ತಿರುವನಂತಪುರ: ನಿರಂತರ ಆತಂಕದ ಮಧ್ಯೆ ಕೇರಳದಲ್ಲಿ ಇಂದು 5722 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ.
ಕೋವಿಡ್ ಧನಾತ್ಮಕ ಪ್ರಕರಣಗಳು:
ಕೋವಿಡ್ ಇಂದು 5722 ಪ್ರಕರಣಗಳನ್ನು ದೃಢಪಡಿಸಲಾಗಿದೆ. ಹೆಚ್ಚಿನ ಪ್ರಕರಣಗಳು ಮಲಪ್ಪುರಂ ಜಿಲ್ಲೆಯಲ್ಲಿವೆ. ಮಲಪ್ಪುರಂ 862, ತ್ರಿಶೂರ್ 631, ಕೋಝಿಕ್ಕೋಡ್ 575, ಆಲಪ್ಪುಳ 527, ಪಾಲಕ್ಕಾಡ್ 496, ತಿರುವನಂತಪುರ 456, ಎರ್ನಾಕುಳಂ 423, ಕೊಟ್ಟಾಯಂ 342, ಕೊಲ್ಲಂ 338, ಕಣ್ಣೂರು 337, ಇಡುಕಿ 276, ಪತ್ತನಂತಿಟ್ಟು 200, ಕಾಸರಗೋಡು 145, ವಯನಾಡ್ 114 ಎಂಬಂತೆ ಸೋಂಕು ಬಾಧಿಸಿದೆ.
ಗುಣಮುಖರಾದವರ(ನೆಗೆಟಿವ್)ವಿವರಗಳು:
ಚಿಕಿತ್ಸೆಗೆ ಒಳಪಟ್ಟ 6860 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 658, ಕೊಲ್ಲಂ 596, ಪತ್ತನಂತಿಟ್ಟು 124, ಆಲಪ್ಪುಳ 626, ಕೊಟ್ಟಾಯಂ 402, ಇಡುಕಿ 219, ಎರ್ನಾಕುಳಂ 936, ತ್ರಿಶೂರ್ 836, ಪಾಲಕ್ಕಾಡ್ 406, ಮಲಪ್ಪುರಂ 522, ಕೋಝಿಕ್ಕೋಡ್ 894, ವಯನಾಡ್ 118, ಕಣ್ಣೂರು 337, ಕಾಸರಗೋಡು 146 ಎಂಬಂತೆ ಸೋಂಕಿನಿಂದ ಮುಕ್ತರಾಗಿರುವರು.
ಇಂದು 26 ಕೋವಿಡ್ ಮೃತ್ಯು:
ಇಂದು, ಕೋವಿಡ್ ಬಾಧಿಸಿದ 26 ಮಂದಿ ಸಾವನ್ನಪ್ಪಿರುವರು. ತಿರುವನಂತಪುರ ನೆಡುಮಂಗಾಡ್ ನ ಗೋಮತಿ ಅಮ್ಮಾಳ್ (98), ವೆಂಗನೂರಿನ ಸುರೇಶ್ ಕುಮಾರ್ (56), ತೊಳಿಕ್ಕೋಡ್ ನ ಅಸ್ಮಾ ಬೀವಿ (75), ಆಳಪ್ಪುಳ ಕಾಂಜಿರತರದ ಮಂದಾಕಿನಿ (90), ಕೊಟ್ಟಾಯಂ ಚಿಂಗವನಂ ರಮಣಿ ತಂಗಪ್ಪನ್(62)ಮೇಲುಕ್ಕಾವ್ ನ ಆಲೀಸ್ ಜೋನ್(89), ಎರ್ನಾಕುಳಂನ ಅಶೋಕಪುರಂ ಮೂಲದ ಕೆ. ಮಾಧವನ್ (74), ಪೆರುಮುಟ್ಟಂನ ಟಿ.ಎಂ.ಯೂಸುಫ್(52), ತ್ರಿಶೂರ್ ಕನಿಮಂಗಲಂನ ಲೋನಪ್ಪನ್ (82), ತೃಶೂರ್ ಸಾವಿತ್ರಿ (82), ಚಿರಾಟ್ ನ ರಘುನಂದನನ್ (78), ಅಟಾಟ್ ನ ನಿಶಾ (35), ಮಲಪ್ಪುರಂ ತವನೂರಿನ ಅಮಿನಾ (74), ಮಂಜೇರಿಯ ರಾಮಸ್ವಾಮಿ (89), ತಿರೂರ್ ನ ಶೇಖರನ್ (78), ಚುಂಗತ್ತರದ ಶಕ್ತಿ ದಾಸ್ (72), ಕ್ಲಾರಿಯ ಮುಸ್ತಫಾ (44), ಪತಿರಂಗೋಡ್ ನ ಕೊಪ್ಪು (85), ನೀಲಂಬೂರಿನ ಸೇತುಮಾಧವನ್ (62), ಪೆÇನ್ನಾನಿಯ ಹುಸೇನ್ (80), ಕೋಝಿಕ್ಕೋಡ್ ಕೊಡಿಯಂಗಾಡ್ ನ ಕಲ್ಯಾಣಿ ಅಮ್ಮ (72), ಚೆಲನೂರಿನ ಸೌಮಿನಿ (74), ಕಲ್ಲಾಯಿಯ ಫಾತಿಮಾ (82), ಕೋಝಿಕ್ಕೋಡ್ ನ ಕಣ್ಣ ಪಣಿಕ್ಕರ್ (90), ಚೆಳನ್ನೂರಿನ ಅಜಿತ್ ಕುಮಾರ್ (48), ಕಣ್ಣೂರು ಚೆರುತಾಳಂ ನ ಹಕೀಮ್ (65) ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಒಟ್ಟು ಕೋವಿಡ್ ಸಾವಿನ ಸಂಖ್ಯೆ 1969 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು:
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳವಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 89,58,484 ರಷ್ಟಿದೆ. ನಿನ್ನೆಗಿಂತ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ದೇಶದಲ್ಲಿ ಪ್ರಸ್ತುತ 4,43,303 ಸಕ್ರಿಯ ಪ್ರಕರಣಗಳಿವೆ. ಆರೋಗ್ಯ ಸಚಿವಾಲಯದ ಪ್ರಕಾರ, 83,83,603 ಜನರನ್ನು ಗುಣಪಡಿಸಲಾಗಿದೆ. ನಿನ್ನೆ ಆಸ್ಪತ್ರೆಯಿಂದ ಒಟ್ಟು 48,493 ಜನರನ್ನು ಬಿಡುಗಡೆ ಮಾಡಲಾಗಿದೆ. ಈವರೆಗೆ 1,31,578 ಜನರು ಮೃತರಾಗಿದ್ದಾರೆ.
ತಪಾಸಣೆಗಾಗಿ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ
ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗೆ ಲಭ್ಯವಿರುವ ಲ್ಯಾಬ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಲ್ಯಾಬ್‍ಗಳ ಸಂಖ್ಯೆ 2,113 ಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಕೆ.ಕೆ. ಶೈಲಾಜಾ ಮಾಹಿತಿ ನೀಡಿದರು. ಕೋವಿಡ್ ಪರೀಕ್ಷಾ ಸೌಲಭ್ಯಗಳು ಪ್ರಸ್ತುತ 1425 ಸರ್ಕಾರಿ ಪ್ರಯೋಗಾಲಯಗಳು ಮತ್ತು 688 ಖಾಸಗಿ ಪ್ರಯೋಗಾಲಯಗಳಲ್ಲಿ ಲಭ್ಯವಿದೆ. ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು 57 ಲ್ಯಾಬ್‍ಗಳಲ್ಲಿ, 31 ಲ್ಯಾಬ್‍ಗಳಲ್ಲಿ ಸಿಬಿಎನ್‍ಎಟಿ, 68 ಲ್ಯಾಬ್‍ಗಳಲ್ಲಿ ಟ್ರುನಾಟ್ ಮತ್ತು 1957 ಲ್ಯಾಬ್‍ಗಳಲ್ಲಿ ಆಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕೋವಿಡ್ ವರದಿ ಮಾಡಿದಂತೆ ಜನವರಿ 30 ರಂದು ಆಲಪ್ಪುಳ ಎನ್‍ಐವಿಯಲ್ಲಿ ಮಾತ್ರ ಲಭ್ಯವಿರುವ ಪರೀಕ್ಷಾ ವ್ಯವಸ್ಥೆ ಈಗ ರಾಜ್ಯದಾದ್ಯಂತ ಲಭ್ಯವಿದೆ.