ತಿರುವನಂತಪುರ: ಸಮಧಾನಕರ ಬೆಳವಣಿಗೆ ಎಂಬಂತೆ ಕೇರಳದಲ್ಲಿ ಇಂದು 4138 ಜನರಿಗೆ ಕೋವಿಡ್ ದೃಢಪಟ್ಟಿದೆ. 86,681 ಜನರು ಚಿಕಿತ್ಸೆಯಲ್ಲಿದ್ದಾರೆ. 3,55,943 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. ಇಂದು ಸೋಂಕು ದೃಢಪಟ್ಟವರಲ್ಲಿ 54 ಮಂದಿ ರಾಜ್ಯದ ಹೊರಗಿನಿಂದ ಬಂದವರಾಗಿದ್ದರೆ ಸಂಪರ್ಕದ ಮೂಲಕ 3599 ಜನರಿಗೆ ಸೋಂಕು ತಗಲಿತು. 438 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 47 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,93,221 ಜನರು ಕಣ್ಗಾವಲಿನಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 33,345 ಮಾದರಿಗಳನ್ನು ಪರೀಕ್ಷಿಸಲಾಯಿತು.
ಪಾಸಿಟಿವ್ ಸೋಂಕಿತರ ಜಿಲ್ಲಾವಾರು ವಿವರ:
ಕೋಝಿಕ್ಕೋಡ್ 576, ಎರ್ನಾಕುಳಂ 518, ಆಲಪ್ಪುಳ 498, ಮಲಪ್ಪುರಂ 467, ತ್ರಿಶೂರ್ 433, ತಿರುವನಂತಪುರ 361, ಕೊಲ್ಲಂ 350, ಪಾಲಕ್ಕಾಡ್ 286, ಕೊಟ್ಟಾಯಂ 246, ಕಣ್ಣೂರು 195, ಇಡಕ್ಕಿ 60, ಕಾಸರಗೋಡು 58, ವಯನಾಡ್ 46, ಪತ್ತನಂತಿಟ್ಟು 44 ಎಂಬಂತೆ ಸೋಂಕು ಬಾಧಿಸಿದೆ.
ಗುಣಮುಖರಾದವರ ವಿವರಗಳು:
ಚಿಕಿತ್ಸೆಗೆ ಒಳಗಾದ 7108 ರೋಗಿಗಳ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ತಿರುವನಂತಪುರ 507, ಕೊಲ್ಲಂ 553, ಪತ್ತನಂತಿಟ್ಟು 228, ಆಲಪ್ಪುಳ 793, ಕೊಟ್ಟಾಯಂ 334, ಇಡಕ್ಕಿ 78, ಎರ್ನಾಕುಳಂ 1093, ತ್ರಿಶೂರ್ 967, ಪಾಲಕ್ಕಾಡ್ 463, ಮಲಪ್ಪುರಂ 945, ಕೋಝಿಕ್ಕೋಡ್ 839, ವಯನಾಡ್ 72, ಕಣ್ಣೂರ್ 93, ಕಾಸರಗೋಡು 143 ಎಂಬಂತೆ ಗುಣಮುಖರಾಗಿದ್ದಾರೆ.
21 ಕೋವಿಡ್ ಮರಣ:
ರಾಜ್ಯದಲ್ಲಿ ಇಂದು 21 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ತಿರುವನಂತಪುರ ಅಲಂಗೋಡಿನ ರಾಜಪ್ಪನ್ ಚೆಟ್ಟಿಯಾರ್ (80), ವತ್ತಿಯೂರ್ಕಾವ್ ನ ಜ್ಞಾನಬಾಲ ಸುಬ್ರಮಣ್ಯಂ (55), ವಿಳಿಂಜಂನ ಡೇವಿಡ್ಸನ್ (61), ನೆಡುಮಂಗಾಡ್ ನ ಬಾಬು (85), ಕೊಲ್ಲಂ ಕೂವಾಕ್ಕಾಡ್ ನ ಅಪ್ಪು (73), ಪುತ್ತನ್ ಕುಳಂಗರದ ಸುಂದರೇಶನ್(62), ಪೆರುಂಬುಳದ ಸೋಮನ್(21), ಆಲಪ್ಪುಳದ ವಂದನಾ(34), ಕನಾಲ್ ನ ಮೊಹಮ್ಮದ್ ಕೋಯಾ (74), ಚೆಂಗಾಡ್ ನ ಟಿ.ಸುಭದ್ರನ್(59), ಕೋಟ್ಟಯಂ ಪುನ್ನತ್ತರ ಪಶ್ಚಿಮದ ಓಮನ(46), ಎರ್ನಾಕುಳಂ ಮಟ್ಟಂಚೇರಿಯ ಎ. ಎ.ರವೀಂದ್ರನಾಥ್ (82),ಪೆರುಂಬಾವೂರು ನ ಶ್ರೀದೇವಿ (34), ಕಿಳಿಮಾಟ್ ನ ಅಂಜಲಿ (22), ತೃಶೂರ್ ಕುಟ್ಟೂರಿನ ಎ.ಕೆ.ಫರಿದಾ(70), ಕೋಟ್ಟಕ್ಕರದ ಶಾಜು(45), ಪಾಲಕ್ಕಾಡ್ ಮುಂಡೂರಿನ ಜಿತಿಶಾ (16), ಮಲಪ್ಪುರಂ ಎಡಮಣ್ಣಪ್ಪಾರದ ಬಾಲಕೃಷ್ಣನ್ ನಾಯರ್ (86), ಕೊಝಿಕ್ಕೋಡ್ ನ ಪರಕ್ಕಡವ್ ಟಿ.ಕೆ. ಅಮಿನಾ (58), ಕಣ್ಣೂರು ಇರಿಟ್ಟಿಯ ಕುಂಞಮೀನಾ (58) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 58 ಮಂದಿಗೆ ಕೋವಿಡ್ ಪಾಸಿಟಿವ್: 143 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 58 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 143 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್:
ಪಾಸಿಟಿವ್ ಆದವರಲ್ಲಿ 56 ಮಮದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಒಬ್ಬರು ವಿದೇಶದಿಂದ, ಒಬ್ಬರು ಇತರ ರಾಜ್ಯದಿಂದ ಆಗಮಿಸಿದವರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 2, ಮಧೂರು ಪಂಚಾಯತ್ 2, ಮಂಜೇಶ್ವರ ಪಂಚಾಯತ್ 12, ಮಂಗಲ್ಪಾಡಿ ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 2, ಕುಂಬಳೆ ಪಂಚಾಯತ್ 1, ಕುಂಬಡಾಜೆ ಪಂಚಾಯತ್ 2, ಕಾರಡ್ಕ ಪಂಚಾಯತ್ 1, ದೇಲಂಪಾಡಿ ಪಂಚಾಯತ್ 2, ಚೆಂಗಳ ಪಂಚಾಯತ್ 2, ಕಾಞಂಗಾಡ್ ನಗರಸಭೆ 8, ಉದುಮಾ ಪಂಚಾಯತ್ 2, ಪಡನ್ನ ಪಂಚಾಯತ್ 1, ಕಳ್ಳಾರ್ ಪಂಚಾಯತ್ 1, ಅಜಾನೂರು ಪಂಚಾಯತ್ 5, ನೀಲೇಶ್ವರ ನಗರಸಭೆ 9, ತ್ರಿಕರಿಪುರ ಪಂಚಾಯತ್ 2, ಕೋಡೋಂ-ಬೇಳೂರು ಪಂಚಾಯತ್ 1, ಕಿನಾನೂರು-ಕರಿಂದಲಂ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 9, ಮಧೂರು ಪಂಚಾಯತ್ 6, ಪುತ್ತಿಗೆ ಪಂಚಾಯತ್ 1, ಮುಳಿಯಾರು ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 7, ಕುತ್ತಿಕೋಲು ಪಂಚಾಯತ್ 4, ಕುಂಬಳೆ ಪಂಚಾಯತ್ 1, ಕುಂಬಡಾಜೆ ಪಂಚಾಯತ್ 2, ಕಾರಡ್ಕ ಪಂಚಾಯತ್ 4, ದೇಲಂಪಾಡಿ ಪಂಚಾಯತ್ 5, ಚೆಂಗಳ ಪಂಚಾಯತ್ 16, ಚೆಮ್ನಾಡ್ ಪಂಚಾಯತ್ 11, ಬೇಡಡ್ಕ ಪಂಚಾಯತ್ 5, ಬದಿಯಡ್ಕ ಪಂಚಾಯತ್ 8, ಕಾಞಂಗಾಡ್ ನಗರಸಭೆ 3, ಪಳ್ಳಿಕ್ಕರೆ ಪಂಚಾಯತ್ 7, ಪಡನ್ನ ಪಂಚಾಯತ್ 3, ಬಳಾಲ್ ಪ0ಂಚಾಯತ್ 7, ಅಜಾನೂರು ಪಂಚಾಯತ್ 9, ನೀಲೇಶ್ವರ ನಗರಸಭೆ 8, ವಲಿಯಪರಂಬ ಪಂಚಾಯತ್ 2, ತ್ರಿಕರಿಪುರ ಪಂಚಾಯತ್ 2, ಪುಲ್ಲೂರು-ಪೆರಿಯ ಪಂಚಾಯತ್ 6, ಕೋಡೋಂ-ಬೆಳೂರು ಪಂಚಾಯತ್ 5, ಕಿನಾನೂರು-ಕರಿಂದಳಂ ಪಂಚಾಯತ್ 4, ಕಯ್ಯೂರು-ಚೀಮೇನಿ ಪಂಚಾಯತ್ 4, ಈಸ್ಟ್ ಏಳೇರಿ ಪಂಚಾಯತ್ 2 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ನಿಗಾ:
ಕಾಸರಗೋಡು ಜಿಲ್ಲೆಯಲ್ಲಿ 4538 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 3915 ಮಂದಿ ಮನೆಗಳಲ್ಲಿ,. 623 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 295 ಮಂದಿ ನಿಗಾ ಪ್ರವೇಶಿಸಿದ್ದಾರೆ. 436 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 130 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಈ ಮೂಲಕ ಈ ವರೆಗೆ ತಪಾಸಣೆಗೆ ಕಳುಹಿಸದ ಸ್ಯಾಂಪಲ್ ಗಳ ಸಂಖ್ಯೆ 130766 ಆಗಿದೆ. 68 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಒಟ್ಟು ಗಣನೆ :
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 18841 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 17133 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 970 ಮಂದಿ ವಿದೇಶಗಳಿಮದ, 741 ಮಂದಿ ಇತರ ರಾಜ್ಯಗಳಿಂದ ಬಂದವರು. 17051 ಮಂದಿಗೆ ಈ ವರೆಗೆ ಒಟ್ಟು ಕೋವಿಡ್ ನೆಗೆಟಿವ್ ಆಗಿದೆ. 1597 ಮಂದಿ ಕೋವಿಡ್ ಚಿಕಿತ್ಸೆಯಲ್ಲಿದ್ದಾರೆ.
ಮೃತರ ಸಂಖ್ಯೆ :
ಇಂದು ಹೊಸತಾಗಿ ಒಬ್ಬರ ಮರಣ ಕೋವಿಡ್ ನಿಂದ ಸಂಭವಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಖಚಿತಪಡಿಸಿದ್ದಾರೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 193 ಆಗಿದೆ.