ಪಾಟ್ನಾ: ಚುನಾವಣಾ ಆಯೋಗದ ವೆಬ್ ಸೈಟ್ ಪ್ರಕಾರ, ಕೆಲವು ಸುತ್ತಿನ ಮತಗಳ ಎಣಿಕೆ ನಂತರ ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ 29 ಸ್ಥಾನಗಳ ಪೈಕಿಯಲ್ಲಿ 18 ಕ್ಷೇತ್ರಗಳಲ್ಲಿ ಎಡ ಪಕ್ಷಗಳು ಮುನ್ನಡೆ ಕಾಯ್ದುಕೊಂಡಿವೆ.
ಪಕ್ಷದ ಸದಸ್ಯರ ಭಿನ್ನಾಭಿಪ್ರಾಯದ ಹೊರತಾಗಿಯೂ ಆರ್‍ಜೆಡಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಮೂರು ಎಡಪಕ್ಷಗಳಿಗೆ 29 ಸ್ಥಾನಗಳನ್ನು ತೇಜಶ್ವಿ ಯಾದವ್ ನೀಡಿದ್ದರು. ಸಿಪಿಐ(ಎಂ)ಗೆ ನಾಲ್ಕು, ಸಿಪಿಐಗೆ ಆರು ಮತ್ತು ಸಿಪಿಐ-ಎಂಎಲ್ ಗೆ 19 ಸ್ಥಾನಗಳನ್ನು ನೀಡಲಾಗಿತ್ತು. 2015ರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಗೆದಿದ್ದ ಕೆಲವು ಕ್ಷೇತ್ರಗಳು ಇದರಲ್ಲಿ ಸೇರಿವೆ.
ಚುನಾವಣಾ ಆಯೋಗದ ವೆಬ್ ಸೈಟ್ ಪ್ರಕಾರ, ಸಿಪಿಐ(ಎಂ) ಮತ್ತು ಸಿಪಿಐ ತಲಾ ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಸಿಪಿಐ-ಎಂಎಲ್ 12 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇನ್ನೂ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಇದೊಂದು ವಿಭಿನ್ನ ರೀತಿಯ ಚುನಾವಣೆಯಾಗಿದೆ. ಯುವ ಅಭ್ಯರ್ಥಿಗಳು, ವಿದ್ಯಾರ್ಥಿ ಮುಖಂಡರು, ರೈತ ಪರ ಹೋರಾಟಗಾರರು, ಕಾರ್ಮಿಕರು ತುಂಬಾ ಶ್ರಮಿಸಿರುವುದಾಗಿ ಸಿಪಿಐ- ಎಂಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.
ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಯೊಂದಿಗೆ ಎಡಪಕ್ಷಗಳು ಚುನಾವಣೆಯನ್ನು ಎದುರಿಸಿದ್ದು, ಮೂರು ಪಕ್ಷಗಳ ಮುನ್ನಡೆ ಮಹಾಘಟ್ ಬಂಧನ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ನೆರವಾಗಲಿದೆ ಎಂದು ಎಡಪಕ್ಷಗಳ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.