HEALTH TIPS

ಕೋವಿದ್ -ಕೇರಳದಲ್ಲಿ ಇಂದು 3593 ಮಂದಿಗೆ ಸೋಂಕು- 5983 ಮಂದಿ ಗುಣಮುಖ: ಕಾಸರಗೋಡು 75 ಮಂದಿಗೆ ಸೋಂಕು


             ತಿರುವನಂತಪುರ: ಕೇರಳದಲ್ಲಿ ಇಂದು 3593 ಜನರಿಗೆ ಕೋವಿಡ್ ನಿಖರಪಡಿಸಲಾಗಿದೆ. 5983 ಮಂದಿ ಚಿಕಿತ್ಸೆ ಪೂರ್ಣಗೊಳಿಸಿ ಗುಣಮುಖರಾಗಿದ್ದಾರೆ. 

               79,410 ಚಿಕಿತ್ಸೆಯಲ್ಲಿ: 

     ಇಂದು ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ಕೇರಳದಲ್ಲಿ 79,410 ಮಂದಿ ಈಗಲೂ ಚಿಕಿತ್ಸೆಯಲ್ಲಿದ್ದಾರೆ. ಈವರೆಗೆ 4,08,460 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. ಇಂದು 22 ಮಂದಿ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 1714 ಏರಿಕೆಯಾಗಿದೆ. ಇಂದು, ಸೋಂಕು ದೃಢಪಟ್ಟವರಲ್ಲಿ 61 ಮಂದಿ ರಾಜ್ಯದ ಹೊರಗಿಂದ ಬಂದವರಾಗಿದ್ದಾರೆ. ಸಂಪರ್ಕದ ಮೂಲಕ 3070 ಜನರಿಗೆ ಸೋಂಕು ತಗಲಿದೆ. 409 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 53 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ. 

             ಸಕಾರಾತ್ಮಕ ಪ್ರಕರಣಗಳ ಸಂಖ್ಯೆ:

     ಕೇರಳದಲ್ಲಿ ಇಂದು 3593 ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಹೆಚ್ಚು ಸೋಂಕು ಬಾಧಿತರು ವರದಿಯಾಗಿದೆ. ಮಲಪ್ಪುರಂ 548, ಕೋಝಿಕ್ಕೋಡ್  479, ಎರ್ನಾಕುಳಂ 433, ತ್ರಿಶೂರ್ 430, ಆಲಪ್ಪುಳ 353, ತಿರುವನಂತಪುರ 324, ಕೊಲ್ಲಂ 236, ಪಾಲಕ್ಕಾಡ್ 225, ಕೊಟ್ಟಾಯಂ 203, ಕಣ್ಣೂರು 152, ಕಾಸರಗೋಡು 75, ವಯನಾಡ್ 50, ಪತ್ತನಂತಿಟ್ಟು 43, ಇಡುಕ್ಕಿ 42 ಎಂಬಂತೆ ಸೋಂಕು ಬಾಧಿಸಿದೆ.  

          ಗುಣಮುಖರಾದವರ ವಿವರಗಳು: 

    ಚಿಕಿತ್ಸೆಯಲ್ಲಿರುವ 5983 ಜನರ ಪರೀಕ್ಷಾ ಫಲಿತಾಂಶಗಳು ಇಂದು ನಕಾರಾತ್ಮಕವಾಗಿವೆ.  ತಿರುವನಂತಪುರಂ 452, ಕೊಲ್ಲಂ 454, ಪತ್ತನಂತಿಟ್ಟು 147, ಆಲಪ್ಪುಳ 792, ಕೊಟ್ಟಾಯಂ 423, ಇಡುಕ್ಕಿ 49, ಎರ್ನಾಕುಳಂ 827, ತ್ರಿಶೂರ್ 904, ಪಾಲಕ್ಕಾಡ್ 429, ಮಲಪ್ಪುರಂ 560, ಕೋಝಿಕ್ಕೋಡ್ 618, ವಯನಾಡ್ 104, ಕಣ್ಣೂರು 133, ಕಾಸರಗೋಡು 91, ಎಂಬಂತೆ ಗುಣಮುಖರಾಗಿರುವರು. 

         22 ಮಂದಿ ಕೋವಿಡ್ ನಿಂದ ಮೃತ್ಯು:

    ಕಳೆದ 24 ಗಂಟೆಗಳಲ್ಲಿ 22 ಸಾವುಗಳನ್ನು ರಾಜ್ಯ ಖಚಿತಪಡಿಸಿದೆ. ತಿರುವನಂತಪುರ ಅಟ್ಟಕುಳಂಗರದ ಮುಸ್ತಫಾ (75),  ಅರುವಿಕ್ಕರದ ನಾರಾಯಣ್ ನಾಡರ್ (78), ಪೆರುಮ್ಕುಲಂನ ಅಮೀನ್ (66), ಪ್ಲುಮುಟ್ಟುಕೋಡೆಯ ಚಿನ್ನ ಪಿಳ್ಳೈ (85), ನಯ್ಯಾಟ್ಟಿಂಕರದ ತಂಕಮ್ (58), ಅತ್ತಿಂಗಳದ ವಸಂತ (62), ಕೊಳಂಬಂನ ಪೆರಿನಾಡ್‍ನ ಥಾಮಸ್ (71), ನೆಯ್ಯಾಟಿಂಗರದ ನಾಗರಾಜನ್ (69),ಕೊಲ್ಲಂ ಪೆರಿಯಾಡ್ ನ ಮೊಹಮ್ಮದ್ ನಸೀಬ್(13), ಕೊಟ್ಟಾರಕ್ಕರದ ಶ್ರೀಧರ ಶರ್ಮಾ (79), ಚವರದ ಶಿವಶಂಕರ ಪಿಳ್ಳೈ (77), ಆಲಪ್ಪುಳ ಮುತುಕುಳಂನ  ಸರಸ್ವತಿ (51), ಚೇರ್ತಲದ ಬಾಲಕೃಷ್ಣನ್ (72), ಎಳಯಿರಪುಳದ  ಮೋಹನನ್ (57), ಪಲ್ಲಿಪಟ್ಟಮುರಿಯ ಶೀಬಾ (36) , ಎರ್ನಾಕುಳಂ ಕುನ್ನಿಪುಳ್ಳಿಶ್ಚೇರಿಯ ಪಿ.ಎ. ಪೌಲಸ್ (85), ಮುಂಡಂಪೇಲಿಯ ಡೇವಿಡ್ (72), ಎರೂರಿನಿಂದ ದೇವಯಾನಿ ವಾಸುದೇವನ್ (80), ಮಲಪ್ಪುರಂ ಅರಿಕೋಡ್‍ನ ಅಬ್ದುರಹ್ಮಾನ್ (87), ವಯನಾಡ್ ವಡುವಾಂಚಲ್‍ನ ಗೋಪಾಲನ್ (68), ಬತ್ತೇರಿಯ  ಪಾರ್ವತಿ (85), ಕಣ್ಣೂರು ಚೆರುಕುನ್ನುನ  ಎ.ವಿಶಾಲ್(37) ಎಂಬವರು ಕೋವಿಡ್ ನಿಂದ ಮೃತ ಪಟ್ಟವ್ಯಕ್ತಿಗಳಾಗಿದ್ದಾರೆ. ಈ ಮೂಲಕ ಕೋವಿಡ್ ನಿಂದ ಮೃತರಾದವರ ಒಟ್ಟು ಸಾವಿನ ಸಂಖ್ಯೆ 1714 ಕ್ಕೆ ಏರಿಕೆಯಾಗಿದೆ.    

               

                    ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 75 ಮಂದಿಗೆ ಕೋವಿಡ್ ಪಾಸಿಟಿವ್ : 91 ಮಂದಿಗೆ ಕೋವಿಡ್ ನೆಗೆಟಿವ್ 

       ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 75 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 91 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

           ಪಾಸಿಟಿವ್ ಆದವರ ಮಾಹಿತಿ: 

   ಪಾಸಿಟಿವ್ ಆದವರಲ್ಲಿ 67 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 8 ಮಂದಿ ಇತರ ರಾಜ್ಯಗಳಿಂದ ಮಂದಿಗೆ ರೋಗ ಖಚಿತಗೊಂಡಿದೆ. 

          ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ

      ಕಾಸರಗೋಡು ನಗರಸಭೆ 4, ಮಧೂರು ಪಂಚಾಯತ್ 7, ಮುಳಿಯಾರು ಪಂಚಾಯತ್ 2, ಮಂಜೇಶ್ವರ ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 2, ಚೆಂಗಳ ಪಂಚಾಯತ್ 4, ಬೇಡಡ್ಕ ಪಂಚಾಯತ್ 1, ಕಾಞಂಗಾಡ್ ನಗರಸಭೆ 10, ಪಿಲಿಕೋಡ್ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 5, ಮಡಿಕೈ ಪಂಚಾಯತ್ 3, ಅಜಾನೂರು ಪಂಚಾಯತ್ 1, ನೀಲೇಶ್ವರ ನಗರಸಭೆ 25, ತ್ರಿಕರಿಪುರ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 5 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.  

               ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:

    ಕಾಸರಗೋಡು ನಗರಸಭೆ 7, ಮಧೂರು ಪಂಚಾಯತ್ 2, ಪುತ್ತಿಗೆ ಪಂಚಾಯತ್ 1, ಪೈವಳಿಕೆ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 4, ಕುಂಬಳೆ ಪಂಚಾಯತ್ 1, ಕಾರಡ್ಕ ಪಂಚಾಯತ್ 1, ಚೆಂಗಳ ಪಂಚಾಯತ್ 7,ಚೆಮ್ನಾಡ್ ಪಂಚಾಯತ್ 3, ಕಾಞಂಗಾಡ್ ನಗರಸಭೆ 7, ಅಜಾನೂರು ಪಂಚಾಯತ್ 6, ಬಳಾಲ್ ಪಂಚಾಯತ್ 2, ಕಳ್ಳಾರ್ ಪಂಚಾಯತ್ 1, ಉದುಮಾ ಪಂಚಾಯತ್ 1, ಪಿಲಿಕೋಡ್ ಪಂಚಾಯತ್ 3, ಪನತ್ತಡಿ ಪಂಚಾಯತ್ 3, ಪಳ್ಳಿಕ್ಕರೆ ಪಂಚಾಯತ್ 6, ಚೆರುವತ್ತೂರು ಪಂಚಾಯತ್ 17, ನೀಲೇಶ್ವರ ನಗರಸಭೆ 7, ವಲಿಯಪರಂಬ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 4 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 

                     ನಿಗಾ: 

      ಕಾಸರಗೊಡು ಜಿಲ್ಲೆಯಲ್ಲಿ 4975 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 4420 ಮಂದಿ, ಸಾಂಸ್ಥಿಕವಾಗಿ 555 ಮಂದಿ ನಿಗಾದಲ್ಲಿರುವರು. ನೂತನವಾಗಿ 284 ಮಂದಿ ನಿಗಾ ಪ್ರವೇಶಿಸಿದ್ದಾರೆ. 83 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 166 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 55 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 

                   ಒಟ್ಟು ಗಣನೆ: 

     ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 19790 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 18048 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 983 ಮಂದಿ ವಿದೇಶಗಳಿಂದ, 759 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 18070 ಮಂದಿಗೆ ಈ ವರೆಗೆ ಕೋವಿಡ್ ನೆಗೆಟಿವ್ ಆಗಿದೆ. 

          ಹೊಸತಾಗಿ 5 ಮರಣಗಳು:

    ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ನೂತನವಾಗಿ 5 ಮರಣಗಳು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಕುಂಬ್ಡಾಜೆ ಪಂಚಾಯತ್ ನ ಅಬ್ದುಲ್ಲ(58), ಬೆಳ್ಳೂರು ಪಂಚಾಯತ್ ನ ಪದ್ಮನಾಭ ಬಲ್ಲಾಳ್(72), ಬೇಡಡ್ಕ ಪಂಚಾಯತ್ ನ ವಿಜಯನ್ ನಾಯರ್ ಎ.(47), ಕಾಞಂಗಾಡ್ ನಗರಸಭೆಯ ಕುಂuಟಿಜeಜಿiಟಿeಜಪೆಣ್ಣ್(75), ಅಜಾನೂರು ಪಂಚಾಯತ್ ನ ಹರಿದಾಸ್(58) ಎಂಬವರು ಕೋವಿಡ್ ಬಾಧೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ ಈ ವರೆಗೆ ಒಟ್ಟು 209 ಆಗಿದೆ. 


                      

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries