ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5392 ನಾಮಪತ್ರಿಕೆಗಳ ಸಲ್ಲಿಕೆಯಾಗಿವೆ. ಜಿಲ್ಲಾ ಪಂಚಾಯತ್-137, ಬ್ಲೋಕ್ ಪಂಚಾಯತ್-487, ಗ್ರಾಮ ಪಂಚಾಯತ್-4060, ನಗರಸಭೆ-708.
ಗುರುವಾರ 2414 ಮಂದಿಯಿಂದ ನಾಮಪತ್ರಿಕೆ ಸಲ್ಲಿಕೆ:
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಗುರುವಾರ 2414 ಮಂದಿ ನಾಮಪತ್ರಿಕೆ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಡಿವಿಝನ್ ಗಳಿಗೆ 83 ಮಂದಿ, ಬ್ಲೋಕ್ ಪಂಚಾಯತ್ ಮಟ್ಟದಲ್ಲಿ 253 ಮಂದಿ, ನಗರಸಭೆ ಮಟ್ಟದಲ್ಲಿ 300 ಮಂದಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ 1792 ಮಂದಿ ನಾಮಪತ್ರಿಕೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ್-83, ಜಿಲ್ಲಾ ಪಂಚಾಯತ್ ಡಿವಿಝನ್ ಗಳಿಗೆ ಗುರುವಾರ 83 ನಾಮಪತ್ರಿಕೆಗಳು ಸಲ್ಲಿಕೆಯಾಗಿವೆ. ಈ ಮೂಲಕ 137 ನಾಮಪತ್ರಿಕೆಗಳು ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿವೆ.
ನಗರಸಭೆ ಮಟ್ಟ-300
ಕಾಸರಗೋಡು-87, ಕಾಞಂಗಾಡ್-159, ನೀಲೇಶ್ವರ-54.
ಬ್ಲೋಕ್ ಪಂಚಾಯತ್ ಮಟ್ಟ-253
ಮಂಜೇಶ್ವರ-46, ಕಾರಡ್ಕ-44, ಕಾಸರಗೋಡು-64, ಕಾಞಂಗಾಡ್-32, ನೀಲೇಶ್ವರ-28, ಪರಪ್ಪ-39.
ಗ್ರಾಮಪಂಚಾಯತ್ ಮಟ್ಟ-1778
ಬದಿಯಡ್ಕ-75, ಚೆಮ್ನಾಡ್-66, ಚೆಂಗಳ-41, ಕುಂಬಳೆ-92, ಮಧೂರು-109, ಮೊಗ್ರಾಲ್ ಪುತ್ತೂರು-48, ಎಣ್ಮಕಜೆ-38, ಮಂಗಲ್ಪಾಡಿ-75, ಮಂಜೇಶ್ವರ-45, ಮೀಂಜ-38, ಪೈವಳಿಕೆ-36, ಪುತ್ತಿಗೆ-37, ವರ್ಕಾಡಿ-78, ಬೇಡಡ್ಕ-26, ಬೆಳ್ಳೂರು-35, ದೇಲಂಪಾಡಿ-42, ಕಾರಡ್ಕ-44, ಕುಂಬಡಾಜೆ-63, ಕುತ್ತಿಕೋಲು-96, ಮುಳಿಯಾರು-20, ಚೆರುವತ್ತೂರು-37, ಕಯ್ಯೂರು-ಚೀಮೇನಿ-15, ಪಡನ್ನ 93, ಪಿಲಿಕೋಡ್-4, ತ್ರಿಕರಿಪುರ-61, ವಲಿಯಪರಂಬ-27, ಅಜಾನುರು-53, ಮಡಿಕೈ-6, ಪಳ್ಳಿಕ್ಕರೆ-65, ಪುಲ್ಲೂರು-ಪೆರಿಯ-34, ಉದುಮಾ-24. ಬಳಾಲ್-38, ಪನತ್ತಡಿ-50, ಕಳ್ಳಾರ್-26, ಕೋಡೋಂ-ಬೇಳೂರು-19, ವೆಸ್ಟ್ ಏಲೆರಿ-51, ಈಸ್ಟ್ ಏಲೆರಿ-42, ಕಿನಾನೂರು-ಕರಿಂದಳಂ-43.