HEALTH TIPS

ಚೊಟ್ಟಾನಿಕ್ಕರ ದೇವಸ್ಥಾನಕ್ಕೆ 500 ಕೋಟಿ ರೂ.ನೆರವು ನೀಡಲಿದೆ ವ್ಯಾಪಾರಿ ಸಂಸ್ಥೆ-ಕಾನೂನು ರೀತ್ಯಾ ಸ್ವೀಕರಿಸಲು ದೇವಸ್ವಂ ಬೋರ್ಡ್ ಸಿದ್ದತೆ

                       

            ಕೊಚ್ಚಿ: ಕೇರಳದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನಕ್ಕೆ 500 ಕೋಟಿ ರೂ. ಗಳ ನೆರವು ನೀಡಲು ಬೆಂಗಳೂರು ಮೂಲದ ಕೈಗಾರಿಕಾ ಸಮೂಹವೊಂದು ಮುಂದೆ ಬಂದಿದೆ.  500 ಕೋಟಿ ರೂ.ಗಳನ್ನು ವ್ಯಾಪಾರಿ ಸಮೂಹವೊಂದು ನೀಡಲು ಇಚ್ಚೆ ವ್ಯಕ್ತಪಡಿಸಿದ್ದು ಈ ಬಗ್ಗೆ ದೇವಾಲಯವು ದೇವಸ್ವಂ ಮಂಡಳಿಗೆ ಮಾಹಿತಿ ನೀಡಿದೆ. ಮೊತ್ತವನ್ನು ಸ್ವೀಕರಿಸಲು ಅನುಮತಿಗಾಗಿ ಹೈಕೋರ್ಟ್ ಅನ್ನು ಸಂಪರ್ಕಿಸಲು ಕೊಚ್ಚಿ ದೇವಸ್ವಂ ಮಂಡಳಿ ಸಿದ್ಧತೆ ನಡೆಸಿದೆ. ಸರ್ಕಾರದೊಂದಿಗೆ ಚರ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

        ಧನ ಸಹಾಯದ ಪ್ರಸ್ತಾಪನೆ ನೀಡಿದ ಕಂಪನಿಯ ವಿಶ್ವಾಸಾರ್ಹವಾಗಿದೆ ಎಂದು ದೇವಸ್ವಂ ಮಂಡಳಿ ಹೇಳಿದೆ. ಎಲ್ಲಾ ಪಾವತಿಗಳನ್ನು ಬ್ಯಾಂಕ್ ಮೂಲಕ ಮಾತ್ರ ಮಾಡಲಾಗುತ್ತದೆ. ವಿವಾದಗಳಿಗೆ ದಾರಿ ಮಾಡಿಕೊಡದೆ ಕಾನೂನು ರೀತ್ಯಾ ವ್ಯವಹರಿಸಲು ದೇವಸ್ವಂ ಬೋರ್ಡ್ ನಿರ್ಧರಿಸಿದೆ. ಆದ್ದರಿಂದ ಹೈಕೋರ್ಟ್ ನ ಅನುಮತಿಯೊಂದಿಗೆ ಮಾತ್ರ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

       20 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸುವಾಗ ನ್ಯಾಯಾಲಯದ ಅನುಮತಿ ಪಡೆಯಬೇಕೆಂದು ದೇವಸ್ವಂ ಮಂಡಳಿ ಸದಸ್ಯರು ತಿಳಿಸಿದ್ದಾರೆ. ಇದು ಅಷ್ಟು ದೊಡ್ಡ ಮೊತ್ತವಾಗಿರುವುದರಿಂದ, ವಿವರವಾದ ಮಾಹಿತಿಯೊಂದಿಗೆ ಅರ್ಜಿಯನ್ನು ಸಲ್ಲಿಸಲಿದ್ದ ಈ ಬಗ್ಗೆ ಮಂಡಳಿ ತಯಾರಿ ನಡೆಸುತ್ತಿದೆ. ಹಣದಿಂದ ದೇವಾಲಯದ ಗೋಪುರಗಳ ನಿರ್ಮಾಣ, ಮುಖಮಂಟಪ, ನವೀಕರಣ, ಸೌರ ಫಲಕಗಳ ಸ್ಥಾಪನೆ, ಫೀಡಿಂಗ್ ಹಾಲ್, ವೆಡ್ಡಿಂಗ್ ಹಾಲ್ ಮತ್ತು ತ್ಯಾಜ್ಯ ಸ್ಥಾವರ ಸೇರಿದಂತೆ ಕೋಟ್ಯಂತರ ರೂಪಾಯಿ ಯೋಜನೆಗಳನ್ನು ಪೂರ್ಣಗೊಳಿಸಬೇಕಾಗಿದೆ.


    


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries