ನವದೆಹಲಿ: ದೇಶದಲ್ಲಿ 45 ಸಾವಿರದ 903 ಹೊಸ ಕೋವಿಡ್-19 ಸೋಂಕಿತರೊಂದಿಗೆ ಭಾರತದ ಒಟ್ಟು ಸೋಂಕಿತರ ಸಂಖ್ಯೆ 85 ಲಕ್ಷದ 53 ಸಾವಿರದ 657ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 490 ಮಂದಿ ಮೃತಪಡುವ ಮೂಲಕ ಒಟ್ಟು ಮೃತರ ಸಂಖ್ಯೆ 1 ಲಕ್ಷದ 26 ಸಾವಿರದ 611ಕ್ಕೇರಿದೆ.
ದೇಶದಲ್ಲಿ ಸದ್ಯ 5 ಲಕ್ಷದ 09 ಸಾವಿರದ 673 ಸಕ್ರಿಯ ಕೇಸುಗಳಿದ್ದು ಕಳೆದ 24 ಗಂಟೆಗಳಲ್ಲಿ ಸಕ್ರಿಯ ಕೇಸುಗಳ ಸಂಖ್ಯೆ 2,992ರಷ್ಟು ಕಡಿಮೆಯಾಗಿದೆ. ಒಟ್ಟು ಗುಣಮುಖ ಹೊಂದಿದವರ ಸಂಖ್ಯೆ 79 ಲಕ್ಷದ 17 ಸಾವಿರದ 373 ಆಗಿದ್ದು 48 ಸಾವಿರದ 405 ಮಂದಿ ಹೊಸದಾಗಿ ಗುಣಮುಖ ಹೊಂದಿದ್ದಾರೆ.