ಕಾಸರಗೋಡು: ಪ್ರತ್ಯೇಕ ಮತದಾತರ ಪಟ್ಟಿ ನವೀಕರಣ 2021 ಸಂಬಂಧ ವಿಚಾರಗಳ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜಿಲ್ಲಧಿಕಾರಿ ಕಚೇರಿಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ನ.16ರಂದು ಪ್ರಕಟಿಸಿರುವ ಕರಡು ಪಟ್ಟಿಯ ಸಂಬಂಧ ಆಕ್ಷೇಪಗಳಿದ್ದಲ್ಲಿ ಡಿ.15ರ ವರೆಗೆ ಸ್ವೀಕರಿಸಲಾಗುವುದು. 2003 ಜ.1 ಯಾ ಅದಕ್ಕಿಂತ ಮುನ್ನ ಜನಿಸಿದವರ ಹೆಸರನ್ನು ರಾಜ್ಯದ ವಿಧಾನಸಭೆ ಕ್ಷೇತ್ರಗಳ ಮತದಾತರ ಪಟ್ಟಿಯಲ್ಲಿ ಸೇರಿಸುವ ನಿಟ್ಟಿನಲ್ಲಿತಿತಿತಿ.ಟಿvsಠಿ.iಟಿಎಂಬ ವೆಬ್ ಸೈಟ್ ನ ಮೂಲಕ, ಮತದಾರ ಸಹಾಯ ವಾಣಿ ಎಂಬ ಮೊಬೈಲ್ ಅಪ್ಲಿಕೇಷನ್ ಮೂಲಕ ಅರ್ಜಿ ಸಲ್ಲಿಸಬಹುದು. ನೂತನವಾಗಿ ವಾಸಿಸುತ್ತಿರುವ ಪ್ರದೇಶದಲ್ಲಿ ಹೆಸರು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸದ್ರಿ ಹೆಸರು ಹೊಂದಿರುವ ಮತದಾತರ ಪಟ್ಟಿಯಲ್ಲಿ ಯಾವುದಾರರೂ ಲೋಪಗಳಿದ್ದಲ್ಲಿ ತಿದ್ದುಪಡಿ ನಡೆಸುವ ನಿಟ್ಟಿನಲ್ಲಿ ಆನ್ ಲೈನ್ ಮೂಲಕ ಸಔಲಭ್ಯಗಳಿವೆ. ನ.16ರಂದು ಪ್ರಕಟಿಸಿರುವ ಕರಡು ಪಟ್ಟಿಯ ನಕಲು ಜಿಲ್ಲೆಯ ಅಂಗೀಕೃತ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟ ಇಲೆಕ್ಟರಲ್ ರೆಜಿಸ್ಟ್ರೇಷನ್ ಅಧಿಕಾರಿ ಅವರ ಕಾರ್ಯಾಲಯದಲ್ಲಿ ವಿತರಣೆ ನಡೆಸಲಾಗುವುದು.
ಸಭೆಯಲ್ಲಿ ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ತಹಸೀಲ್ದಾರರಾದ ಎ.ವಿ.ರಾಜನ್, ಎನ್.ಮಣಿರಾಜ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಿ.ಎಚ್.ಕುಂಞಂಬು, ಎಂ.ಕುಂಞಂಬು ನಂಬ್ಯಾರ್, ಮೂಸಾ ಬಿ.ಚೆರ್ಕಳ, ಮಾನ್ಯುವೆಲ್ ಮೇಲತ್, ಕೆ.ಆರ್.ಜಯಾನಂದ ಉಪಸ್ಥಿತರಿದ್ದರು.