೆದ ಜೂ.19ರಂದು ಉದ್ಘಾಟನೆಗೊಂಡಿದ್ದ ಹಾಸ್ಟೆಲ್ ಕೋವಿಡ್ 19 ಹಿನ್ನೆಲೆಯಲ್ಲಿ ಸಿ.ಎಫ್.ಎಲ್.ಟಿ.ಸಿ. ಆಗಿ ಚಟುವಟಿಕೆ ನಡೆಸಿಕೊಂಡು ಬರುತ್ತಿತ್ತು. ಆದರೆ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಸಿ.ಎಫ್.ಎಲ್.ಟಿ.ಸಿ.ಯ ಚಟುವಟಿಕೆ ನಿಲುಗಡೆ ಮಾಡಿ ಹಾಸ್ಟೆಲ್ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉದಯಗಿರಿ ವಕಿರ್ಂಗ್ ವಿಮೆನ್ಸ್ ಹಾಸ್ಟೆಲ್ ನಲ್ಲಿ ಇಬ್ಬರು ವಾಸಿಸಬಹುದಾದ ಕೊಠಡಿಗಳು, ಮೂವರು ವಾಸಿಸಬಹುದಾದ ಕೊಠಡಿಗಳು ಸಹಿತ 120 ಮಂದಿ ತಂಗುವ ಸೌಲಭ್ಯಗಳಿವೆ. 24 ತಾಸುಗಳ ಸೆಕ್ಯೂಟಿರಿಟಿ ಸೌಲಭ್ಯ, ಸಿಸಿ ಟಿವಿ ಸೌಲಭ್ಯ, ವಿಶಾಲ ಗ್ರಂಥಾಲಯ, ಕಲಿಕಾ ಕೊಠಡಿ, ಪ್ರತ್ಯೇಕ ಯೋಗ ತರಬೇತಿ ಸೌಲಭ್ಯ, ಎಲ್.ಇ.ಡಿ. ಪ್ರಾಜೆಕ್ಟರ್ ಸಹಿತ ಸಭಾಂಗಣ, ಭೋಜನಾಲಯ ಸಹಿತ ಎಲ್ಲ ಆಧುನಿಕ ಸೌಲಭ್ಯಗಳಿವೆ. ಟ್ವಿನ್ ಬಿಲ್ಡಿಂಗ್ ಮಾದರಿಯಲ್ಲಿ ನಿರ್ಮಿಸಿರುವ ಹಾಸ್ಟೆಲ್ ನಲ್ಲಿ ಕುಟುಂಬಶ್ರೀಯ ಪ್ರತ್ಯೇಕ ತರಬೇತಿ ಲಭಿಸಿರುವ ಪೂರ್ಣವಾಧಿಯ ಸಿಬ್ಬಂದಿಯನ್ನು ಹೊಂದಿರುವ ಕ್ಯಾಂಟೀನ್ ಸೌಲಭ್ಯವಿದೆ.
ನ.25 ವರೆಗೆ ಅರ್ಜಿ ಸಲ್ಲಿಕೆ:
ಈ ಹಾಸ್ಟೆಲ್ ನಲ್ಲಿ ಬರಿದಾಗಿರುವ ಸೀಟುಗಳಿಗಾಗಿ ಸರಕಾರಿ ಸಿಬ್ಬಂದಿ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರಂ ಕಲೆಕ್ಟರೇಟ್ ನ ಎಂ ಸೆಕ್ಷನ್ ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 04994-256266, 9446494919 ಸಂಪರ್ಕಿಸಬಹುದು.