ಅಂಬಾಲ: ಕೊರೋನಾ ವೈರಸ್ ಗೆ ಲಸಿಕೆ ಕೋವ್ಯಾಕ್ಸಿನ್? ಕ್ಲಿನಿಕಲ್? ಟ್ರಯಲ್ ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ನಡೆಯಲಿದ್ದು, ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಪ್ರೇರಿತವಾಗಿ ಶುಕ್ರವಾರ ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ.
ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಟ್ರಯಲ್ ನಲ್ಲಿದ್ದು, ಸುರಕ್ಷಾ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.
ಹರಿಯಾಣದಲ್ಲಿ ಇಂದಿನಿಂದ ಮೂರನೇ ಹಂತದ ಪ್ರಯೋಗ ಆರಂಭವಾಗಿದ್ದು, ಅನಿಲ್ ವಿಜ್ ಅವರು ಸ್ವಯಂಸೇವಕರಾಗಿ ಅಂಬಾಲ ಆಸ್ಪತ್ರೆಯಲ್ಲಿ ಮೊದಲ ಲಸಿಕೆಯನ್ನು ಪಡೆದಿದ್ದಾರೆ.
ಭಾರತದ ಕಂಪನಿಯೊಂದು ಕೊರೋನಾ ವೈರಸ್‍ಗೆ ಲಸಿಕೆ ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ. ಎರಡು ಹಂತಗಳಲ್ಲಿ ಯಶಸ್ವಿ ಪ್ರಯೋಗಗಳು ನಡೆದಿವೆ ಮತ್ತು ಮೂರನೇ ಹಂತ ಇಂದು ಪ್ರಾರಂಭವಾಗಿದೆ. ನಾನು ಮೊದಲ ಸ್ವಯಂಸೇವಕನಾಗಲು ಅವಕಾಶ ಪಡೆದಿದ್ದೇನೆ. ಯಾವುದೇ ಭಯವಿಲ್ಲದ ಜನರು ವ್ಯಾಕ್ಸಿನೇಷನ್ ಪ್ರಯೋಗಗಳಿಗೆ ಮುಂದೆ ಬರಬೇಕು. ಎಲ್ಲವೂ ಸರಿಯಾಗಿ ನಡೆದರೆ, ಈ ಲಸಿಕೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ”ಎಂದು ಅನಿಲ್ ವಿಜ್ ಅವರು ಎಎನ್‍ಐಗೆ ತಿಳಿಸಿದ್ದಾರೆ.