HEALTH TIPS

ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಲು 2024ರವರೆಗೆ ಕಾಯಬೇಕು: ಪೂನಾವಾಲ

     ನವದೆಹಲಿ: ಭಾರತದ ಪ್ರತಿಯೊಬ್ಬ ಪ್ರಜೆಗೂ ಕೋವಿಡ್-19 ಲಸಿಕೆ ಸಿಗಬೇಕು ಎಂದರೆ 2024ರವರೆಗೂ ಕಾಯಬೇಕು ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲ ಹೇಳಿದ್ದಾರೆ.

      ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯ (ಎಚ್‌ಟಿಎಲ್‌ಎಸ್) 18 ನೇ ಆವೃತ್ತಿಯ ಎರಡನೇ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಪೂನಾವಾಲಾ, 'ಲಸಿಕೆಯಿಂದಲೂ ಕೊನೆಯಾಗಲ್ಲ ಕೊರೋನಾ, ಹಲವು ವರ್ಷಗಳವರೆಗೆ ಇದರ ಪ್ರಭಾವ ಇರಲಿದೆ ಎಂದು ತಜ್ಞರ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. 

      ಅದಾಗ್ಯೂ ತಮ್ಮ ಲಸಿಕೆ ಶೇ.90ರಷ್ಟು ಕಾರ್ಯ ಮುಕ್ತವಾಗಿದ್ದು, ಅಂತಿಮ ಹಂತದಲ್ಲಿದೆ. ಇದುವರೆಗಿನ ಲಸಿಕೆ ವಯಸ್ಸಾದವರಲ್ಲಿಯೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾಬೀತಾಗಿದೆ. ಈ ಲಸಿಕೆಗಳು ದೀರ್ಘಾವಧಿಯಲ್ಲಿ ನಮ್ಮನ್ನು ರಕ್ಷಿಸುತ್ತದೆಯೇ ಎಂದು ಸಮಯ ಮಾತ್ರ ಹೇಳಬಲ್ಲದು ಎಂದು ಹೇಳಿದರು.

       ಲಸಿಕೆ ವಿಳಂಬಕ್ಕೆ ಸರಬರಾಜು ನಿರ್ಬಂಧಗಳು ಮಾತ್ರ ಕಾರಣವಲ್ಲ, ಆದರೆ ಬಜೆಟ್, ಲಸಿಕೆ, ಲಾಜಿಸ್ಟಿಕ್ಸ್, ಮೂಲಸೌಕರ್ಯಗಳು ಬೇಕಾಗಿರುತ್ತದೆ. ಹೀಗಾಗಿ ಜನರು ಲಸಿಕೆ ತೆಗೆದುಕೊಳ್ಳಲು ಕಾಯಬೇಕಾಗುತ್ತದೆ ಎಂದು ಹೇಳಿದರು.

        ಇಂದು ಮೊದಲ ಅಧಿವೇಶನವು ಕೋವಿಡ್ -19 ಅಧಿವೇಶನದೊಂದಿಗೆ ಪ್ರಾರಂಭವಾಯಿತು.ಈ ಅಧಿವೇಶನದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತು ಬ್ರೌನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡೀನ್ ಡಾ. ಆಶಿಶ್ ಜಾ ಅವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries