HEALTH TIPS

ಕೇರಳದಲ್ಲಿ ಇಂದು 6419 ಮಂದಿಗೆ ಕೋವಿಡ್- 7066 ಮಂದಿ ಗುಣಮುಖ

        ತಿರುವನಂತಪುರ: ಕೇರಳದಲ್ಲಿ ಇಂದು 6419 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಇಂದಿನ ಮಾಹಿತಿ ಸ್ಪಷ್ಟಪಡಿಸಲಾಗಿದೆ. 

           ರಾಜ್ಯದಲ್ಲಿ 69,394 ಮಂದಿ ಚಿಕಿತ್ಸೆಯಲ್ಲಿ: 

      ಇಂದು ರಾಜ್ಯದಲ್ಲಿ ಕೋವಿಡ್ 6419 ಪ್ರಕರಣಗಳನ್ನು ಖಚಿತಪಡಿಸಿದರೆ 7066 ಮಂದಿ ಗುಣಮುಖವಾಗಿವೆ. 69,394 ಜನರಿಗೆ ಈ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 4,68,460 ಸೋಂಕಿನಿಂದ ಮುಕ್ತಗೊಳಿಸಲಾಗಿದೆ. 28 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1943 ಕ್ಕೆ ಏರಿಕೆಯಾಗಿದೆ. ಸೋಂಕು ಪತ್ತೆಯಾದವರಲ್ಲಿ 98 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5576 ಜನರಿಗೆ ಸೋಂಕು ತಗಲಿತು. 677 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,18,833 ಜನರು ಕಣ್ಗಾವಲಿನಲ್ಲಿದ್ದಾರೆ.

             ಕೋವಿಡ್ ಪಾಸಿಟಿವ್: 

      ಇಂದು ಹೆಚ್ಚಿನ ಪ್ರಕರಣಗಳು ಎರ್ನಾಕುಳಂ ಜಿಲ್ಲೆಯಲ್ಲಿ ದಾಖಲಾಗಿದೆ. ಎರ್ನಾಕುಳಂ 887, ಕೋಝಿಕ್ಕೋಡ್ 811, ತ್ರಿಶೂರ್ 703, ಕೊಲ್ಲಂ 693, ಆಲಪ್ಪುಳ 637, ಮಲಪ್ಪುರಂ 507, ತಿರುವನಂತಪುರ 468, ಪಾಲಕ್ಕಾಡ್ 377, ಕೊಟ್ಟಾಯಂ 373, ಇಡುಕಿ 249, ಪತ್ತನಂತಿಟ್ಟು 234, ಕಣ್ಣೂರು 213, ವಯನಾಡ್ 158, ಕಾಸರಗೋಡು 109 ಎಂಬಂತೆ ಸೋಂಕು ದೃಢಪಡಿಸಲಾಗಿದೆ.  

            ನೆಗೆಟಿವ್ ಆದವರ ವಿವರ: 

       ಚಿಕಿತ್ಸೆಗೆ ಒಳಗಾಗಿರುವ 7066 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ.  ತಿರುವನಂತಪುರಂ 579, ಕೊಲ್ಲಂ 577, ಪತ್ತನಂತಿಟ್ಟು 226, ಆಲಪ್ಪುಳ 368, ಕೊಟ್ಟಾಯಂ 776, ಇಡುಕಿ 185, ಎರ್ನಾಕುಲಂ 720, ತ್ರಿಶೂರ್ 793, ಪಾಲಕ್ಕಾಡ್ 624, ಮಲಪ್ಪುರಂ 661, ಕೋಝಿಕ್ಕೋಡ್ 920, ವಯನಾಡ್ 76, ಕಣ್ಣೂರು 376, ಕಾಸರಗೋಡು 185 ಎಂಬಂತೆ ಸೋಂಕುಮುಕ್ತರಾಗಿರುವರು. 

    ಇಂದು 28 ಮಂದಿ ಮೃತ್ಯು: 

  ಇಂದು, ಕೋವಿಡ್‍ನಿಂದಾಗಿ 28 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರ ಪತ್ತಕ್ಕಾಲದ ನಾದಿರ್ಶಾ (44), ಪೆÇತ್ತೆನ್ ಕೋಡಾದ ಅಬ್ದುಲ್ ರಹಮಾನ್ (87), ಮಡತ್ತರದ ಹಮ್ಸಕುಂಞÂ (72), ಕೊಲ್ಲಂ ಐಜೆಸ್ಟ್ ಮೂಕ್ ನ ರಮಣಿ(62), ಎರಾವಿಪುರಂನ ಚಂದ್ರಿಕಾ ಅಮ್ಮ (69), ಆಲಪ್ಪುಳ ಕಳವೂರ್ ನ ವಿನೋದ್(48), ಕೈನಕ್ಕರದ ಥ್ರೆಸ್ಯಮ್ಮ ಜೋಸೆಫ್ (68),ಕೋಟ್ಟಯಂ ತಿರುವಲ್ಲಾದ ತಂಗಮಣಿ (65), ಮಾವೇಲಿಕ್ಕರದ ಸರಸಮ್ಮ ಚೆಲ್ಲಪ್ಪನ್(73),  ಕೋಟ್ಟಯಂ ನ  ಜಾನಕಿ ಪರಮೇಶ್ವರನ್ (93), ಮೀನಾಚಿಲ್ಲಿಯ ಶಾಂತಮ್ಮ ಎನ್ ಪಿಳ್ಳೈ (68), ಮೀನಾಚಿಲ್ ನ  ಮಾಧವನ್ (77),ಎರ್ನಾಕುಳಂ ಆಲುವಾದ ಪಿ. .ಕೆ.ಜಾಸ್ಮಿನ್(46), ಕುನ್ನತ್ತುನಾಡ್ ನ ಕೊಚುಕುಂಜು (54), ಪಚ್ಚಳಂ ನ ಬಾಲಕೃಷ್ಣನ್ (75), ಕಾಕನಾಡ್ ನ ಗೋಪಾಲನ್ ನಾಯರ್ (76), ತೃಶೂರ್ ಚಿತ್ತಿಸ್ಸೆರಿಯ  ಗೀತಾ (61), ಎಡಕ್ಕಳಿಯೂರ್ ನ ಮಣಿ (70),  ಕೊಡಂಗಲ್ಲೂರಿನ ಗೋಪಾಲನ್ ಕುಟ್ಟಿ(87), ಕುನ್ನಂಕುಳಂ ನ  ವೇಣು (68), ಪೂತ್ತೂಲ್ ನ  ಜೋಸೆಫ್ (90), ಕೋಟಕ್ಕಾಡ್‍ನಿಂದ ಶೀಲಾ (52), ಕರುವಾನೂರಿನ ಕಣ್ಣನ್ (42),ಮಲಪ್ಪುರಂ ಪಳ್ಳಿಕುನ್ನಿನ  ವಿಜಯನ್ (66),  ತೊಟ್ಟೆಕ್ಕಾಡ್ ನ  ಕುಂಜಂಡಿಯಾ (89), ಮಕ್ಕಾಡ್ ನ ಮಮ್ಮುಂಞÂ (69), ಕೋಝಿಕ್ಕೋಡ್ ಕಕ್ಕಾಯಂ ನ ಜೋಸೆಫ್(65) ಕೋಝಿಕ್ಕೋಡ್ ನ ನೌಶಾದ್ ಅಲಿ (52) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1943 ಕ್ಕೆ ಏರಿಕೆಯಾಗಿದೆ. 


       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries