ತಿರುವನಂತಪುರ: ಕೋವಿಡ್ ಸಂಬಂಧಿಸಿದಂತೆ ಲಾಕ್ ಡೌನ್ ಪ್ರಾರಂಭವಾದ ಬಳಿಕ ವಿವಿಧ ಜಿಲ್ಲೆಗಳಿಂದ 2868 ಕೌಟುಂಬಿಕ ಕಲಹದ ಪ್ರಕರಣಗಳನ್ನು ಪೋಲೀಸರು ಸ್ವೀಕರಿಸಿದ್ದಾರೆ. ಲಾಕ್ ಡೌನ್ ಆರಂಭದ ದಿನದಿಂದ ಅಕ್ಟೋಬರ್ 31 ರ ವರೆಗೆ ಈ ದೂರುಗಳನ್ನು ಸ್ವೀಕರಿಸಲಾಗಿದೆ.
ಸ್ವೀಕರಿಸಿದ 2,757 ದೂರುಗಳಲ್ಲಿ ಜಿಲ್ಲಾ ಪೋಲೀಸ್ ಮುಖ್ಯಸ್ಥರು ಬಹುತೇಕ ತೀರ್ಪು ನೀಡಿದ್ದಾರೆ. ಉಳಿದ 111 ಮಂದಿಯಲ್ಲಿ ಐಜಿ ಮತ್ತು ಮಹಿಳಾ ಸೆಲ್ ಎಸ್‍ಪಿ ನೇತೃತ್ವದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲು ರಾಜ್ಯ ಪೋಲೀಸ್ ಮುಖ್ಯಸ್ಥರು ಪೆÇಲೀಸ್ ಪ್ರಧಾನ ಕಚೇರಿಗೆ ನಿರ್ದೇಶನ ನೀಡಿರುವರು.
ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾದ ಡೊಮೆಸ್ಟಿಕ್ ಕಾಂಪ್ಲಿಕೇಟ್ ರೆಸಲ್ಯೂಶನ್ ಸೆಂಟರ್ ಗಳ ಆದೇಶದ ಮೇರೆಗೆ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಆನ್‍ಲೈನ್ ನ್ಯಾಯಾಲಯಕ್ಕೆ ಹಾಜರಾದ ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಅವರು ಹಲವಾರು ಜನರ ದೂರುಗಳನ್ನು ಆಲಿಸಿ ಪರಿಹಾರಗಳನ್ನು ಸೂಚಿಸಿದರು.
ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿದ ದೂರುಗಳ ಮೇಲೆ ಪ್ರಕರಣವನ್ನು ನೋಂದಾಯಿಸಲು ಮತ್ತು ನ್ಯಾಯಾಲಯದಲ್ಲಿ ಚಾರ್ಜ್‍ಶೀಟ್ ಸಲ್ಲಿಸಲು ಬಹಳಷ್ಟು ಸಮಯಾವಕಾಶ ಬೇಕಾಗುವ ಪ್ರಕ್ರಿಯೆಯಾಗಿದೆ. ಹೊಸ ವ್ಯವಸ್ಥೆಯು ದೂರುದಾರರು ಮತ್ತು ಪ್ರತಿವಾದಿಗಳೊಂದಿಗೆ ಸಮಾಲೋಚನೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಪೋಲೀಸರಿಗೆ ಮಾತ್ರವಲ್ಲ ದೂರುದಾರರು ಮತ್ತು ಪ್ರತಿವಾದಿಗಳಿಗೂ ಇದು ತುಂಬಾ ಅನುಕೂಲಕರವಾಗಿದೆ. ದೂರುದಾರರು ಮತ್ತು ಪ್ರತಿವಾದಿಗಳು ಆಗಾಗ್ಗೆ ತಮ್ಮ ಮನಸ್ಸನ್ನು ತೆರೆದುಕೊಳ್ಳುತ್ತಾರೆ ಮತ್ತು ಪರಸ್ಪರ ಮಾತನಾಡುತ್ತಾರೆ. ಇದರಿಂದ ಪರಿಹಾರಕ್ಕೆ ಕಾರಣವಾಗುತ್ತದೆ. ಇದರಲ್ಲಿ ಪೋಲೀಸರು ನಿರ್ಣಾಯಕ ಪಾತ್ರ ವಹಿಸುವರು.
ದೂರುಗಳನ್ನು ಪರಿಹರಿಸುವಲ್ಲಿ ಪೆÇಲೀಸರ ಜಾಗರೂಕತೆ ಮತ್ತು ಸಮರ್ಪಣೆ ಈ ಯೋಜನೆಯ ಯಶಸ್ಸನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿದೆ. ಆದ್ದರಿಂದ ಕೌಟುಂಬಿಕ ಹಿಂಸೆಯ ದೂರುಗಳನ್ನು ಪರಿಗಣಿಸಿ ಪರಿಹರಿಸುವಲ್ಲಿ ವಿಶೇಷ ಕಾಳಜಿ ವಹಿಸುವಂತೆ ಡಿಜಿಪಿ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿರುವರು.
ರಾಜ್ಯದ ವಿವಿಧ ಜಿಲ್ಲೆಗಳ ಇಪ್ಪತ್ತು ಮಹಿಳೆಯರು ಆನ್‍ಲೈನ್ ನ್ಯಾಯಾಲಯದಲ್ಲಿ ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಡಿಜಿಪಿ ದೂರುಗಳಿಗೆ ಪರಿಹಾರ ಸೂಚಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿರುವರು.