ತಿರುವನಂತಪುರ: ರಾಜ್ಯದಲ್ಲಿ ಇಂದು 5537 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತ್ರಿಶೂರ್ 727, ಕೋಝಿಕ್ಕೋಡ್ 696, ಮಲಪ್ಪುರಂ 617, ಆಲಪ್ಪುಳ 568, ಎರ್ನಾಕುಲಂ 489, ಪಾಲಕ್ಕಾಡ್ 434, ಕೊಲ್ಲಂ 399, ತಿರುವನಂತಪುರಂ 386, ಕಣ್ಣೂರು 346, ಕೊಟ್ಟಾಯಂ 344, ಇಡಕ್ಕಿ 185, ಪತ್ತನಂತಿಟ್ಟು 138,ಕಾಸರಗೋಡು 108, ವಯನಾಡ್ 100 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 57,202 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 9.68 ಆಗಿದೆ. ವಾಡಿಕೆಯ ಮಾದರಿಗಳು, ವಿಮಾನ ನಿಲ್ದಾಣ ಕಣ್ಗಾವಲು, ಪೂಲ್ಡ್ ಸೆಂಟಿನೆಲ್, ಸಿಬಿಎನ್ಎಟಿ, ಟ್ರುನಾಟ್, ಸಿಎಲ್ಐಎ ಮತ್ತು ಆಂಟಿಜೆನ್ ಅಸ್ಸೇ ಸೇರಿದಂತೆ ಒಟ್ಟು 53,07,067 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಇಂದು ಕೋವಿಡ್ ಕಾರಣದಿಂದಾಗಿ 25 ಸಾವುಗಳು ದೃಢ ಪಟ್ಟಿದೆ.