ತಿರುವನಂತಪುರ: ಕೇರಳದಲ್ಲಿ ಇಂದು 6862 ಜನರಿಗೆ ಕೋವಿಡ್ ಖಚಿತವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಮಾಹಿತಿಯಲ್ಲಿ ವಿವರಗಳನ್ನು ನೀಡಲಾಗಿದೆ.
84,713 ಮಂದಿ ಚಿಕಿತ್ಸೆಯಲ್ಲಿ:
ಇಂದು ಕೋವಿಡ್ ಸೋಂಕು ದೃಢಪಟ್ಟ 6862 ಮಂದಿ ಸಹಿತ 84,713 ಮಂದಿ ಚಿಕಿತ್ಸೆಯಲ್ಲಿದ್ದಾರೆ. 8802 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಇಂದು, ರೋಗ ಸೋಂಕಿತರಾದವರಲ್ಲಿ 107 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 5899 ಜನರಿಗೆ ಸೋಂಕು ತಗಲಿದೆ. 783 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 73 ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಕಂಡುಬಂದಿದೆ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,96,614 ಜನರು ಕಣ್ಗಾವಲಿನಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 61,138 ಮಾದರಿಗಳನ್ನು ಪರೀಕ್ಷಿಸಲಾಯಿತು. ರಾಜ್ಯದಲ್ಲಿ ಈವರೆಗೆ 3,64,745 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 652 ಹಾಟ್‍ಸ್ಪಾಟ್‍ಗಳಿವೆ.
ಇಂದಿನ ಪಾಸಿವಿಟ್ ವಿವರಗಳು:
ಇಂದು ಹೆಚ್ಚಿನ ಸೋಂಕಿತರು ತ್ರಿಶೂರ್ ಜಿಲ್ಲೆಯಲ್ಲಿ ದಾಖಲಾಗಿದೆ. ತ್ರಿಶೂರ್ 856, ಎರ್ನಾಕುಳಂ 850, ಕೋಝಿಕ್ಕೋಡ್ 842, ಆಲಪ್ಪುಳ 760, ತಿರುವನಂತಪುರ 654, ಕೊಲ್ಲಂ 583, ಕೊಟ್ಟಾಯಂ 507, ಮಲಪ್ಪುರಂ 467, ಪಾಲಕ್ಕಾಡ್ 431, ಕಣ್ಣೂರು 335, ಪತ್ತನಂತಿಟ್ಟು 245, ಕಾಸರಗೋಡು 147, ವಯನಾಡ್ 118, ಇಡುಕ್ಕಿ 67 ಎಂಬಂತೆ ಸೋಂಕು ಬಾಧಿಸಿದೆ.
ಗುಣಮುಖರಾದವರು:
ಚಿಕಿತ್ಸೆ ಪಡೆದ 8802 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದು ಅಧಿಕೃತರು ತಿಳಿಸಿದ್ದಾರೆ. ತಿರುವನಂತಪುರ 563, ಕೊಲ್ಲಂ 721, ಪತ್ತನಂತಿಟ್ಟು 279, ಆಲಪ್ಪುಳ 656, ಕೊಟ್ಟಾಯಂ 641, ಇಡಕ್ಕಿ 76, ಎರ್ನಾಕುಳಂ 865, ತ್ರಿಶೂರ್ 921, ಪಾಲಕ್ಕಾಡ್ 1375, ಮಲಪ್ಪುರಂ 945, ಕೊಝಿಕ್ಕೋಡ್ 922, ವಯನಾಡ್ 83, ಕಣ್ಣೂರ್ 477, ಕಾಸರಗೋಡು 278 ಮಂದಿಗಳು ಗುಣಮುಖರಾಗಿದ್ದಾರೆ.
26 ಮಂದಿ ಕೋವಿಡ್ ನಿಂದ ಮೃತ್ಯು:
ರಾಜ್ಯದಲ್ಲಿ ಇಂದು 26 ಕೋವಿಡ್ ಸಾವುಗಳನ್ನು ಸರ್ಕಾರ ದೃಢಪಡಿಸಿದೆ. ತಿರುವನಂತಪುರ ಅಟ್ಟಿಂಗಾಲ್ ನ ಅಬ್ದುಲ್ ಅಜೀಜ್ (72), ಪುವಾಚಲ್ ನ ಗಂಗಾಧರನ್ (82), ಕುಲಶೇಖರಂನ ಅಶ್ವಿನ್ (23), ಪಾಪ್ಪನಮ್‍ಕೋಡ್ ನ ಸರೋಜಿನಿ (85), ವಿಳಿಂಞ ನ ಮೆಕ್ ಟನ್ (41), ಕರೋಡ್ ನ ಕರುಣಾಕರನ್ (75). ತೆಕ್ಕಾಟ್ ನ ರಾಮಚಂದ್ರನ್ ಪಿಳ್ಳೆ(64), ಒಟ್ಟಶೇಖರಮಂಗಲಂನ ಅಜಿತ್‍ಕುಮಾರ್ (62), ಕೊಲ್ಲಂ ಪುಲ್ಲಿಚಿರಾದ ರಾಘವನ್ ಪಿಳ್ಳೈ (85),ಆಲಪ್ಪುಳ ಓಮನಪ್ಪುಳದ ಜೋಸೆಫ್ (48), ಕೋಟ್ಟಯಂ ವೆಳ್ಳಪಾಡ್ ನ ಜೇಮ್ಸ್ ಲ್ಯೂಕಾಸ್ (67), ಚಂಗನಶ್ಚೇರಿಯ ಮೇರಿ ಪೀಟರ್‍ಮಕ್ಕಾರತ್(64), ಎರ್ನಾಕುಳಂ ಪೋರ್ಟ್ ಕೊಚ್ಚಿಯ ಮೇರಿ ಪೀಟರ್(78), ಕೊತ್ತೋಟ್ ನ ಹೆಲೆನ್ ಟಾಮಿ (56), ತೃಶೂರ್ ನೆಲ್ಲಿಕುನ್ನು ನಿವಾಸಿ ಫ್ರಾನ್ಸಿಸ್ (83), ಕುರಿಯಾಚಿರಾದ ಬಾಲನ್ (72), ಕೊನ್ನಾತಕುನ್ನಿನ ಅಬ್ದುಲ್ ಘಫೂರ್ (67), ವೆಲ್ಲಾಟ್ ನ ಜಯಲಕ್ಷ್ಮಿ (74), ಮಲಪ್ಪುರ ಪೂರಂಞï ನ ಬಾವುಟ್ಟಿ (80) ಕಣ್ಣಂಚೇರಿಯ ವೇಲಾಯುಧನ್ (65), ಶಿವದಾಸನ್ (71), ಪುರಮೇರಿಯ ಮಾಮಿ (61), ಒಮಾಶೇರಿಯ ರಾಜನ್ (72), ಕುಳಕತ್ ನ ಅಮಿನಾ (60), ವಯನಾಡ್ ಮೇಪ್ಪಾಟಿಯ ಗೀತಾ (86), ಕಾಸರಗೋಡು ನೆಲ್ಲಿಕುನ್ನಿನ ವೇಲಾಯುಧನ್ (53) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು ಸಾವಿನ ಸಂಖ್ಯೆ 1559 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು:
ದೇಶದಲ್ಲಿ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿವೆ. ಸಾವಿನ ಸಂಖ್ಯೆ ಕೂಡ ಕ್ಷೀಣಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 82,67,623 ರಷ್ಟಿದೆ. 490 ಹೊಸ ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,23,097 ಆಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್ ಪಾಸಿಟಿವ್: 162 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 292 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ವಿವರಗಳು:
ಪಾಸಿಟಿವ್ ಆದವರಲ್ಲಿ 145 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಒಬ್ಬರು ಇತರ ರಾಜ್ಯದಿಂದ, ಒಬ್ಬರು ವಿದೆಶದಿಂದ ಬಂದವರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 4, ಮಧೂರು ಪಂಚಾಯತ್ 4, ಪುತ್ತಿಗೆ ಪಂಚಾಯತ್ 1, ಪೈವಳಿಕೆ ಪಂಚಾಯತ್ 1, ಮುಳಿಯಾರು ಪಂಚಾಯತ್ 5, ಕುತ್ತಿಕೋಲು ಪಂಚಾಯತ್ 2, ಕುಂಬಳೆ ಪಂಚಾಯತ್ 5, ಕಾರಡ್ಕ ಪಂಚಾಯತ್ 1, ದೇಲಂಪಾಡಿ ಪಂಚಾಯತ್ 2, ಚೆಂಗಳ ಪಂಚಾಯತ್ 5, ಚೆಮ್ನಾಡ್ ಪಂಚಾಯತ್ 5, ಬೇಡಡ್ಕ ಪಂಚಾಯತ್ 6, ಕಾಞಂಗಾಡ್ ನಗರಸಭೆ 9, ಅಜಾನೂರು ಪಂಚಾಯತ್ 2, ಬಳಾಲ್ 4, ಉದುಮಾ ಪಂಚಾಯತ್ 5, ಪನತ್ತಡಿ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 9, ಪಡನ್ನ ಪಂಚಾಯತ್ 6, ಕಳ್ಳಾರ್ ಪಂಚಾಯತ್ 2, ಚೆರುವತ್ತೂರು ಪಂಚಾಯತ್ 4, ನೀಲೇಶ್ವರ ನಗರಸಭೆ 1, ವೆಸ್ಟ್ ಏಳೇರಿ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 20, ಪುಲ್ಲೂರು-ಪೆರಿಯ ಪಂಚಾಯತ್ 7, ಕೋಡೋಂ-ಬೇಳೂರು ಪಂಚಾಯತ್ 4, ಕಿನಾನೂರು-ಕರಿಂದಳಂ ಪಂಚಾಯತ್ 22, ಕರಿವೆಳ್ಲೂರು ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 13, ಮಧೂರು ಪಂಚಾಯತ್ 14, ವರ್ಕಾಡಿ ಪಂಚಾಯತ್ 1, ಪುತ್ತಿಗೆ ಪಂಚಾಯತ್ 12, ಪೈವಳಿಕೆ ಪಂಚಾಯತ್ 3, ಮೊಗ್ರಾಲ್ ಪುತ್ತೂರು ಪಂಚಾಯತ್ 5, ಮಂಜೇಶ್ವರ ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 2, ಕುಂಬಳೆ ಪಂಚಾಯತ್ 9, ಕಾರಡ್ಕ ಪಂಚಾಯತ್ 1, ಚೆಂಗಳ ಪಂಚಾಯತ್ 8, ಚೆಮ್ನಾಡ್ ಪಂಚಾಯತ್19, ಬೆಳ್ಳೂರು ಪಂಚಾಯತ್ 1, ಬೇಡಡ್ಕ ಪಂಚಾಯತ್ 4, ಬದಿಯಡ್ಕ ಪಂಚಾಯತ್ 2, ಕಾಞಂಗಾಡ್ ನಗರಸಭೆ 26, ಅಜಾನೂರು ಪಂಚಾಯತ್ 23, ಬಳಾಲ್ ಪಂಚಾಯತ್ 6, ಚೆರುವತ್ತೂರು ಪಂಚಾಯತ್ 8, ಕಳ್ಳಾರ್ ಪಂಚಾಯತ್ 4, ಮಡಿಕೈ ಪಂಚಾಯತ್ 6, ಪಡನ್ನ ಪಂಚಾಯತ್ 9, ಪಳ್ಳಿಕ್ಕರೆ ಪಂಚಾಯತ್ 13, ಪಿಲಿಕೋಡ್ ಪಂಚಾಯತ್ 5, ಉದುಮಾ ಪಂಚಾಯತ್ 14, ನೀಲೇಶ್ವರ ನಗರಸಭೆ 24, ವೆಸ್ಟ್ ಏಳೇರಿ ಪಂಚಾಯತ್ 6, ವಲಿಯಪರಂಬ ಪಂಚಾಯತ್ 5, ತ್ರಿಕರಿಪುರ ಪಂಚಾಯತ್ 6, ಪುಲ್ಲೂರು-ಪೆರಿಯ ಪಂಚಾಯತ್ 23, ಕೋಡೋಂ-ಬೆಳೂರು ಪಂಚಾಯತ್ 4, ಕಿನಾನೂರು-ಕರಿಂದಲಂ ಪಂಚಾಯತ್ 4, ಈಸ್ಟ್ ಏಳೇರಿ ಪಂಚಾಯತ್ 2 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
4468 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ 4468 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3802, ಸಾಂಸ್ಥಿಕವಾಗಿ 666 ಮಂದಿ ನಿಗಾದಲ್ಲಿರುವರು. ನೂತನವಾಗಿ 369 ಮಂದಿ ಮಂಗಳವಾರ ನಿಗಾ ಪ್ರವೇಶಿಸಿದ್ದಾರೆ. 439 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1121 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 319 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಒಟ್ಟು ಗಣನೆ:
ಕಾಸರಗೊಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 18988 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 17281 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 17213 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 1448 ಮಂದಿ ಕೋವಿಡ್ ಚಿಕಿತ್ಸೆಯಲ್ಲಿದೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 197 ಆಗಿದೆ.