ತಿರುವನಂತಪುರ: ಕೇರಳದಲ್ಲಿ ಇಂದು 5804 ಮಂದಿಗೆ ಕೊರೊನಾ ಸೋಂಕು ದೃಢಪಡಿಸಲಾಗ. ರಾಜ್ಯದಲ್ಲಿ 4,34,730 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದು 6201 ಮಂದಿ ಪೂರ್ಣ ಗುಣಮುಖರಾದರು. ಆದರೆ 26 ಮಂದಿ ಸೋಂಕಿನ ಕಾರಣ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು ಸಾವಿನ ಸಂಖ್ಯೆ 1822 ಕ್ಕೆ ಏರಿಕೆಯಾಗಿದೆ. 77,390 ಮಂದಿಗೆ ಸೋಂಕು ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ರೋಗ ಪತ್ತೆಯಾದವರಲ್ಲಿ 118 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4988 ಜನರಿಗೆ ಸೋಂಕು ತಗಲಿತು. 643 ಜನರೊಂದಿಗಿನ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ. 55 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ.
26 ಕೋವಿಡ್ ಸಾವುಗಳು:
ಆರೋಗ್ಯ ಇಲಾಖೆಯು ಇಂದು 26 ಕೋವಿಡ್ ಸಾವುಗಳನ್ನು ದೃಢಪಡಿಸಿದೆ. ತಿರುವನಂತಪುರ ಕಂಜಿರಂಕುಳಂನ ರವೀಂದ್ರನ್ (59), ತೊಟ್ಟಕ್ಕಲ್ ನ ರಾಜದಾಸ್ (85), ನೇಮಾಮ್ ನ ಗೋಮತಿ (62), ವರ್ಕಲಾದ ತುಲಸಮ್ಮ (52), ಪೆರೂರ್ಕಾಡಾದ ವಿನ್ಸೆಂಟ್ (68), ತಿರುವನಂತಪುರ ಜಯರಾಜನ್(53), ಕೊಲ್ಲಂ ಕೊಟ್ಟಾರಕ್ಕರದ ಬಶೀರ್(60), ಇಡತ್ತರದ ಮಣಿ(60), ಮೈನಾಗಪಳ್ಳಿಯ ಅಜಿಮೊನ್ (39), ಚೆಂಗನ್ನೂರಿನ ಹಮ್ಸಾ (80), ಕರುವಾಟ್ಟಾದ ಟಿ.ಕೆ. ಜೋಸೆಫ್(80), ಕೋಟ್ಟಯಂ ಕೊಚ್ಚಪ್ಪನ್(90), ಪುತ್ತುಪಲ್ಲಿಯ ಪುರುಷನ್ (60), ತಾಳೆಯಂಗಾಡಿಯ ಮುಹಮ್ಮದ್ ಕುಟ್ಟಿ (77), ಎರ್ನಾಕುಳಂ ನ ಎರಮಲ್ಲೂರಿನ ಫಾತಿಮಾ ಇಬ್ರಾಹಿಂ (85), ಅರಂಗಂ ಕ್ರಾಸ್ ರಸ್ತೆಯ ಹಮ್ಸಾ ಬೀವಿ (78), ಪವರ್ ಹೌಸ್ ನಿವಾಸಿ ರಾಧಾಕೃಷ್ಣನ್ (78), ತೃಶೂರ್ ಚಿತ್ತಿಸ್ಸೆರಿಯ ಬಾಬು (54), ಕರಿಕುಳಿಯ ಸುಲೈಮಾನ್ (68), ಪೆÇಂಕುನ್ನಂನ ಸುಬ್ರಮಣಿಯನ್ (86), ಪಾಲಕ್ಕಾಡ್ ಅಲತ್ತೂರ್‍ನ ಸಾರಮ್ಮ(74), ಒಟ್ಟಪಾಲಂನ ಅಲಿ (69), ಮಲಪ್ಪುರಂ ಮುತ್ತೇಡಂ ನ ವಿರಲ್(75), ಪೂಕ್ಕೋಟ್ಟೂರ್ ನಿಸಾರ್ (32), ಪೊನ್ನಾನಿಯ ಸಾರು (71), ಕಣ್ಣೂರು ಚೆಲಾಡ್ ಮೂಲದ ಕೆ.ಎಂ.ಹಂಸಾ(60) ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಈವರೆಗೆ ಒಟ್ಟು ಸಾವಿನ ಸಂಖ್ಯೆ 1822 ಕ್ಕೆ ಏರಿಕೆಯಾಗಿದೆ.
ಕೋವಿಡ್ ಧನಾತ್ಮಕ ಪ್ರಕರಣಗಳು:
ಕೋವಿಡ್ ಇಂದು 5804 ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಕೋಝಿಕ್ಕೋಡ್ ಜಿಲ್ಲೆಯಲ್ಲಿವೆ. ಕೋಝಿಕ್ಕೋಡ್ 799, ಎರ್ನಾಕುಳಂ 756, ತ್ರಿಶೂರ್ 677, ಮಲಪ್ಪುರಂ 588, ಕೊಲ್ಲಂ 489, ಆಲಪ್ಪುಳ 468, ತಿರುವನಂತಪುರ 439, ಪಾಲಕ್ಕಾಡ್ 438, ಕೊಟ್ಟಾಯಂ 347, ಕಣ್ಣೂರು 240, ಪತ್ತನಂತಿಟ್ಟು 189, ಇಡುಕ್ಕಿ 187, ವಯನಾಡ್ 106, ಕಾಸರಗೋಡು 81 ಎಂಬಂತೆ ಸೋಂಕು ಬಾಧಿಸಿದೆ.
ಗುಣಮುಖರಾದವರ ವಿವರಗಳು:
ಚಿಕಿತ್ಸೆಗೆ ಒಳಗಾದ 6201 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದು ದೃಢಪಡಿಸಲಾಗಿದೆ. ತಿರುವನಂತಪುರ 727, ಕೊಲ್ಲಂ 613, ಪತ್ತನಂತಿಟ್ಟು 89, ಆಲಪ್ಪುಳ 415, ಕೊಟ್ಟಾಯಂ 317, ಇಡುಕ್ಕಿ 78, ಎರ್ನಾಕುಳಂ 707, ತ್ರಿಶೂರ್ 866, ಪಾಲಕ್ಕಾಡ್ 338, ಮಲಪ್ಪುರಂ 522, ಕೋಝಿಕ್ಕೋಡ್ 781, ವಯನಾಡ್ 160, ಕಣ್ಣೂರು 431, ಕಾಸರಗೋಡು 157 ಎಂಬಂತೆ ಗುಣಮುಖರಾಗಿರುವರು.