HEALTH TIPS

ಕೇರಳದಲ್ಲಿ ಇಂದು 5792 ಮಂದಿಗೆ ಕೋವಿಡ್ ದೃಢ-6620 ಮಂದಿ ಗುಣಮುಖ

       ತಿರುವನಂತಪುರ: ನಿರಂತರ ಕಾಳಜಿಯ ಮಧ್ಯೆ ಕೇರಳದಲ್ಲಿ ಇಂದು 5792 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ವಿವರಗಳನ್ನು ಒದಗಿಸಲಾಗಿದೆ. 

                 70,070 ಜನರು ಚಿಕಿತ್ಸೆಯಲ್ಲಿ:

    ಕೋವಿಡ್ ಇಂದು ರಾಜ್ಯದಲ್ಲಿ 5792 ಮಂದಿಗಳಲ್ಲಿ ದೃಢಪಟ್ಟಿದ್ದರೆ 6620 ಮಂದಿ ಸೋಂಕು ಮುಕ್ತರಾದರು. ಇಂದು  27 ಕೋವಿಡ್ ಮರಣ ಖಚಿತಪಡಿಸಲಾಗಿದೆ. ಈ ಮೂಲಕ ರಾಜ್ಯಾದ್ಯಂತ ಸಾವಿನ ಸಂಖ್ಯೆ 1915 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 70,070 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 4,61,394 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. ಇಂದು, ರೋಗ ಪತ್ತೆಯಾದವರಲ್ಲಿ 104 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4985 ಜನರಿಗೆ ಸೋಂಕು ತಗಲಿತು. 639 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,20,023 ಜನರು ಕಣ್ಗಾವಲಿನಲ್ಲಿದ್ದಾರೆ.

            ಪಾಸಿಟಿವ್ ವಿವರ-ಜಿಲ್ಲಾವಾರು: 

      ಮಲಪ್ಪುರಂ 776, ಕೊಲ್ಲಂ 682, ತ್ರಿಶೂರ್ 667, ಕೋಝಿಕ್ಕೋಡ್ 644, ಎರ್ನಾಕುಳಂ 613, ಕೊಟ್ಟಾಯಂ 429, ತಿರುವನಂತಪುರ 391, ಪಾಲಕ್ಕಾಡ್ 380, ಆಲಪ್ಪುಳ 364, ಕಣ್ಣೂರು 335, ಪತ್ತನಂತಿಟ್ಟು 202, ಇಡುಕ್ಕಿ 116, ವಯನಾಡ್ 97, ಕಾಸರಗೋಡು 96 ಎಂಬಂತೆ ಇಂದು ಸೋಂಕು ದೃಢಪಡಿಸಲಾಗಿದೆ.

         ನೆಗೆಟಿವ್ ವಿವರ: 

  ಚಿಕಿತ್ಸೆಗೆ ಒಳಗಾಗಿರುವ 6620 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ.  ತಿರುವನಂತಪುರ 561, ಕೊಲ್ಲಂ 622, ಪತ್ತನಂತಿಟ್ಟು 154, ಆಲಪ್ಪುಳ 397, ಕೊಟ್ಟಾಯಂ 501, ಇಡುಕಿ 54, ಎರ್ನಾಕುಳಂ 588, ತ್ರಿಶೂರ್ 723, ಪಾಲಕ್ಕಾಡ್ 820, ಮಲಪ್ಪುರಂ 497, ಕೋಝಿಕ್ಕೋಡ್ 831, ವಯನಾಡ್ 117, ಕಣ್ಣೂರು 625, ಕಾಸರಗೋಡು 130 ಎಂಬಂತೆ ನೆಗೆಟಿವ್ ಆಗಿದೆ. 

        27 ಕೋವಿಡ್ ಸಾವುಗಳು: 

   ಇಂದು 27 ಮಂದಿಗಳ ಮರಣಕ್ಕೆ ಕೋವಿಡ್ ಸೋಂಕು ಕಾರಣ ಎಂದು ದೃಢಪಡಿಸಲಾಗಿದೆ. ತಿರುವನಂತಪುರ ಕೊಟ್ಟಾಪುರಂನ ಸುಕುಮಾರನ್ (85), ಶಾಸ್ತಾಮಂಗಲಂನ ರಾಧಾಕೃಷ್ಣನ್ ನಾಯರ್ (83), ಅನಯರದ ಅಮ್ಮುಕುಟ್ಟಿ (78), ಕಲ್ಲಟ್ಟುಮುಕ್ಕಿನ ಕುಲ್ಸುಬೀವಿ (55), ನೇಮಂನ ರಶೀದಾ (43), ಕೊಲ್ಲಂ ಕರುಕಡವಿನ ರಸಾಕ್ ಕುಂಞÂ(60), ಕ್ಲಾಪನದ ಆಶಾ(45), ಆಲಪ್ಪುಳ ಚೇರ್ತಲದ ಸರಸಮ್ಮ (72), ಕೋಟ್ಟಯಂ ನಾಗಂಪಡಂನ ಬೇಬಿ (68), ಎರ್ನಾಕುಳಂ  ಮಟ್ಟಂಚೇರಿಯ ಕೆ.ಎಂ. ನಬೀಸಾ (63), ಎಳಮಕ್ಕರದ ಕೆ.ಕೆ.ಪುರುಷನ್(74) ತ್ರಿಶೂರ್‍ನ ಪಂಪೂರ್‍ನ ಬಾಲಕೃಷ್ಣನ್ (79), ಎಡಾಸೇರಿಯ ಅಬ್ದುಲ್ ಜಲೀಲ್ (52), ಅಜಿಕೋಡ್ ನ ಅಬ್ದುಲ್ ರಹಮಾನ್ (75), ಪಾಲಕ್ಕಾಡ್ ಕಲ್ಲೇಪುಳ್ಳಿಯ ಸೌಮ್ಯಾ ಕುಮಾರನ್ (84), ಮಲಪ್ಪುರಂ ಸುನೀಲ್ ಬಾಬು (40), ತಾಳೆಕ್ಕೋಡ್ ನ ಖದೀಜಾ(54), ಇರುಮೆಟ್ಟಿನ  ಮೊಹಮ್ಮದ್ (73), ಪೂಕೋಟೂರಿನ ಮೊಹಮ್ಮದ್ ಹನೀಫಾ (50), ಮಂಗಲಂನ ಫಾತಿಮಾ ಕುಟ್ಟಿ (65), ಚೆರ್ಪುಲಶೇರಿಯ ನಫಿಸಾ (64), ಕೋಝಿಕ್ಕೋಡ್ ನಾದಾಪ್ಪುರಂ ನ ವಿಜಯನ್ (65), ವಟ್ಟೋಳಿಯ ಚಂದ್ರನ್ (75) ವಳಯಂ ನ ಅವ್ದುಲ್ಲ(74), ತಿರುವನ್ನೂರುನಾಡ್ ನ ವೇಲಾಯುಧನ್ (90), ಕಣ್ಣೂರು ಚಿರೈಕಲ್‍ನ ಸುಹ್ರಾಬಿ (69), ಕಾಸರಗೋಡಿನ ಬಿಫಾತಿಮಾ (70) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. 

                                    ಕಾಸರಗೋಡು : 96 ಮಂದಿಗೆ ಸೋಂಕು ದೃಢ

           ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 96 ಮಂದಿಗೆ ಕೋವಿಡ್ ಪಾಸಿಟಿವ್ ದೃಢೀಕರಿಸಲಾಗಿದೆ. 130 ಮಂದಿ ಗುಣಮುಖರಾಗಿದ್ದಾರೆ. ಇದು ವರೆಗೆ ಜಿಲ್ಲೆಯಲ್ಲಿ 20562 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಈ ಪೈಕಿ 19121 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 217 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಾಗಿ 1224 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries