ಕುವೈಟ್: ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತತೆಗಾಗಿ ಕುವೈಟ್ ಗೆ 34 ದೇಶಗಳಿಂದ ನೇರ ಪ್ರವೇಶವನ್ನು ನಿಷೇಧಿಸಿರುವ ಆದೇಶವನ್ನು ಪ್ರಧಾನಿ ಶೇಖ್ ಸಬಾ ಖಾಲಿದ್ ಅಲ್ ಹಮದ್ ಅಸಬಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಮತ್ತೆ ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಹಿಂದೆ, ಕುವೈತ್ ಏರ್‍ವೇಸ್ ಮತ್ತು ಜಜೀರಾ ಏರ್‍ವೇಸ್ ನಿಷೇಧಿತ ದೇಶಗಳಿಂದ ಬಂದವರಿಗೆ ಷರತ್ತುಗಳೊಂದಿಗೆ ನೇರವಾಗಿ ಕುವೈತ್‍ಗೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ಪ್ರಸ್ತಾಪಿಸಿತ್ತು. ಈ ಕುರಿತು ಚರ್ಚಿಸಲು ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಅನೇಕರ ವೀಸಾ ಅವಧಿ ಈಗಾಗಲೇ ಮುಗಿದಿವೆ. ಕುವೈಟ್ ನಲ್ಲಿ ನೂರಾರು ಜನರು ಇದರಿಂದ ಅತಂತ್ರಗೊಂಡಿದ್ದಾರೆ. ಇದೇ ವೇಳೆ ಐದನೇ ಹಂತದ ಅನ್ಲಾಕ್ ಅನ್ನು ಸದ್ಯಕ್ಕೆ ಪ್ರಾರಂಭಿಸದಿರಲು ಕ್ಯಾಬಿನೆಟ್ ನಿರ್ಧರಿಸಿತು.