ತಿರುವನಂತಪುರ: ಕೇರಳದಲ್ಲಿ ಇಂದು 4581 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದವರಲ್ಲಿ 6684 ಗುಣಮುಖರಾಗಿರುವರು. ಕಳೆದ 24 ಗಂಟೆಗಳಲ್ಲಿ 46,126 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 9.93. ಎಂದು ತಿಳಿಸಲಾಗಿದೆ.
ಕೋವಿಡ್ ಪಾಸಿಟಿವ್ ಆಗಿರುವ ಜಿಲ್ಲಾವಾರು ವಿವರ:
ಕೋಝಿಕ್ಕೋಡ್ 574, ಮಲಪ್ಪುರಂ 558, ಅಲಪ್ಪುಳ 496, ಎರ್ನಾಕುಳಂ 489, ತ್ರಿಶೂರ್ 425, ಪಾಲಕ್ಕಾಡ್ 416, ಕೊಲ್ಲಂ 341, ತಿರುವನಂತಪುರ 314, ಕೊಟ್ಟಾಯಂ 266, ಕಣ್ಣೂರು 203, ಪತ್ತನಂತಿಟ್ಟು 171,ಇಡುಕ್ಕಿ 165, ವಯನಾಡ್ 101, ಕಾಸರಗೋಡು 62 ಎಂಬಂತೆ ಸೋಂಕು ಬಾಧಿಸಿದೆ.
ನೆಗೆಟಿವ್ ವಿವರಗಳು:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6684 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 571, ಕೊಲ್ಲಂ 591, ಪತ್ತನಂತಿಟ್ಟು 164, ಆಲಪ್ಪುಳ 623, ಕೊಟ್ಟಾಯಂ 470, ಇಡಕ್ಕಿ 70, ಎರ್ನಾಕುಳಂ 828, ತ್ರಿಶೂರ್ 892, ಪಾಲಕ್ಕಾಡ್ 340, ಮಲಪ್ಪುರಂ 725, ಕೋಝಿಕ್ಕೋಡ್ 831, ವಯನಾಡ್ 126, ಕಣ್ಣೂರು 336, ಕಾಸರಗೋಡು 117 ಎಂಬಂತೆ ಗುಣಮುಖರಾಗಿರುವರು. ಇದರೊಂದಿಗೆ 74,802 ಜನರಿಗೆ ಸೋಂಕು ಈಗಲೂ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 4,48,207 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಒಟ್ಟು 1869 ಕೋವಿಡ್ ಮೃತ್ಯು:
ಇಂದು, ಕೋವಿಡ್ ಕಾರಣದಿಂದ 21 ಸಾವುಗಳು ದೃಢಪಡಿಸಲಾಗಿದೆ. ತಿರುವನಂತಪುರ ನೆಡುಮಾಂಗಾಡ್ ನ ಲೈಲಾ (60), ಅಮರವಿಳಾದ ಕೆ. ಅಪ್ಪುಕುಟ್ಟನ್ (79), ವೆಂಗನೂರಿನ ಒಮಾನಾ (72), ಶ್ರೀಕಾರ್ಯಂನ ಸರೋಜಿನಿ (64), ನನ್ನಾಟ್ಟುಕಾವ್ ನ ಸುಭದ್ರಾ (82), ಕುನ್ನತ್ತುಕಲ್ ನ ವಸಂತ (57), ತೃಶೂರ್ ಕೊಡುಂಗಲ್ಲೂರಿನ ಶೋಭಾ (53), ಮುಳಕುನ್ನತ್ತುಕಾವ್ ನ ತಂಗಪ್ಪನ್ (68). ಪುತ್ತುಕ್ಕಾಡಿನ ಆಂತೋಣಿ(87), ಪಾಲಕ್ಕಾಡ್ ನ ಕೊಡುವಾಯೂರ್‍ನ ಬಹಾಬ್(78), ಕಿನ್ನಾಶ್ಚೇರಿಯ ಶಶಿಕಲಾ (67), ವಾಲಪ್ಪಾಡ್ ನ ಬಾಬುರಾಜ್ (59), ಪೆರಿಂಗೊಟ್ಟುಕುರಿಶಿಯ ಖದೀಜಾ (75), ಮಲಪ್ಪುರಂ ಕುರುವಾದ ಸುಬೈರ್ (57), ಕುಳಿಮನದ ಅಲವಿ ಕುಟ್ಟಿ (65), ಕರುವಾಂಬ್ರಾದ ಇಬ್ರಾಹಿಂ (81), ವಯನಾಡ್ ಮೀನಾಂಗಾಡಿಯ ಜಾನ್ (81), ಕಣ್ಣೂರು ವೆಂಗರದ ಮೆಹಮೂದ್ (70), ಪಿಲಾತ್ತರದ ಜಾನಕಿ ಅಮ್ಮ (80), ತಾನಾದ ಸೈನಾಬಿ(66), ಕಲ್ಯಾಶ್ಚೇರಿಯ ಹುಸೇನ್ ಕುಟ್ಟಿ (74) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1869 ಕ್ಕೆ ಏರಿಕೆಯಾಗಿದೆ.
46,126 ಮಾದರಿಗಳ ಪರೀಕ್ಷೆ:
ಕಳೆದ 24 ಗಂಟೆಗಳಲ್ಲಿ 46,126 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 9.93. ಆಗಿದ್ದು ಇಲ್ಲಿಯವರೆಗೆ, ವಾಡಿಕೆಯ ಮಾದರಿಗಳು, ವಿಮಾನ ನಿಲ್ದಾಣ ಕಣ್ಗಾವಲು, ಪೂಲ್ಡ್ ಸೆಂಟಿನೆಲ್, ಸಿಬಿಎಸ್ ಟಿ, ಟ್ರುನಾಟ್, ಆಂಟಿಜೆನ್ ಅಸ್ಸೇ ಸೇರಿದಂತೆ ಒಟ್ಟು 54,72,967 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.