ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಉಲ್ಲಂಘನೆಗಾಗಿ ಹೇರಲಾಗುವ ದಂಡವನ್ನು ಸರ್ಕಾರ ತೀವ್ರವಾಗಿ ಹೆಚ್ಚಿಸಿದೆ. ಮಾಸ್ಕ್ ಧರಿಸದಿರುವುದು ಸೇರಿದಂತೆ ಉಲ್ಲಂಘನೆಗಳಿಗೆ ದಂಡವನ್ನು ಹೆಚ್ಚಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ಪ್ರಸ್ತುತ ದಂಡವನ್ನು 200 ರೂ.ಇದ್ದು ಇನ್ನದು 500 ರೂ.ಗೆ ಹೆಚ್ಚಿಸಲಾಗಿದೆ. ಇತರ ಕೋವಿಡ್ ನಿಯಂತ್ರಣ ಉಲ್ಲಂಘನೆಗಾಗಿ ಈಗ ದಂಡವನ್ನು 500 ರೂ.ಗಳಿಂದ 5,000 ರೂ.ಗೆ ಹೆಚ್ಚಿಸಲಾಗಿದೆ. ಕ್ವಾರಂಟೈನ್ ಉಲ್ಲಂಘನೆ, ಲಾಕ್‍ಡೌನ್ ಉಲ್ಲಂಘನೆ ಮತ್ತು ಗುಂಪು ಸೇರುವ ಮೂಲಕ ಎಸಗುವ ಉಲ್ಲಂಘನೆಗಾಗಿ ಹೆಚ್ಚಿದ ದಂಡವನ್ನು ಪಾವತಿಸಬೇಕು.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಕುಸಿತದ ಹಾದಿಯಲ್ಲಿದೆ. ಕಳೆದ ಎರಡು ದಿನಗಳಿಂದ ಕೋವಿಡ್ ಪರೀಕ್ಷಾ ಸಕಾರಾತ್ಮಕತೆ ದರ ಹತ್ತಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ ಚಿಕಿತ್ಸೆಯಲ್ಲಿರುವ ಕೋವಿಡ್ ರೋಗಿಗಳ ಸಂಖ್ಯೆ 95,000 ದಿಂದ 75,000 ಕ್ಕೆ ಏರಿದೆ.