ತಿರುವನಂತಪುರ: ಕೆಎಸ್‍ಎಫ್‍ಇ ನಡೆಸಿದ ತಪಾಸಣೆಯಲ್ಲಿ ವಿಶೇಷತೆ ಏನೂ ಇಲ್ಲ. ಅದು ಅದರ ಸಾಮಾನ್ಯ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಆಯ್ದ 40 ಶಾಖೆಗಳಲ್ಲಿ ವಿಜಿಲೆನ್ಸ್ ನಿರ್ದೇಶಕರ ಅನುಮತಿಯೊಂದಿಗೆ ತಪಾಸಣೆ ನಡೆಸಲಾಗಿದೆ ಎಂದು ಸಿಎಂ ಹೇಳಿದರು. ವಿಜಿಲೆನ್ಸ್ ತನ್ನದೇ ಆದ ತಪಾಸಣೆ ವಿಧಾನಗಳನ್ನು ಹೊಂದಿದೆ ಎಂದು ಅವರು ಹೇಳಿದರು.
ಇದು ಮೊದಲ ವಿಜಿಲೆನ್ಸ್ ತಪಾಸಣೆ ಏನೂ ಅಲ್ಲ. ಮತ್ತು ಈ ಹಿಂದೆಯೂ 218ರಲ್ಲಿ ಇಂತಹ ತಪಾಸಣೆ ನಡೆದಿತ್ತು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ವಿಜಿಲೆನ್ಸ್ ಚೆಕ್ಕಿಂಗ್ ಎಂದರೆ ತಕ್ಷಣದ ಕ್ರಮ ಎಂದು ಅರ್ಥವಲ್ಲ. ತಪಾಸಣೆ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಕ್ರಮ ಕೈಗೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಮಿಂಚಿನ ತಪಾಸಣೆ ನಡೆಸಲು ವಿಜಿಲೆನ್ಸ್‍ಗೆ ಅಧಿಕಾರವಿದೆ ಎಂದು ಸಿಎಂ ಹೇಳಿದರು.
ಸರ್ಕಾರಿ ಮತ್ತು ಅರೆ-ಸರ್ಕಾರಿ ಸಂಸ್ಥೆಗಳಲ್ಲಿ ಯಾವುದೇ ಅಕ್ರಮಗಳನ್ನು ಪತ್ತೆ ಮಾಡುವ ಭಾಗವಾಗಿ ಇಂತಹ ತಪಾಸಣೆ ನಡೆಸಲಾಗುತ್ತದೆ. ವಿಜಿಲೆನ್ಸ್‍ನ ಗುಪ್ತಚರ ಘಟಕವು ಯಾವುದೇ ಸರ್ಕಾರಿ ಸಂಸ್ಥೆಯಲ್ಲಿನ ಯಾವುದೇ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಹಕ್ಕು ಹೊಂದಿದೆ ಎಮದು ಪಿಣರಾಯಿ ವಿಜಯನ್ ತಿಳಿಸಿದರು.
ವರದಿ ಸರಿಯಾಗಿದೆ ಎಂದು ಕಂಡುಬಂದಲ್ಲಿ, ಘಟಕದ ಮುಖ್ಯಸ್ಥರು ಮೂಲ ವರದಿಯನ್ನು ಸಿದ್ಧಪಡಿಸುತ್ತಾರೆ. ಆ ವ್ಯಾಪ್ತಿಯ ಪೆÇಲೀಸ್ ಅಧೀಕ್ಷಕರ ಮೂಲಕ ಮಿಂಚಿನ ತಪಾಸಣೆ ಆದೇಶಕ್ಕಾಗಿ ಅದನ್ನು ವಿಜಿಲೆನ್ಸ್ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ. ವಿಜಿಲೆನ್ಸ್ ಪ್ರಧಾನ ಕಚೇರಿಯಲ್ಲಿ ಇದನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿದ್ದರೆ ಮಿಂಚಿನ ಪರೀಕ್ಷೆಗೆ ದಿನಾಂಕ ಮತ್ತು ಆದೇಶವನ್ನು ಹೊಂದಿಸುತ್ತದೆ. ಮಿಂಚಿನ ಪರಿಶೀಲನೆಗೆ ವಿಜಿಲೆನ್ಸ್ ನಿರ್ದೇಶಕರ ಅನುಮತಿ ಅಗತ್ಯವಿದೆ. ಬೇರೆ ರೀತಿಯ ಅನುಮತಿ ಪಡೆಯಬೇಕಿಲ್ಲ ಎಂದು ಸಿಎಂ ಹೇಳಿದರು.
ಕೆಎಸ್‍ಎಫ್‍ಇ ಕಚೇರಿಗಳಲ್ಲಿ ಕೆಲವು ನ್ಯೂನತೆಗಳಿವೆ ಎಂದು ವಿಜಿಲೆನ್ಸ್ ಕಂಡುಹಿಡಿದಿದೆ. ಇದು ಕೆಎಸ್‍ಎಫ್‍ಇಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜಿಲೆನ್ಸ್ ಕಳವಳ ವ್ಯಕ್ತಪಡಿಸಿದೆ. ಮಲಪ್ಪುರಂ ವಿಜಿಲೆನ್ಸ್ ಸೆಲ್ ಡಿವೈಎಸ್ಪಿ ಈ ವಿಷಯವನ್ನು ಅಕ್ಟೋಬರ್ 19 ರಂದು ವರದಿ ಮಾಡಿದೆ. ಅಕ್ಟೋಬರ್ 27 ರಂದು ವಿಜಿಲೆನ್ಸ್ ಎಸ್ಪಿ ಪ್ರಧಾನ ಕಚೇರಿಗೆ ವರದಿಯನ್ನು ಕಳುಹಿಸಿದ್ದು, ಮಿಂಚಿನ ತಪಾಸಣೆ ನಡೆಸುವುದು ಉತ್ತಮ ಎಂದು ನಿರ್ಧರಿಸಲಾಗಿತ್ತು. ಪ್ರಧಾನ ಕಚೇರಿಗಳಲ್ಲಿ ಪರಿಶೀಲಿಸಿದ ಬಳಿಕ ನವೆಂಬರ್ 10 ರಂದು, ವಿಜಿಲೆನ್ಸ್ ನಿರ್ದೇಶಕರು ತಪಾಸಣೆಗೆ ಅನುಮತಿ ನೀಡುವ ಆದೇಶವನ್ನು ಹೊರಡಿಸಿದರು. 40 ಕೆಎಸ್‍ಎಫ್‍ಇ ಶಾಖೆಗಳಲ್ಲಿ ತಪಾಸಣೆ ನಡೆಸಲಾಯಿತು. ವರದಿ ಲಭ್ಯವಾದ ನಂತರ ಕ್ರಮಕ್ಕಾಗಿ ವಿವರವಾದ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಸಿಎಂ ಹೇಳಿದರು.
ಇದರ ಜೊತೆಗೆ, ಯುಡಿಎಫ್ ಎಲ್ಡಿಎಫ್ ಸರ್ಕಾರದ ಅಧಿಕಾರಾವಧಿಯಲ್ಲಿ ಇಂತದೇ ಜಾಗ್ರತೆಗಾಗಿ ವಿವಿಧ ಸಂಸ್ಥೆಗಳ ಮೇಲೆ ನಡೆಸಿದ ತಪಾಸಣೆ ದಿನಾಂಕಗಳು ಮತ್ತು ಸಂಖ್ಯೆಗಳನ್ನು ವಿವರಿಸಲಾಗಿದೆ. ರಮಣ್ ಶ್ರೀವಾಸ್ತವ ವಿರುದ್ಧದ ಆರೋಪಗಳನ್ನು ಮುಖ್ಯಮಂತ್ರಿ ನಿರಾಕರಿಸಿದ್ದಾರೆ. ವಿಜಿಲೆನ್ಸ್ ತನಿಖೆಯಲ್ಲಿ ಶ್ರೀವಾಸ್ತವ ಅವರಿಗೆ ಯಾವುದೇ ಪಾತ್ರವಿಲ್ಲ ಮತ್ತು ಯಾವುದನ್ನೂ ನೇರವಾಗಿ ನಿಯಂತ್ರಿಸಲು ಅಥವಾ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು. ಕೆಎಸ್‍ಎಫ್‍ಇ ವಿಷಯದಲ್ಲಿ ಅವರ ಅಥವಾ ಥಾಮಸ್ ಐಸಾಕ್, ಅಲ್ಲದೆ ಅನಂತಲವತ್ತಂ ಆನಂದ್ ನಡುವೆ ಬಿರುಕು ಮೂಡಿಸುವ ಯಾವುದೇ ಪ್ರಯತ್ನ ಆಗುವುದಿಲ್ಲ. ಮತ್ತು ಅಂತದ್ದು ಉಂಟಾಗದೆಂದು ಸಿಎಂ ಹೇಳಿದರು.
ಕೆಎಸ್‍ಎಫ್‍ಇ ಪರಿಶೀಲನೆಗೆ ಸಂಬಂಧಿಸಿದಂತೆ ಹರಡಿದ ಬೇನಾಮಿ ಕಥೆಗಳು ಸುಳ್ಳು ಎಂದು ಸಿಎಂ ಹೇಳಿದರು. ವಡಗರ ಮೂಲದ ಸತ್ಯನ್ ಅವರು 2018 ರ ಮಾರ್ಚ್‍ನಲ್ಲಿ 6,58,000 ರೂ. ಸಾಲದ ಪ್ರಸ್ತಾವನೆ ಇರಿಸಿದ್ದರು. ಕೆಎಸ್‍ಎಫ್‍ಇ ವ್ಯವಸ್ಥಾಪಕರ ಒಪ್ಪಿಗೆಯೊಂದಿಗೆ, ಸತ್ಯನ್‍ರ ವ್ಯವಹಾರ ಪಾಲುದಾರನಿಗೆ ನಂಬಿಕೆಯ ಆಧಾರದಲ್ಲಿ 2018 ರ ಮೇ 15 ರಂದು 9,28,000 ರೂ.ಸಾಲ ನೀಡಲಾಯಿತು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸತ್ಯನ್ ದೂರಿದ್ದಾರೆ. ಅದರಂತೆ ತನಿಖೆ ನಡೆಸಲಾಗಿದೆ ಎಂದು ಸಿಎಂ ಹೇಳಿದರು.