ದುಬೈ: ಐಪಿಎಲ್ 2020ರ ಕ್ವಾಲಿಫೈರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಫೈನಲ್ ಗೆ ಲಗ್ಗೆಯಿಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಫೈನಲ್ ನಲ್ಲಿ ಡೆಲ್ಲಿ ಮುಂಬೈ ವಿರುದ್ಧ ಸೆಣೆಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್ ಪೇರಿಸಿತ್ತು. ಬೃಹತ್ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಪೇರಿಸಲಷ್ಟೆ ಸಾಧ್ಯವಾಯಿತು. ಈ ಮೂಲಕ 17 ರನ್ ಗಳಿಂದ ಸೋಲು ಕಂಡಿದೆ.
ಡೆಲ್ಲಿ ಪರ ಸ್ಟೋಯಿನಿಸ್ 38, ಶಿಖರ್ ಧವನ್ 78, ಶ್ರೇಯಸ್ ಅಯ್ಯರ್ 21, ಶಿಮ್ರಾನ್ ಹೆಟ್ಮರ್ ಅಜೇಯ 43 ರನ್ ಪೇರಿಸಿದ್ದಾರೆ.
ಹೈದರಾಬಾದ್ ಪರ ಗಾರ್ಗ್ 17, ಮನೀಶ್ ಪಾಂಡೆ 21, ಕೇನ್ ವಿಲಿಯಮ್ಸನ್ 67, ಅಬ್ದುಲ್ ಸಮದ್ 33 ರನ್ ಪೇರಿಸಿದ್ದಾರೆ.