HEALTH TIPS

ಈಬಾರಿಯ ಶಬರಿಮಲೆ ಯಾತ್ರೆ ಅಪೂರ್ವ- 48 ಆಸ್ಪತ್ರೆಗಳ ಸೇವೆಯನ್ನು ಖಾತ್ರಿಪಡಿಸಿದ ಸರ್ಕಾರ-ಸಾವಿರ ಆರೋಗ್ಯ ತಜ್ಞರು ಯಾತ್ರೆಯುದ್ದಕ್ಕೂ!


        ತಿರುವನಂತಪುರ: ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಯಾತ್ರಾರ್ಥಿಗಳಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಆರೋಗ್ಯ ಇಲಾಖೆಯ ಕ್ರಿಯಾ ಯೋಜನೆ ಸಿದ್ಧವಾಗಿದೆ. ಆರೋಗ್ಯ ಸಚಿವ ಕೆ.ಕೆ.ಶೈಲಜ  ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

       ಅನೇಕ ಯಾತ್ರಾರ್ಥಿಗಳು ಭೇಟಿ ನೀಡುವ ಶಬರಿಮಲೆಗೆ ತೀರ್ಥಯಾತ್ರೆಯು ವರ್ತಮಾನದ ವಿಶೇಷ ಸಂದರ್ಭಗಳನ್ನು ಪರಿಗಣಿಸಿ ಕೋವಿಡ್ ನ ಕಟ್ಟುನಿಟ್ಟಾದ ಮಾರ್ಗದರ್ಶನ ನೀಡಲಾಗಿದೆ. ವಿಶ್ವದ ಅನೇಕ ಭಾಗಗಳಲ್ಲಿ ಮತ್ತು ಇತರ ರಾಜ್ಯಗಳಿಂದ ನಿರೀಕ್ಷೆಗೂ ಮೀರಿ ಯಾತ್ರಿಕರು ಬರುವ ಸೂಚನೆಯ ಹಿನ್ನೆಲೆಯಲ್ಲಿ ಸುರಕ್ಷತೆಯ ಬಗ್ಗೆ ವಿಶೇಷ ಗಮನಹರಿಸಲಾಗುತ್ತಿದೆ.  ಎಲ್ಲರೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವೆ ಸೂಚಿಸಿರುವರು. 

       ಅಗತ್ಯ ವೈದ್ಯಕೀಯ ಸೇವೆಗಳಿಗಾಗಿ ವಿವಿಧ ಜಿಲ್ಲೆಗಳ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಸಹಾಯಕ ಶಸ್ತ್ರಚಿಕಿತ್ಸಕರಲ್ಲದೆ, ಕಾರ್ಡಿಯಾಲಜಿ, ಜನರಲ್ ಮೆಡಿಸಿನ್ ಮತ್ತು ಆರ್ಥೋಪೆಡಿಕ್ಸ್ ವಿಭಾಗದ ತಜ್ಞ ವೈದ್ಯರ ಸೇವೆಗಳು ಶಬರಿಮಲೆಯ ವಿವಿಧ ಕೇಂದ್ರಗಳಲ್ಲಿ ಲಭ್ಯವಿರಲಿದೆ. 

        ಕ್ಷೇತ್ರದ ಉತ್ಸವದ ಅವಧಿಯಲ್ಲಿ ಆರೋಗ್ಯ ಇಲಾಖೆಯಿಂದ ಸುಮಾರು 1000 ಉದ್ಯೋಗಿಗಳನ್ನು ವಿವಿಧ ಹಂತಗಳಲ್ಲಿ ಶಬರಿಮಲೆಯ ವಿವಿಧ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು. ಆರೋಗ್ಯ ಇಲಾಖೆ, ಆರೋಗ್ಯ ಶಿಕ್ಷಣ ಇಲಾಖೆ ಮತ್ತು ಕೋವಿಡ್ ಬ್ರಿಗೇಡ್‍ನಿಂದ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ತಜ್ಞ ವೈದ್ಯರು ಒಂದು ವಾರಗಳ ಶಿಪ್ಟ್ ಮತ್ತು ಇತರ ಸಿಬ್ಬಂದಿ 15 ದಿನಗಳ ಕಾಲದ ಶಿಪ್ಟ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವರು. 

        ಪಂಪಾದಿಂದ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ಬರುವ ಯಾತ್ರಾರ್ಥಿಗಳು ಹೃದಯ ಬಡಿತ, ಉಸಿರಾಟದ ತೊಂದರೆ, ಎದೆ ನೋವು ಮತ್ತು ಕೆಲವೊಮ್ಮೆ ಹೃದಯಾಘಾತದಂತಹ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಇಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಆರೋಗ್ಯ ಇಲಾಖೆ ಈ ಪ್ರದೇಶಗಳಲ್ಲಿ ತುರ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಿದೆ.

        ಸನ್ನಿಧಿ, ಪಂಪಾ, ನೀಲಕ್ಕಲ್, ಚರಾಲ್ಮೇಡು (ಅಯ್ಯಪ್ಪನ್ ರಸ್ತೆ) ಮತ್ತು ಎರುಮೇಲಿಯಲ್ಲಿ ತಜ್ಞರಿರುವ ಔಷಧಾಲಯಗಳನ್ನು ಸ್ಥಾಪಿಸಲಾಗುವುದು. ಸನ್ನಿಧಾನದಲ್ಲಿ  ತುರ್ತು ಆಪರೇಷನ್ ಥಿಯೇಟರ್ ಕೂಡ ಸ್ಥಾಪಿಸಲಾಗುವುದು. ಇದಲ್ಲದೆ, ಪತ್ತನಂತಿಟ್ಟು ಜನರಲ್ ಆಸ್ಪತ್ರೆ, ಎರುಮೇಲಿ ಸಿಎಚ್‍ಸಿ ಮತ್ತು ಕಾಂಜಿರಾಪಲ್ಲಿ ತಾಲ್ಲೂಕು ಕೇಂದ್ರ ಕಚೇರಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಶಬರಿಮಲೆಗೆ ಹತ್ತಿರದ ವೈದ್ಯಕೀಯ ಕಾಲೇಜಾಗಿ, ಕೊಟ್ಟಾಯಂ ವೈದ್ಯಕೀಯ ಕಾಲೇಜು ಯಾತ್ರಾರ್ಥಿಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಿದೆ. 

          ತಜ್ಞ ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಲಭ್ಯವಿದೆ. ನೀಲಕ್ಕಲ್ 6, ಪಂಪಾ 10, ಇಲವುಂಗಲ್ 1, ರಾಣಿ ಪೆರಿನಾಡ್ 1, ವಡಸೆರಿಕ್ಕರ 1 ಮತ್ತು ಪಂದಳಂ ನಲ್ಲಿ 20 ಆಂಬುಲೆನ್ಸ್‍ಗಳನ್ನು ನಿಯೋಜಿಸಲಾಗಿದೆ.

          ಯಾತ್ರಾರ್ಥಿಗಳಿಗೆ ವಿಶೇಷ ಚಿಕಿತ್ಸೆ ನೀಡುವಂತೆ ರಾಜ್ಯ ಆರೋಗ್ಯ ಸಂಸ್ಥೆ ಕೊಟ್ಟಾಯಂ ಮತ್ತು ಪತ್ತನಂತಿಟ್ಟು ಜಿಲ್ಲೆಗಳಲ್ಲಿ 48 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ನಿಯೋಜಿಸಿದೆ. ಪತ್ತನಂತಿಟ್ಟು ನಲ್ಲಿ 21 ಆಸ್ಪತ್ರೆಗಳು ಮತ್ತು ಕೊಟ್ಟಾಯಂನ 27 ಆಸ್ಪತ್ರೆಗಳನ್ನು ನಿಯೋಜನೆ ಮಾಡಲಾಗಿದೆ. ಸಿಎಎಸ್ಪಿ ಕಾರ್ಡ್‍ಗಳನ್ನು ಹೊಂದಿರುವ ಯಾತ್ರಿಕರು ಎಂಪನೇಲ್ಡ್ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಉಚಿತ ಚಿಕಿತ್ಸೆ ಪಡೆಯಬಹುದು. ಕಾರ್ಡ್ ಇಲ್ಲದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಕೇರಳದ ಹೊರಗಿನಿಂದ ಬರುವವರಿಗೆ ಪಿ.ಎಂ. ಮತ್ತು ಜೆ.ಎ.ವೈ. ಕಾರ್ಡುದಾರರಿಗೆ ಸೇವೆ ಲಭ್ಯವಿದೆ.

         ಪಂಪಾದಿಂದ ಸನ್ನಿಧಿಗೆ ಪ್ರಯಾಣದ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ತುರ್ತು ವೈದ್ಯಕೀಯ ಕೇಂದ್ರಗಳು ಮತ್ತು ಆಮ್ಲಜನಕ ಪಾರ್ಲರ್‍ಗಳನ್ನು ಸ್ಥಾಪಿಸಲಾಗುವುದು. ವಿಶ್ರಾಂತಿ ಪಡೆಯುವ ಯಾತ್ರಾರ್ಥಿಗಳಿಗೆ ವಿಶ್ರಾಂತಿ, ಆಮ್ಲಜನಕವನ್ನು ಉಸಿರಾಡಲು ವ್ಯವಸ್ಥೆ,  ಪ್ರಥಮ ಚಿಕಿತ್ಸಾ ವ್ಯವಸ್ಥೆ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸಲು ಸೌಲಭ್ಯವಿದೆ. ತರಬೇತಿ ಪಡೆದ ಸಿಬ್ಬಂದಿ ದಾದಿಯರು ದಿನದ 24 ಗಂಟೆಯೂ ಈ ಕೇಂದ್ರಗಳಲ್ಲಿ ಲಭ್ಯವಿರುತ್ತಾರೆ. ಇದರಲ್ಲಿ ಹೃದಯಾಘಾತದಿಂದ ಬಳಲುತ್ತಿರುವ ಯಾತ್ರಾರ್ಥಿಗಳಿಗೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ವಿಶೇಷವಾಗಿ ಲಭ್ಯವಿರಲಿದೆ. ಪ್ರಯಾಣ ಮಾಡುವಾಗ ಯಾವುದೇ ತೊಂದರೆಗಳನ್ನು ಅನುಭವಿಸಿದರೆ, ನೀವು ಆರೋಗ್ಯ ಇಲಾಖೆಯ ಸೇವೆಗಳನ್ನು ಪಡೆಯಬಹುದು.

        ಆರೋಗ್ಯ ಇಲಾಖೆಯ ನಿರ್ದೇಶಕರು ರಾಜ್ಯ ಮಟ್ಟದಲ್ಲಿ ಶಬರಿಮಲೆಯಲ್ಲಿ ಎಲ್ಲಾ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. ಮತ್ತು ಹೆಚ್ಚುವರಿ ನಿರ್ದೇಶಕರು, ನೋಡಲ್ ಅಧಿಕಾರಿ, ಸಹಾಯಕ ನೋಡಲ್ ಅಧಿಕಾರಿಗಳು ಅಲ್ಲಿನ ಚಟುವಟಿಕೆಗಳನ್ನು ಮುನ್ನಡೆಸಲಿದ್ದಾರೆ. ಪತ್ತನಂತಿಟ್ಟು, ಕೊಟ್ಟಾಯಂ, ಇಡುಕ್ಕಿ ಮತ್ತು ಆಲಪ್ಪುಳ ಜಿಲ್ಲೆಗಳ ವೈದ್ಯಕೀಯ ಅಧಿಕಾರಿಗಳು ಆಯಾ ಜಿಲ್ಲೆಗಳ ಉಸ್ತುವಾರಿ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries